ಉಮೇಶ್. ಬಿ.ನೂರಲಕುಪ್ಪೆ/ ನಂದಿನಿ ಮೈಸೂರು
ಕಾಲೇಜು ವಿಧ್ಯಾರ್ಥಿ ಹಾಸ್ಟೇಲ್ ನಲ್ಲಿ ನೇಣಿಗೆ ಶರಣು.
ಸಾವಿನ ಸುತ್ತ ಅನುಮಾನದ ಹುತ್ತಾ ಕುಟುಂಬಸ್ಥರ ಆಕ್ರಂದನ .
ಎಚ್.ಡಿ.ಕೋಟೆ ಪಟ್ಟಣದ ಕೃಷ್ಣಾಪುರದ ಬಾಲಕರ ವಸತಿ ನಿಲಯದಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ವಿಧ್ಯಾರ್ಥಿ ನೇಣಿಗೆ ಶರಣಾಗಿದ್ದಾನೆ.
ಅಂತರಸಂತೆ ಹೋಬಳಿಯ ಮಾರನಹಾಡಿ ಆದಿವಾಸಿ ನಿಂಗರಾಜು ಮತ್ತು ಮಂಗಳಮ್ಮ ರವರ ನಾಲ್ಕನೇ ಮಗ ಆಕಾಶ್ ( 17 ವರ್ಷ) ಪ್ರಥಮ ಪಿಯುಸಿ ಓದುತ್ತಿದ್ದು. ಕಳೆದ ಶನಿವಾರ ರಜೆಯ ಮೇಲೆ ಊರಿಗೆ ಹೋದ ಆಕಾಶ್ ಇಂದು ಬೆಳ್ಳಿಗ್ಗೆ ಮನೆಯಿಂದ ತನ್ನ ಅಣ್ಣನ ಮೂಲಕ ಬೈಕ್ ನಲ್ಲಿ ಹಾಡಿಯಿಂದ ಮಳಲಿ ಗೇಟ್ಗೆ ಡ್ರಾಪ್ ತೆಗೆದುಕೊಂಡು ನಂತರ ಬಸ್ಸಿನಲ್ಲಿ ಕೋಟೆಗೆ ಬಂದು ಸುಮಾರು 10:30ಕ್ಕೆ ತನ್ನ ತಂದೆ ಮೊಬೈಲ್ ಗೆ ಕರೆಮಾಡಿ ಅಪ್ಪ ಹಾಸ್ಟೇಲ್ ಸಿಪ್ಟ್ ಮಾಡಿದ್ದಾರೆ. ನನ್ನೂಬ್ಬನಿಗೆ ಸಾಮಾನು ತೆಗೆದುಕೊಂಡು ಹೋಗಲು ಆಗುತ್ತಿಲ್ಲ ಅಣ್ಣನನ್ನು ಕಳಿಸು ಎಂದು ಹೇಳಲಾಗಿ ನಂತರ ತಂದೆ ಅಣ್ಣನಾದ ನಂದೀಶ್ ನನ್ನು ಬೈಕಿನಲ್ಲಿ ಕಳಿಸಲಾಯಿತು.
ಸುಮಾರು 11:45ಸಮಯಕ್ಕೆ ಹಾಸ್ಟೆಲ್ ಹತ್ತಿರ ಬಂದ ನಂದೀಶ್ ಹಾಸ್ಟೆಲ್ ನಲ್ಲಿ ಯಾರು ಇಲ್ಲದನ್ನು ನೋಡಿ ಗಾಬರಿಯಾಗಿ ಮೇಲ್ಮಡಿ ಹತ್ತಿ ಕೊಠಡಿಯಲ್ಲಿ ನೋಡಲಾಗಿ ಬೆಡ್ ಶಿಟ್ ನಿಂದ ಪ್ಯಾನಿಗೆ ನೇತುಹಾಕಿ ಕೊಂಡಿದ್ದ ತಮ್ಮನ ದೇಹವನ್ನು ಕಂಡ ನಂದೀಶ್ ದಡಬಡನೇ ಬಾಗಿಲು ತೆಗೆದು ಹಗ್ಗವನ್ನು ಕಟ್ ಮಾಡಿ ಉಸಿರಿರಬಹುದೆಂದು ತಮ್ಮನ ದೇಹವನ್ನು ನೆಲಮಹಡಿಯ ಮುಖ್ಯಗೇಟ್ ತನಕ ತಾನೂಬ್ಬನೇ ಹೊತ್ತು ತರಲಾಗಿ ಅಷ್ಟರಲ್ಲಿ ಅಕ್ಕಪಕ್ಕದ ಮನೆಯವರು ನೋಡಿ ಗಾಬರಿಯಿಂದ ಓಡಿ ಬಂದು ಆಕಾಶ್ ಸತ್ತಿರುವುದು ಕಂಡುಬಂದಿದೆ.
ಈಗ ಆಕಾಶ್ ನಿಗೂಢವಾಗಿ ಸತ್ತಿರುವುದು ಹಲವಾರು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಆಕಾಶ್ ನೇಣಿಗೆ ಶರಣಾದ ವಿಷಯ ತಿಳಿದ ಕುಟುಂಬದವರು ಮತ್ತು ಅವನ ಸ್ನೇಹಿತರು ಅನುಮಾನ ವ್ಯಕ್ತಪಡಿಸುತ್ತಿದ್ದರೆ. ಶಾಲಾ ಕಾಲೇಜು ದಿನಗಳಲ್ಲಿ ಆಕಾಶ್ ಸಭ್ಯನಾಗಿದ್ದ. ಓದಿನಲ್ಲಿ ಮುಂದೆ ಇದ್ದ. ಮತ್ತೆ ಇಂಜಿನಿಯರ್ ಆಗಬೇಕೆಂಬ ಕನಸು ಕಂಡಿದ್ದ. ಯಾರೋಂದಿಗೂ ಗಲಾಟೆ ಘರ್ಷಣೆ ಮಾಡಿಕೊಂಡವನಲ್ಲ. ಹಾಗೆ ಮನೆಯಲ್ಲೂ ಸೌಮ್ಯ ಸ್ವಭಾವದವನಾಗಿದ್ದ. ಆದರೆ ಹಾಸ್ಟೆಲ್ ನಲ್ಲಿ ನೇಣುಹಾಕಿ ಸಾಯುವ ಪರಿಸ್ಥಿತಿ ಅವನಿಗೇನಿತ್ತು. ಎಂದು ವಾರ್ಡನ್ ಮತ್ತು ಅಡುಗೆಯವರ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.
ಸಧ್ಯಈಗ ಪ್ರಕರಣವನ್ನು ಪೋಲಿಸ್ ದಾಖಲಿಸಿಕೊಂಡಿದ್ದು ತನಿಖೆಯಿಂದ ಸತ್ಯಾ ಸತ್ತೆತೆ ಹೋರಬರಬೇಕಾಗಿದೆ.