ನಂದಿನಿ ಮೈಸೂರು
ಮೈಸೂರು,ಏ.16:- ಮೈಸೂರಿನ ವಿಜಯನಗರದ ಹೆಬ್ಬಾಳದ ಮೂರನೇ ಹಂತದಲ್ಲಿ ನೂತನವಾಗಿ ಫಸ್ಟ್ ಕ್ರೈ ಇಂಟೆಲಿಟಾಟ್ಸ್ ಪ್ರಿಸ್ಕೂಲ್ ಇಂದು ಶುಭಾರಂಭಗೊಂಡಿದೆ.
ಈ ಕುರಿತು ಸ್ಕೂಲ್ ನ ಮುಖ್ಯಸ್ಥೆ ಮೇಘಶ್ರೀ ಮಾತನಾಡಿ ಶಾಲೆಯನ್ನು ವ್ಯವಸ್ಥಿತವಾಗಿ ರೂಪಿಸಲಾಗಿದ್ದು ಎಲ್ಲವೂ ಅನುಕೂಲಕರವಾಗಿದೆ. ಯೋಜನೆಯನ್ನು ವ್ಯವಸ್ಥಿತವಾಗಿ ರೂಪಿಸಲಾಗಿದೆ. ಚಿಕ್ಕಮಗುವನ್ನು ಮನೆಯಿಂದ ಆಚೆ ಕಳಿಸಿದಾಗ ಅವರೆಷ್ಟು ಸುರಕ್ಷಿತರಾಗಿರುತ್ತಾರೆ, ಕಂಪರ್ಟೆಬಲ್ ಆಗಿರುತ್ತಾರೆ, ಎಷ್ಟು ಸಂತೋಷವಾಗಿರುತ್ತಾರೆ ಎಂಬ ಆತಂಕ ಮನೆಯವರಲ್ಲಿ ಇರುತ್ತದೆ. ಪೋಷಕರು ಯಾವುದೇ ಆತಂಕ ಪಡದೇ ಶಾಲೆಗೆ ಕಳುಹಿತಬಹುದಾದ ವಾತಾವರಣ ಇಲ್ಲಿದೆ ಎಂದರು.
ಶೈಕ್ಷಣಿಕ ದಕ್ಷಿಣ ವಲಯ ಮುಖ್ಯಸ್ಥೆ ಆಯಿಷಾಖಾನ್ 21st ಸೆಂಚುರಿ ಫಸ್ಟ್ ಕ್ರೈ ಇಂಟೆಲಿಟಾಟ್ಸ್ ಪ್ರಿಸ್ಕೂಲ್ ಹೆಬ್ಬಾಳ್ ಇದಕ್ಕೆ ಒಳ್ಳೆಯದಾಗಲೆಂದು ಶುಭ ಹಾರೈಸಿದರು. ಇಲ್ಲಿ ಮಕ್ಕಳಲ್ಲಿ ಕ್ರಿಯಾಶೀಲತೆ, ಆತ್ಮವಿಶ್ವಾಸವನ್ನು ಬೆಳೆಸಲಾಗುತ್ತದೆ. ದೇಶದಲ್ಲಿ 150ಕ್ಕೂ ಅಧಿಕ ಶಾಖೆಗಳಿವೆ. ಮೈಸೂರಿನಲ್ಲಿ ಇದೀಗ ನೂತನ ಶಾಖೆಯನ್ನು ತೆರೆದಿದ್ದೇವೆ. ಮಕ್ಕಳಿಗೆ ಇದು ಸ್ನೇಹಿ ಮತ್ತು ಸುರಕ್ಷತೆಯ ವಾತಾವರಣವನ್ನು ನೀಡಲಿದೆ ಎಂದರು.
ಮಕ್ಕಳ ಪ್ರವೇಶಾತಿ ನೊಂದಣಿಗೆ ಮೊ.ಸಂ. 7795168855 ನ್ನು ಸಂಪರ್ಕಿಸಬಹುದು.