ಮೈಸೂರು:8 ನವೆಂಬರ್ 2021
ನಂದಿನಿ
ಪುನೀತ್ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡುವ ಮೂಲಕ ಮೈಸೂರಿನಲ್ಲಿ ಪುನೀತ್ 11 ದಿನದ ಕಾರ್ಯ ನೇರವೇರಿಸಲಾಯಿತು.
ಲೋಕನಾಯಕನಗರ ಹೆಬ್ಬಾಳ್ ನಲ್ಲಿ ವಿಜಯಲಕ್ಷ್ಮಿ ಚಿಕನ್ ಸೆಂಟರ್ ಮಾಲೀಕ ಅರವಿಂದ್ ಶಂಕರೇಗೌಡ್ರು ಮತ್ತು ಅಪ್ಪು ಅಭಿಮಾನಿಗಳ ಬಳಗ ದಿ.ನಟ ಪುನೀತ್ ರಾಜ್ ಕುಮಾರ್ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಪಾಲಿಕೆ ಸದಸ್ಯ ಪೈಲ್ವಾನ್ ಶ್ರೀನಿವಾಸ್ ಮಾತನಾಡಿ ನಟ ಪುನೀತ್ ರಾಜ್‍ಕುಮಾರ್ ಅಗಲಿ ಇಂದಿಗೆ 11 ದಿನಗಳು.ಇಂದು ಅವರ ಪುಣ್ಯ ತಿಥಿ ಕಾರ್ಯಕ್ರಮವನ್ನ ಅರವಿಂದ್ ಶಂಕರೇಗೌಡ್ರು ಆಯೋಜಿಸಿದ್ದಾರೆ.ಪುನೀತ್ ಅಗಲಿಕೆಗೆ ಚಿತ್ರರಂಗವಲ್ಲದೇ ಇಡೀ ದೇಶವೇ ಕಂಬನಿ ಮಿಡಿದಿದೆ.ಮತ್ತೆ ಹುಟ್ಟಿ ಬನ್ನಿ ಅಪ್ಪು ಎಂದರು.
ಪುನೀತ್ ಸಂಬಂಧಿ ಶಂಕರ್ ಮಾತನಾಡಿ ಕನ್ನಡ ಚಿತ್ರರಂಗದ ಅದ್ಭುತ ಕಲಾವಿದ ಅಪ್ಪು.ಪುನೀತ್ ರಾಜ್ ಕುಮಾರ್ ರವರು 1800 ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ, ಅನಾಥಾಶ್ರಮ,ವೃದ್ದಾಶ್ರಮ ಅನೇಕ ಸಮಾಜಸೇವೆ ಮಾಡುತ್ತಿದ್ರೂ.ಆ ವಿಚಾರ ಯಾರಿಗೂ ತಿಳಿಸಿರಲಿಲ್ಲ.ಅವರ ನಿಧನದ ನಂತರ ವಿಷಯ ತಿಳಿದಿದೆ. ಅಪ್ಪು ಅಜರಾಮರ ಎಂದರು.
ನಂತರ ಅಭಿಮಾನಿಗಳು ಒಟ್ಟಿಗೆ ಸೇರಿ ಅನ್ನ ಸಂತರ್ಪಣೆ ಮಾಡಿದರು.
ಕಾರ್ಯಕ್ರಮದಲ್ಲಿ ಶ್ರೀನಿವಾಸ್ ಗೌಡ ಎಚ್,ಅಂಗಡಿ ರಾಜೇಶ್,ಆನಂದ್,ಭಾನು ಪ್ರಕಾಶ್, ಮಹದೇವ್, ಬಸವರಾಜು,ಮಂಡ್ಯ ವೆಂಕಟೇಶ್,ನಾಗೇಂದ್ರ ಕಾವ್ಯ ಸ್ಟೂಡಿಯೋ, ರವಿ ಎನ್.ಆರ್ ಮೊಹಲ್ಲಾ ಹಾಗೂ ಲೋಕನಾಯಕನಗರದ ನಿವಾಸಿಗಳು ಭಾಗಿಯಾಗಿದ್ದರು.