ಮೈಸೂರು:30 ಅಕ್ಟೋಬರ್ 2021
ನ@ದಿನಿ
ಕರ್ನಾಟಕ ಸೇನಾ ಪಡೆ ವತಿಯಿಂದ ಕನ್ನಡ ಚಲನಚಿತ್ರರಂಗದ ಯುವರತ್ನ ಪುನೀತ್ ರಾಜಕುಮಾರ್ ರವರ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
ಕನ್ನಡನಾಡಿಗೆ, ಚಿತ್ರರಂಗಕ್ಕೆ ಅಪಾರ ನಷ್ಟವುಂಟಾಗಿದೆ. ಕನ್ನಡ ಚಿತ್ರರಂಗದ ಅಪರೂಪದ ಮರೆಯದ ಮಾಣಿಕ್ಯ, ರಾಷ್ಟ್ರಪ್ರಶಸ್ತಿ ವಿಜೇತ, ಜತೆಗೆ ಅನೇಕ ಅನಾಥಾಶ್ರಮ, ಉಚಿತಶಾಲೆ, ವೃಧ್ದಾಶ್ರಮಗಳನ್ನು ನೋಡಿಕೊಳ್ಳುತ್ತಿದ್ದ ಏಕೈಕ ಕನ್ನಡದ ನಟ, ಅಜಾತ ಶತ್ರು, ಕೋಟ್ಯಾಂತರ ಅಭಿಮಾನಿಗಳನ್ನು ಬಿಟ್ಟು ಅಗಲಿದ್ದು, ಅವರ ಅತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೂ ಹಾಗೂ ಅವರ ಕೋಟ್ಯಾಂತರ ಅಭಿಮಾನಿಗಳಿಗೆ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಮೈಸೂರಿನ ಅಗ್ರಹಾರ ವೃತ್ತ ದಲ್ಲಿ ಕರ್ನಾಟಕ ಸೇನಾ ಪಡೆ ವತಿಯಿಂದ ಭಾವಪೂರ್ಣ ಶೃದ್ದಾಂಜಲಿ ಸಲ್ಲಿಸಲಾಯಿತು.
ಶೃದ್ದಾಂಜಲಿ ಕಾರ್ಯಕ್ರಮ ದಲ್ಲಿ ನಾಡಪ್ರಭು ಕೆಂಪೇಗೌಡ ಸಹಕಾರ ಸಂಘದ ಅಧ್ಯಕ್ಷ ಸಿ. ಜಿ ಗಂಗಾಧರ, ಹಿರಿಯ ಸಮಾಜ ಸೇವಕ ಡಾ. ರಘುರಾಂ ಕೆ ವಾಜಪೇಯಿ, ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಪಾರ್ಥಸಾರಥಿ, ಡಾ ಶಾಂತರಾಜೇಅರಸ್, ಕುಮಾರ್ ಗೌಡ, ಪ್ರಭುಶಂಕರ್, ವಿಜಯೇಂದ್ರ, ಎಳನೀರು ರಾಮಣ್ಣ, ಚಂದ್ರ ಎಂ ಜೆ, ಸುಶೀಲಾ ನಂಜಪ್ಪ, ಮಂಜುನಾಥ್, ಸುಬ್ಬೇಗೌಡ, ದರ್ಶನ್ ಗೌಡ, ಬಸವರಾಜು, ಮಿನಿ ಬಂಗಾರಪ್ಪ, ಪ್ರಭಾಕರ್, ಗಣೇಶ್ ಪ್ರಸಾದ್ ಇನ್ನೂ ಇತರರು ಉಪಸ್ಥಿತರಿದ್ದರು.