ನಂದಿನಿ ಮೈಸೂರು
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ 2001-22ನೇ ಸಾಲಿನ ಸರ್ಕಾರಿ ನೌಕರರ ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಪ್ರತಿಭಾ ಪುರಸ್ಕಾರ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧ್ಯಕ್ಷ ಗೋವಿಂದರಾಜು ತಿಳಿಸಿದರು.
ನಾಳೆ ಶುಕ್ರವಾರ ಸಂಜೆ 4:00 ಗಂಟೆಗೆ ಮಾನಸಗಂಗೋತ್ರಿಯ
ಸನಟ್ ಭವನದಲ್ಲಿ ಆಯೋಜಿಸಿರುವ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಉದ್ಘಾಟಿಸಲಿದ್ದಾರೆ.
ಶೇ 90 ಕ್ಕೂ ಮೇಲ್ಪಟ್ಟು ಅಂಕಗಳನ್ನು ಪಡೆದಿರುವ 153-ಎಸ್.ಎಸ್.ಎಲ್.ಸಿ. ಮತ್ತು 128 ಪಿಯು, ಒಟ್ಟು 281
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ
ಸಿ.ಎಸ್. ಪಡಕ್ಷರಿ ಪ್ರತಿಭಾ ಪುರಸ್ಕಾರ ನೆರವೇರಿಸಲಿದ್ದಾರೆ.
67ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಲಿದ್ದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಂ.ಎಲ್., ರಘುನಾಥ್ ರವರು
ಭುವನೇಶ್ವರಿ ಮಾತೆಗೆ
ಪುಷ್ಪಾರ್ಚನೆಯನ್ನು ನೆರವೇರಿಸಲಿದ್ದಾರೆ.
ಹಾಗೂ ನವೆಂಬರ್-2022ನೇ ಮನೆಯಲ್ಲಿ ವಯೋನಿವೃತ್ತಿ ಹೊಂದಲಿರುವ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೋ.ಜಿ ಹೇಮಂತಕುಮಾರ್ ಅವರಿಗೆ ಅಭಿನಂದಿಸಲಾಗುವುದು.ಮುಂದಿನ ದಿನಗಳಲ್ಲಿ 80% ಅಂಕ ಪಡೆದ ವಿದ್ಯಾರ್ಥಿಗಳಿಗೂ ಸಹ ಪ್ರತಿಭಾ ಪುರಸ್ಕಾರ ಮಾಡುವ ಬಗ್ಗೆ ಚಿಂತಿಸಲಿದ್ದೇವೆ
ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ರೇವಣ್ಣ, ಜಿಲ್ಲಾ ಖಜಾಂಚಿ ರಮೇಶ್ ಕುಮಾರ್,ಉಮೇಶ್, ರೇವಣ್ಣ ಹಾಜರಿದ್ದರು.