ಗ್ಯಾಸ್, ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕರ್ನಾಟಕ ಸೇನಾ ಪಡೆ ಪ್ರತಿಭಟನೆ

 

 

ಮೈಸೂರು:7 ಸೆಪ್ಟೆಂಬರ್ 2021

ನ@ದಿನಿ

ಗ್ಯಾಸ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಕರ್ನಾಟಕ ಸೇನಾ ಪಡೆಯಿಂದ ಪ್ರತಿಭಟನೆ ನಡೆಯಿತು.

ಜಿಲ್ಲಾಧಿಕಾರಿಗಳ ಕಛೇರಿ ಎದುರು ಇಂದು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಕೇಂದ್ರದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ದೇಶದ ಜನತೆಗೆ ಅಚ್ಛೇ ದಿನಗಳು ಬರುತ್ತವೆ ಎಂದು ಹೇಳಿ ಮಧ್ಯಮ ವರ್ಗದವರಿಗೆ ಅತಿ ಅವಶ್ಯಕವಾದ ವಸ್ತುಗಳಾದ ಗ್ಯಾಸ್, ಪೆಟ್ರೋಲ್-ಡೀಸಲ್, ಅಡುಗೆ ಎಣ್ಣೆ, ಬೇಳೆಕಾಳುಗಳ ಬೆಲೆಗಳನ್ನು ದಿನದಿಂದ ದಿನಕ್ಕೆ ಏರಿಕೆ ಮಾಡುತ್ತಲೇ ಹೊರಟಿರುವುದು ಅತ್ಯಂತ ಖಂಡನೀಯ ಎಂದರು.

ಕೇಂದ್ರದ ಬಿಜೆಪಿ ಆಡಳಿತದಿಂದ ನಗರವಾಸಿಗಳ ಮಧ್ಯಮ ಜನರ ಬದುಕು ನರಕವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲದ ಬೆಲೆ ಭಾರೀ ಪ್ರಮಾಣದಲ್ಲಿ ಇಳಿಕೆ ಆಗುತ್ತಿದ್ದರೂ ಕೇಂದ್ರ ಸರಕಾರ ದಿನೇದಿನೇ ಪೆಟ್ರೋಲ್, ಡೀಸಲ್, ಗ್ಯಾಸ್ ಬೆಲೆಗಳನ್ನು ಏರಿಸುತ್ತಿರುವುದು ಅತ್ಯಂತ ನೋವಿನ ಸಂಗತಿ, ಎಲ್ಲ ಅಗತ್ಯ ವಸ್ತುಗಳ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಅಡುಗೆ ಅನಿಲ ಬೆಲೆ ಕೂಡ 2 ವಾರದ ಅವಧಿಯಲ್ಲಿ 50 ರೂ. ಹೆಚ್ಚಾಗಿದೆ. ಜತೆಗೆ ವಿದ್ಯುತ್ ದರ ಶೇಕಡಾ 30 ರಷ್ಟು ಹೆಚ್ಚಾಗಿದೆ. ಕೇಂದ್ರದ ಬಿಜೆಪಿ ಸರ್ಕಾರ ಹೇಳುತ್ತಿದ್ದ ಅಚ್ಛೇ ದಿನ್ ಇದೇನಾ ಎಂದು ಪ್ರಶ್ನಿಸಿದರು.

ದಿನೇದಿನೇ ಕೇಂದ್ರ ಸರ್ಕಾರ ಅತಿ ಅಗತ್ಯ ವಸ್ತುಗಳ ಬೆಲೆಯನ್ನು ಏರಿಸುತ್ತಾ ಹೋಗುತ್ತಿದೆ, ಆದರೆ ಜನರ ಆದಾಯ ಮಟ್ಟವನ್ನು ಕೇಂದ್ರ ಏರಿಕೆ ಮಾಡುತ್ತಲೇ ಇಲ್ಲ. ಉದಾಹರಣೆಗೆ ಕೂಲಿಕಾರ್ಮಿಕರು, ಆಟೋಚಾಲಕರ ಆದಾಯ ಅಷ್ಟಷ್ಟೇ ಇದೆ, ಜನರ ಆದಾಯ ಈಗಿನ ಪರಿಸ್ಥಿತಿಯಲ್ಲಿ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಕೋವಿಡ್ ನಿಂದಾಗಿ ಕೋಟ್ಯಂತರ ಜನರು ದೇಶದಲ್ಲಿ ಕೆಲಸ ಕಳೆದುಕೊಂಡು ಬೀದಿಗೆ ಬಂದು, ಒಂದು ಹೊತ್ತು ಊಟಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ಇಂತಹ ಸಮಯದಲ್ಲಿ ಸರ್ಕಾರ, ಮಂತ್ರಿಗಳು ಜನರಿಗೋಸ್ಕರ ಬೆಲೆ ನಿಯಂತ್ರಣ ಮಾಡಿ ರಾಜ್ಯದ ಪ್ರಜೆಗಳಿಗೆ ಅತಿ ಅಗತ್ಯ ವಸ್ತುಗಳ ಬೆಲೆಗಳು ಹೊರೆ ಆಗದಂತ ನೋಡಿಕೊಳ್ಳುವುದು ಅವರ ಕರ್ತವ್ಯ, ಆದರೆ ಈ ಮಂತ್ರಿಗಳು, ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡು ಜನಸಾಮಾನ್ಯರು ಬೆಲೆ ಏರಿಕೆ ಬಗ್ಗೆ ಏನೂ ಮಾತನಾಡುತ್ತಿಲ್ಲ. ಯಾರಿಗೂ ಏನೂ ಹೊರೆಬಿದ್ದಿಲ್ಲ, ಯಾರೂ ಬೆಲೆ ಏರಿಕೆಯಿಂದ ಬೀದಿಗೆ ಬಂದಿಲ್ಲ ” ಎಂದು ಉಡಾಫೆಯ ಹಗುರವಾದ ಹೇಳಿಕೆಗಳನ್ನು ಮಾಧ್ಯಮಗಳಿಗೆ ನೀಡುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದರು.

