ಅಧ್ಯಕ್ಷರಿಗೆ ಪ್ರತಿಯೊಬ್ಬರು ಬೆನ್ನೆಲುಬಾಗಿ ನಿಂತು ಸಂಘಟನೆಗೆ ಸಹಕರಿಸಿ:ಕನಕರಾಜು

 

ಮಡಿಕೇರಿ:7 ಸೆಪ್ಟೆಂಬರ್ 2021

ನ@ದಿನಿ

ಕರ್ನಾಟಕ ರಾಜ್ಯ ಸರಕಾರಿ ವಾಹನ ಚಾಲಕರ ಕೇಂದ್ರ ಸಂಘದ ವತಿಯಿಂದ ಸದಸ್ಯರ ಸಭೆ ನಡೆಯಿತು.

ನಗರದ ಬಾಲಭವನದಲ್ಲಿ ಆಯೋಜಿಸಿದ್ದ ಸಭೆಗೆ ಮೈಸೂರು ಜಿಲ್ಲಾಧ್ಯಕ್ಷ,ಕೇಂದ್ರ ಸಂಘದ ಉಪಾಧ್ಯಕ್ಷ ಕನಕರಾಜು ದೀಪ ಬೆಳಗಿಸುವುದ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಕೊಡಗಿನಲ್ಲಿ ಸಂಘ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.ಜಿಲ್ಲೆಯಲ್ಲಿ 39 ಸದಸ್ಯರಿದ್ದಾರೆ.ಪ್ರತಿಯೊಬ್ಬರು ಸಂಘದ ಸಭೆಗೆ ಹಾಜರಾಗಬೇಕು.ಕುಂದುಕೊರತೆ ಬಗ್ಗೆ ಮುಕ್ತವಾಗಿ ಚರ್ಚಿಸಬೇಕು.ಸಂಘದ ಅಧ್ಯಕ್ಷರಿಗೆ ಪ್ರತಿಯೊಬ್ಬರು ಬೆನ್ನೆಲುಬಾಗಿ ನಿಂತು ಸಂಘಟನೆಗೆ ಸಹಕರಿಸಬೇಕು ಎಂದರು.

ಕೊಡಗಿನಲ್ಲಿ ವಿವಿದ್ ಇಲಾಖೆಯಲ್ಲಿ ವಾಹನ ಚಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಗಣೇಶ್,ಚಂದ್ರನ್,ಪೊನ್ನಪ್ಪ,ಸುರೇಶ್ ರವರಿಗೆ ಸನ್ಮಾನಿಸಲಾಯಿತು.

ಕೊಡಗಿನ ಜಿಲ್ಲಾಧ್ಯಕ್ಷ ಬಾಬು,
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಶ್ರೀನಿವಾಸ್ ,ಚಾಮರಾಜನಗರ ಜಿಲ್ಲಾ ಕಾರ್ಯದರ್ಶಿ ಪ್ರಭುಸ್ವಾಮಿ,ಯಶೋಧರ್,ಮಂಜುನಾಥ್, ಅರುಣ್ ಕುಮಾರ್ ಸೇರಿದಂತೆ ಸಂಘದ ಸದಸ್ಯರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *