ಕ್ರಿಮಿನಾಶಕ ಸೇವಿಸಿ ಗರ್ಭಿಣಿ ಮಹಿಳೆ ಆತ್ಮಹತ್ಯೆ

ಬೆಟ್ಟದಪುರ:4 ಜೂನ್ 2022

ಗರ್ಭಿಣಿ ಮಹಿಳೆಯೊಬ್ಬಳು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಟ್ಟದಪುರದಲ್ಲಿ ನಡೆದಿದೆ.

ಬೆಟ್ಟದಪುರ ಸಮೀಪದ ಕಿತ್ತೂರು ದೊಡ್ಡೇಗೌಡನಕೊಪ್ಪಲು ಗ್ರಾಮದ ನಿವಾಸಿ ಶ್ವೇತಾ (23) ಆತ್ಮಹತ್ಯೆ ಮಾಡಿಕೊಂಡ ಗರ್ಭಿಣಿ.

ಮೃತರು ಕೆಲ್ಲೂರು ಗ್ರಾಮದವರಾಗಿದ್ದು ಕಳೆದ 2ವರ್ಷಗಳ ಹಿಂದೆ ಕಿತ್ತೂರು ದೊಡ್ಡೇಗೌಡನಕೊಪ್ಪಲು ಗ್ರಾಮದ ನಿವಾಸಿ ಸರೋಜಮ್ಮ ಮತ್ತು ಚಿಕ್ಕೇಗೌಡರ ಮಗನಾದ ಬಸವರಾಜು ಅಲಿಯಾಸ್ ಪ್ರದೀಪ್ ಎಂಬುವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು.

ಇವರು ಮದುವೆಯಾದಾಗಿನಿಂದ ಸರೋಜಮ್ಮ ಮತ್ತು ಮಗ ಬಸವರಾಜ ಅಲಿಯಾಸ್ ಪ್ರದೀಪ ಇವರುಗಳು ವರದಕ್ಷಿಣೆ ತರುವಂತೆ ಆಗಿಂದ್ದಾಗೆ ಶ್ವೇತಾಗೆ ಕಿರುಕುಳ ನೀಡುತ್ತಿದ್ದರು.

ಇದರಿಂದ ಬೇಸತ್ತಿದ್ದ ಶ್ವೇತಾ ಒಮ್ಮೆ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು, ಗ್ರಾಮದವರೆಲ್ಲರೂ ತೀರ್ಮಾನ ಮಾಡಿ ತಿಳುವಳಿಕೆ ನೀಡಲಾಗಿತ್ತು.

ಆದರೆ ಸರೋಜಮ್ಮ ಮತ್ತು ಬಸವರಾಜ್ ಅಲಿಯಾಸ್ ಪ್ರದೀಪ ಹಾಗೂ ಅವರ ತಂಗಿ ಲತಾ ಇವರುಗಳು ವರದಕ್ಷಿಣೆ ತರುವಂತೆ ಆಗಿದ್ದಾಂಗ್ಗೆ ತುಂಬಾ ಹಿಂಸೆ ನೀಡುತ್ತಿದ್ದರು.

ಗರ್ಭಿಣಿಯಾದ ಶ್ವೇತಾಳನ್ನು ವರದಕ್ಷಿಣೆ ತರಲಿಲ್ಲವೆಂದು ಅವರ ತಾಯಿಯ ಮನೆಗೂ ಸಹ ಕಳುಹಿಸಿರಲಿಲ್ಲ, ಇದರಿಂದ ಬೇಸತ್ತ ಅವರು ಜೂ.1 ರಂದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು, ವಿಚಾರ ತಿಳಿದ ತಾಯಿ ಮನೆಯವರು ಕೆ.ಆರ್ ನಗರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆಂದು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆಗೆ ಸ್ಪಂದಿಸದೆ ಶುಕ್ರವಾರ ಮುಂಜಾನೆ ಮೃತಪಟ್ಟಿದ್ದಾರೆ ಎಂದು ಅವರ ತಂದೆ ಲೋಕೇಶ್ ಬೆಟ್ಟದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸವರಾಜು, ಸರೋಜಮ್ಮ ಹಾಗೂ ಲತಾ ವಿರುದ್ಧ ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *