ಮೈಸೂರು:21 ಸೆಪ್ಟೆಂಬರ್ 2022
ನಂದಿನಿ ಮೈಸೂರು
ಎಸ್.ಟಿ.ಸೋಮಶೇಖರ್ ಬಗ್ಗೆ ಮಾತನಾಡಿರುವ
ಕೆ.ಎಸ್.ಶಿವರಾಮು ವಿರುದ್ಧ ಆದಿ ಕರ್ನಾಟಕ ಹಿತರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಕೆ.ಮುರಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಶ್ವವಿಖ್ಯಾತ ಮೈಸೂರು ದಸರಾ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಭಾಗವಹಿಸದಂತೆ ಸುದ್ದಿಗೋಷ್ಟಿ ನಡೆಸಿದ್ದಾರೆ.
ಎಸ್.ಟಿ.ಸೋಮಶೇಖರ್ ರವರ ಮೇಲೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿದೆ.ಅವರು ಪ್ರಸ್ತುತ ಆರೋಪಿ ಅಷ್ಟೇ,ಸಚಿವರು ಅಪರಾಧಿಯೇ ನಿರಪರಾಧಿಯೇ ಎಂದು ನ್ಯಾಯಾಲಯ ತನಿಖೆ ಮಾಡಿ ಆದೇಶ ಮಾಡುತ್ತದೆ.ಕೆ.ಎಸ್ .ಶಿವರಾಮು ರವರು ಮಾಧ್ಯಮ ಪ್ರಚಾರಕ್ಕಾಗಿ ಸೋಮಶೇಖರ್ ವಿರುದ್ದ ಮಾತನಾಡುತ್ತಿದ್ದಾರೆ.ಶಿವರಾಮು ಸೋಮಶೇಖರ್ ರವರಿಗೆ ಕ್ಷಮೆಯಾಚಿಸಬೇಕು ಇಲ್ಲವಾದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ
ಆದಿ ಕರ್ನಾಟಕ ಹಿತರಕ್ಷಣಾ ಹೋರಾಟ ಸಮಿತಿ,ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಯುವ ಬಳಗ ಒತ್ತಾಯಿಸುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಸಮಿತಿ ಸದಸ್ಯರು,ಬಳಗದ ಸದಸ್ಯರು ಜೊತೆಯಲ್ಲಿದ್ದರು.