ನಂದಿನಿ ಮೈಸೂರು
ಶಿಕ್ಷಣದಲ್ಲಿ ಜಾತಿ ಮಧ್ಯೆ ಬರಬಾರದು.ಶಿಕ್ಷಕರ ನಡೆ ನುಡಿ ಹೇಗಿರುತ್ತದೆಯೋ ಹಾಗೇಯೇ ಮಕ್ಕಳು ಕೂಡ ಇರಲಿದ್ದಾರೆ.
ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಆಗ ಮಾತ್ರ ಸುತ್ತಮುತ್ತಲಿನ ಪರಿಸರ ಹಾಗೂ ಸಮಾಜದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಶಾಸಕ ಜಿ.ಟಿ.ದೇವೇಗೌಡ ತಿಳಿಸಿದರು.
ಮೈಸೂರಿನ ರೋಟರಿ ಮಿಡ್ ಟೌನ್ ಅಕಾಡೆಮಿಯಲ್ಲಿ
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿಗಳ ಕಚೇರಿ ಮೈಸೂರು ಗ್ರಾಮಾಂತರ 2023-24 ನೇ ಸಾಲಿನ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವ ಕಾರ್ಯಕ್ರಮಕ್ಕೆ ಶಾಸಕ ಜಿಟಿ ದೇವೇಗೌಡರು ದೀಪಬೇಳಗಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ಮಕ್ಕಳ ಕಲಿಕೆಯ ಜೊತೆ ಮಕ್ಕಳಲ್ಲಿರುವ ಪ್ರತಿಭೆಯನ್ನು ಅನಾವರಗೊಳಿಸಲು ಒಂದು ವೇದಿಕೆ ಬೇಕಿರುತ್ತದೆ. ಆಗಾಗಿ ಶಿಕ್ಷಣ ಇಲಾಖೆ ಪ್ರತಿಭಾ ಕಾರಂಜಿ ಕಾರ್ಯಕ್ರಮ ಮೂಲಕ ವಿದ್ಯಾರ್ಥಿಗಳಿಗೆ ವೇದಿಕೆ ಮಾಡಿಕೊಟ್ಟಿದೆ.
ಮಕ್ಕಳ ಪೋಷಕರು ಒಮ್ಮೆಯಾದರೂ ಕಡ್ಡಾಯವಾಗಿ ಶಾಲೆಗೆ ಬರಬೇಕು. ಮಕ್ಕಳ ಬಗ್ಗೆ ಗಮನ ಹರಿಸಬೇಕು.ಮಕ್ಕಳು ಉತ್ತಮ ಸಾಧನೆ ಮಾಡುವುದಕ್ಕೆ ಸಿಗುವ ವೇದಿಕೆಯನ್ನು ಸದುಯೋಗಪಡಿಸಿಕೊಳ್ಳಬೇಕು.ಸಮಾಜಸೇವಕರಾದ ಮಹೇಂದ್ರ ಸಿಂಗ್ ಕಾಳಪ್ಪರವರು ಮಕ್ಕಳಿಗೆ ಊಟದ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.ಇನ್ನಷ್ಟು ಸೇವಾಕಾರ್ಯಗಳು ಜನರನ್ನ ತಲುಪಲಿ ಮಹೇಂದ್ರ ಸಿಂಗ್ ಕಾಳಪ್ಪರವರಿಗೆ ಧನ್ಯವಾದ ಎಂದು ಶಾಸಕ ಜಿಟಿ ದೇವೇಗೌಡರು ತಿಳಿಸಿದರು.
ರೋಟರಿ ಮಾಜಿ ಅಧ್ಯಕ್ಷ ಮಹೇಂದ್ರ ಸಿಂಗ್ ಕಾಳಪ್ಪ ಮಾತನಾಡಿ, ಮಕ್ಕಳ ಚಾರಿತ್ರ್ಯ ರೂಪಿಸುವಲ್ಲಿ ಶಿಕ್ಷಕರು ಮತ್ತು ಪಾಲಕರ ಪಾತ್ರ ಬಹಳ ಮುಖ್ಯ. ದೇಶದ ಭವಿಷ್ಯ ಮಕ್ಕಳ ಕೈಯಲ್ಲಿ ಅಡಗಿದೆ. ಶಿಕ್ಷಣದಲ್ಲಿ ಯಾವುದೇ ಜಾತಿ, ಧರ್ಮ ಅಡ್ಡಿಯಾಗದೆ ಎಲ್ಲರೂ ಬೆರೆತು ಶಿಕ್ಷಿತರಾಗಬೇಕು ಎಂದರು.
ಶಿಕ್ಷಣ ಇಲಾಖೆಯ ನಿರ್ದೇಶಕ ಎಚ್.ಕೆ. ಪಾಂಡು, ಪ್ರಾದೇಶಿಕ ಶಿಕ್ಷಣಾಧಿಕಾರಿ ವಿವೇಕಾ ನಂದ, ರೋಟರಿ ಶಾಲೆಯ ಪ್ರಾಂಶುಪಾಲ ಆತ್ಮಾನಂದ ನವಕೀಸ್ ಶಾಲೆಯ ಆಡಳಿತಾಧಿಕಾರಿ ಮಹೇಶ್,ಅನೂಪ್ ,ಗ್ರಾ.ಪಂ ಸದಸ್ಯ ಮಹೇಶ್,ಶಿಕ್ಷಕ ಮಹದೇವ್ ,ವಿವಿಧ ಶಾಲೆಯ ಶಿಕ್ಷಕರು ವಿಧ್ಯಾರ್ಥಿಗಳು ಭಾಗಿಯಾಗಿದ್ದರು.