ಕೀಳನಪುರ ಶಾಲೆಯಲ್ಲಿ “ಮಕ್ಕಳ ವಿಶೇಷ ಗ್ರಾಮಸಭೆ”

 

ನಂದಿನಿ ಮೈಸೂರು

ಕೀಳನಪುರ ಗ್ರಾಮ ಪಂಚಾಯ್ತಿ ಮತ್ತು ಆರ್,ಎಲ್,ಹೆಚ್, ಪೀ -ಚೈಲ್ಡ್ ಲೈನ್-1098 ವತಿಯಿಂದ ಕೀಳನಪುರ ಗ್ರಾಮ ಪಂಚಾಯ್ತಿಯಲ್ಲಿ “ಮಕ್ಕಳ ವಿಶೇಷ ಗ್ರಾಮಸಭೆ”ಯನ್ನು ನಡೆಸಲಾಯಿತು.

,ಕಾರ್ಯಕ್ರಮದ ಪ್ರಸ್ತಾವಿಕ ನುಡಿಯನ್ನು ಶ್ರೀ ಶಶಿಕುಮಾರ್ ಸಂಯೋಜಕರು ಚೈಲ್ಡ್ ಲೈನ್ ಮಾತನಾಡುತ್ತಾ ಗ್ರಾಮ ಮಕ್ಕಳ ಗ್ರಾಮ ಸಭೆಯ ಹಿನ್ನೆಲೆ ಉದ್ದೇಶ ಮತ್ತು ಮಕ್ಕಳ ಹಕ್ಕುಗಳ ಕುರಿತು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಕ್ಕಳು ತಮ್ಮ ಸಮಸ್ಯೆಗಳ ಕುರಿತು ತಿಳಿಸಿದರು. ಸಮಸ್ಯೆಗಳೆಂದರೆ 6 ಮಕ್ಕಳು ಶಾಲೆಗೆ ಬರುತ್ತಿಲ್ಲ. ಶಾಲೆಯ ಮುಂದೆ ಚರಂಡಿ ಕಟ್ಟಿಕೊಂಡಿದ್ದು ತುಂಬ ದುರ್ವಾಸನೆ ಬರುತ್ತಿದೆ, ಕುಡಿಯಲು ಶುದ್ಧ ನೀರಿನ ವ್ಯವಸ್ಥೆ, ಬೀದಿ ದೀಪಗಳ ವ್ಯವಸ್ಥೆ, ಬಾಲ್ಯ ವಿವಾಹ ದ ಕಾನೂನುಗಳು ಮತ್ತು ಪರಿಣಾಮಗಳು. ಶಾಲೆಯ ಕಾಂಪೌಂಡ್ ಒಳಗಡೆ ಹೊರಗಿನವರು ಬಂದು ಮದ್ಯ ಕುಡಿಯುವುದು, ದುಮೃಪಾನ ಮಾಡುವುದು,ಸ್ಯಾನಿಟರಿ ಪ್ಯಾಡ್, ಇತರೆ ಸಮಸ್ಯೆಗಳ ಕುರಿತು ಮಕ್ಕಳು ಧ್ವನಿ ಎತ್ತಿದರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಶ್ರೀಮತಿ ಸಕ್ಕುಬಾಯಿ ರವರು ಮಾತನಾಡಿ ಇತ್ತೀಚಿನ ದಿನದಲ್ಲಿ ಮಕ್ಕಳು ಭಾಗವಹಿಸುವಿಕೆ ತುಂಬಾ ಉತ್ತಮವಾಗಿದೆ ಮಕ್ಕಳು ಹೇಳಿಕೊಂಡಿರುವ ಸಮಸ್ಯೆಗಳಿಗೆ ಗ್ರಾಮ ಪಂಚಾಯಿತಿ ವತಿಯಿಂದ ತುರ್ತಾಗಿ ಕ್ರಮವಹಿಸುತ್ತೇವೆ ಮತ್ತು ಮಕ್ಕಳು ಶಿಕ್ಷಣದ ಕಡೆಗೆ ಹೆಚ್ಚಿನ ಮಹತ್ವವನ್ನು ಕೊಡಿರಿ ಎಂದು ತಿಳಿಸಿದರು.ಮತ್ತು ಕಾರ್ಯದರ್ಶಿಗಳು ಸಮಸ್ಯೆಗಳ ಕುರಿತು ತುರ್ತು ಬಗೆಹರಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಶ್ರೀಮತಿ ಸಕ್ಕುಬಾಯಿ, ರಾಘವೇಂದ್ರ ಸಹಾಯಕ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು, ಲಕ್ಷ್ಮಿನರಸಿಂಹ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಹಿಳಾ ಪೊಲೀಸ್ ಠಾಣೆ ಮೈಸೂರು,
ಶ್ರೀ ರಾಮ್ ಪ್ರಸಾದ್ ಮಕ್ಕಳ ವಿಶೇಷ ಪೊಲೀಸ್ ಘಟಕ, ವೆಂಕಟೇಶ್, ಕಿರಣ್, ಆರೋಗ್ಯ ಅಧಿಕಾರಿಗಳು,ಸರ್ಕಾರಿ ನೌಕರರ ಸಂಘದ ಹಿರಿಯ ಉಪಾಧ್ಯಕ್ಷರಾದ ಮಾಲಿಂಗಿ ಸುರೇಶ್ ,ಮೈಸೂರು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಖಜಾಂಚಿ ಮಹದೇವ್ CRP ಶ್ರೀಮತಿ ಶಿಲ್ಪ ,ಶಾಲೆಯ ಶಿಕ್ಷಕರುಗಳು, ಗ್ರಾಮ ಪಂಚಾಯತಿ ಉಪಾಧ್ಯಕ್ಷರು, ಸದಸ್ಯರು, ಅಂಗನವಾಡಿ ಕಾರ್ಯಕರ್ತರು ಆಶಾ ಕಾರ್ಯಕರ್ತೆಯರು ಮತ್ತು 13 ಹಳ್ಳಿಗಳಿಂದ ಮಕ್ಕಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *