ಬಯರ್ದೆಶೆಗೆಂದು ತೆರಳಿದ ಯುವಕನನ್ನ ಕೊಂದು ಹಾಕಿದ ಹುಲಿ

 

ಹುಣಸೂರು: 8 ಸೆಪ್ಟೆಂಬರ್ 2021

ದಾ ರಾ ಮಹೇಶ್

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಹುಣಸೂರು ಅರಣ್ಯ ವಲಯದ ಅಯ್ಯನಕೆರೆ ಹಾಡಿಯಲ್ಲಿ ಹುಲಿ ಯುವಕನ ಮೇಲೆ ದಾಳಿ ನಡೆಸಿದ್ದು ಗಣೇಶ ಸ್ಥಳದಲ್ಲಿ ಉಸಿರು ಚೆಲ್ಲಿದ್ದಾನೆ.

ಇಂದು ಬೆಳಗ್ಗೆ ಸುಮಾರು 9 ಗಂಟೆ ಸಮಯದಲ್ಲಿ ಬಯರ್ದೆಶೆಗೆ ಎಂದು ತೆರಳಿದ ಯುವಕ 12 ಗಂಟೆಯಾದರೂ ಬಾರದೆ ಇದ್ದಾಗ ತಾಯಿ ಗೀತಾ ಅವರು ಹುಡುಕಿಕೊಂಡು ಅರಣ್ಯದ ಕಡೆ ಹೊರಟಾಗ ಹುಲಿಯಿಂದ ದಾಳಿಯಾಗಿ ಬಿದ್ದಿರುವ ಶವನ್ನು ನೋಡಿ ಕಿರುಚಿಕೊಂಡಾಗ ಹಾಡಿಯ ಗ್ರಾಮಸ್ಥರೆಲ್ಲರೂ ಹತ್ತಿರ ಹೋಗಿ ನೋಡಿ ಹುಲಿ ದಾಳಿ ಮಾಡಿರುವುದು ಖಚಿತಪಡಿಸಿಕೊಂಡು. ತಕ್ಷಣ ಅರಣ್ಯ ಇಲಾಖೆಗೆ ತಿಳಿಸಿ ಅರಣ್ಯ ಇಲಾಖೆಯ ಆರ್ ಎಪ್ ಓ ಹನುಮಂತಪ್ಪ ಮತ್ತು ಸಿಬ್ಬಂದಿವರ್ಗ ಸ್ಥಳಕ್ಕೆ ಬಂದು ಮೇಲಧಿಕಾರಿಗಳ ಗಮನಕ್ಕೆ ತಂದು ಸಾಕಾನೆಗಳ ಸಹಾಯದಿಂದ ಹುಲಿಯನ್ನು ಹಿಡಿಯಲು ಕ್ರಮ ವಹಿಸಲಾಗುವುದು ಎಂದರು .ಸ್ಥಳೀಯ ಹಾಡಿಯ ಗ್ರಾಮಸ್ಥರು ಒಂದು ವರ್ಷದಲ್ಲಿ ಎರಡು ಪ್ರಾಣಗಳನ್ನು ಹುಲಿ ಬಲಿ ತೆಗೆದುಕೊಂಡಿದೆ ಹುಲಿಯ ಹಿಡಿಯೋ ಕೆಲಸ ಆಗಬೇಕು ಎಂದು ಜೆ ಟಿ ರಾಜಪ್ಪ ಒತ್ತಾಯಿಸಿದ್ದಾರೆ .

ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವವರೆಗೂ ಮೃತನ ದೇಹ ಎತ್ತಲು ಅವಕಾಶ ಕೊಡುವುದಿಲ್ಲ ಎಂದು ಹಾಗೂ ಹಾಡಿಯ ಜನರು ಭಯಭೀತರಾಗಿದ್ದು ಹುಲಿಯನ್ನು ಹಿಡಿಯಲು ಕಾರ್ಯಪ್ರವೃತ್ತರಾಗಬೇಕು ಎಂದು ಒತ್ತಾಯಿಸಿದರು ಮೃತನ ತಾಯಿ ಲಕ್ಷ್ಮಿಯವರು ಪತ್ರಿಕೆಯಲ್ಲಿ ಮಾತನಾಡಿ ಬೆಳೆಗೆ ಊಟ ಮಾಡಲು ಕೂಗಿದೆ ಬಹಿರ್ದೆಸೆಗೆ ಹೋಗಿ ಬರುತ್ತೇನೆಂದು ನಂತರ ಊಟ ಮಾಡುತ್ತೇನೆ ಎಂದು ಹೊಂದವ ಹೆಣವಾಗಿದ್ದಾನೆ.ಸ್ಥಳದಲ್ಲಿ ಕುಟುಂಬಸ್ಥರಆಕ್ರಂದನ ಮುಗಿಲು ಮುಟ್ಟಿತ್ತು.

Leave a Reply

Your email address will not be published. Required fields are marked *