ಹಲವಾರು ಸಂದರ್ಭಗಳಲ್ಲಿ ಪ್ರಧಾನಿಯವರು ನಮ್ಮ ದೇಶದ ಜಿಡಿಪಿ ಏರಿಕೆಯಾಗುತ್ತಿದೆ ಎಂದು ಹೇಳುತ್ತಿರುತ್ತಾರೆ, ಆದರೆ ಅವರು ಹೇಳುತ್ತಿರುವ ಜಿ ಡಿ ಪಿ ಎಂದರೆ ಗ್ಯಾಸ್, ಡೀಸಲ್, ಪೆಟ್ರೋಲ್ ಎಂದು ನಮಗೆ ಗೊತ್ತಿರಲಿಲ್ಲ. ಜೊತೆಗೆ ಪ್ರಧಾನಿಯವರು ಸರಕಾರಕ್ಕೆ ಆದಾಯ ಬರುವ ಎಲ್ಲಾ ವಸ್ತುಗಳನ್ನು ಜಿಎಸ್ಟಿ ವ್ಯಾಪ್ತಿಗೆ ತಂದು ದೇಶದ ಜನರಿಗೆ ಆದಾಯ ವಾಗುವ ಪೆಟ್ರೋಲ್, ಡೀಸೆಲ್, ಗ್ಯಾಸ್ ಅನ್ನು ಜಿಎಸ್ಟಿ ವ್ಯಾಪ್ತಿಗೆ ಸೇರಿಸದಿರುವುದು ವಿಷಾದನೀಯ ಸಂಗತಿ. ಇವರಿಗೆ ನಿಜವಾಗಿ ದೇಶದ ಸಾಮಾನ್ಯ ಜನರಿಗೆ ಅಚ್ಛೇ ದಿನಗಳು ಬರುವುದು ಇಷ್ಟವಿಲ್ಲ, ಪ್ರಧಾನಿಯವರಿಗೆ ನಿಜವಾಗಿಯೂ ದೇಶದ ಸಾಮಾನ್ಯ ಜನರ ಮೇಲೆ ಕಾಳಜಿ ಇದ್ದರೆ, ಈ ಕೂಡಲೇ ಪೆಟ್ರೋಲ್, ಡೀಸೆಲ್, ಗ್ಯಾಸ್ ಅನ್ನು ಜಿಎಸ್ಪಿ ವ್ಯಾಪ್ತಿಗೆ ಸೇರಿಸಬೇಕೆಂದು ಜಿಲ್ಲಾಧಿಕಾರಿಗಳ ಮುಖಾಂತರ ಸಮಸ್ತ ದೇಶದ ನಾಗರೀಕರ ಪರವಾಗಿ ಮನವಿಯನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಡಾ‌ ಶಾಂತರಾಜೇಅರಸ್ ಪಿ ಡಾ.ಮೊಗಣ್ಣಾಚಾರ್, ವಿಜಯೇಂದ್ರ, ಯೋಗೀಶ್ ಎಸ್, ಪ್ರಜೀಶ್ ಪಿ, ಬಸವರಾಜು, ಚಂದ್ರ ಎಂ ಜೆ, ದರ್ಶನ್ ಗೌಡ, ಎಳನೀರು ರಾಮಣ್ಣ, ಮಿನಿ ಬಂಗಾರಪ್ಪ, ಗೊರೂರು ಮಲ್ಲೇಶ್ ಹಾಗೂ ಸುಂದರ್, ಮಂಜುನಾಥ್, ರಮೇಶ್ ಟಿ, ರಾಧಾಕೃಷ್ಣ, ಮನು ನಾಯಕ್, ರಘುರಾಂ ಎಂ, ಸ್ವಾಮಿ, ಕೆ ಆರ್.ಮಿಲ್ ಅನಂದ್, ಸೋಮಶೇಖರ್, ಕುಮಾರ್ ಗೌಡ, ಗುರುಮಲ್ಲಪ್ಪ, ರವಿ ನಾಯಕ್, ನಂದಕುಮಾರ್, ಭರತ್ ಡೀನ್, ಗಣೇಶ್ ಪ್ರಸಾದ್, ವಿಜಯದೇವರಾಜೇ ಅರಸ್, ಪ್ರದೀಪ್, ದೀಪಕ್, ಕಲೀಂ ಹಾಗೂ ಪ್ರಭಾಕರ್ ಮತ್ತಿತರರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *