ಮೈಸೂರು:8 ನವೆಂಬರ್ 2021
ನಂದಿನಿ
ವೈಷ್ಣವಿ ಸರ್ವೀಸ್ ಸ್ಟೇಷನ್ ಹಾಗೂ ಪುನೀತ್ ರಾಜ್ ಕುಮಾರ್ ಅಭಿಮಾನಿ ಬಳಗದಿಂದ ಪುನೀತ್ ಪುಣ್ಯ ತಿಥಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಮೈಸೂರಿನ ಆರ್.ಟಿ.ಓ ಸರ್ಕಲ್ ಬಳಿ ಇರುವ ಪೆಟ್ರೋಲ್ ಬಂಕ್ ನಲ್ಲಿ ಪುನೀತ್ ರಾಜ್ ಕುಮಾರ್ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯುವ ಮೂಲಕ ನಮನ ಸಲ್ಲಿಸಿದರು.ನಂತರ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.
ಬಂಕ್ ಮ್ಯಾನೇಜರ್ ಮೋಹಿತ್ ರಾಘವೇಂದ್ರ ಆರ್.ಟಿ.ಓ ಪೆಟ್ರೋಲ್ ಬಂಕ್ ಬಸವರಾಜು(ಗಿರಿ),ಮಹೇಶ್, ಸಿದ್ದರಾಜು, ಮೋಹನ್,ಹರೀಶ್ ಮತ್ತು ಸ್ನೇಹ ಬಳಗ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.