ನಂದಿನಿ ಮೈಸೂರು
*ಕನ್ನಡ ನಾಡು ನುಡಿ ಬೆಳವಣಿಗೆಗೆ ಶ್ರಮಿಸಿದವರ ಸ್ಮರಿಸಿ* : *ಕೆ. ಹರೀಶ್ ಗೌಡ*
ದೇವರಾಜ ಮೊಹಲ್ಲಾ ನಾಗರಿಕರ ವೇದಿಕೆ ವತಿಯಿಂದ *೬೮ ನೇ ವರ್ಷದ ಕನ್ನಡ ರಾಜ್ಯೋತ್ಸವದ* ಪ್ರಯುಕ್ತ ಡಿ ದೇವರಾಜ ಅರಸ್ತೆಯಲ್ಲಿ ಧ್ವಜಾರೋಹಣ ಮಾಡಲಾಯಿತು. ನಂತರ ಸಿಹಿ ವಿತರಿಸಿ ಮಾತನಾಡಿದ ಶಾಸಕ ಹರೀಶ ಗೌಡ
ಕನ್ನಡ ನಾಡು– ನುಡಿಯ ಬೆಳವಣಿಗೆಗೆ ಶ್ರಮಿಸಿದವರನ್ನು ಸದಾ ಸ್ಮರಿಸಬೇಕು’ ಎಂದು ಸಲಹೆ ನೀಡಿದರು.
ಕನ್ನಡ ನಾಡು–ನುಡಿ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ ಬೆಳೆಸಿಕೊಳ್ಳಬೇಕು. ಕನ್ನಡ ಸಾಹಿತ್ಯ ಪರ ಚಟುವಟಿಕೆಗಳು ನಿರಂತರವಾಗಿ ನಡೆಯಬೇಕು’ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ ಹರೀಶ್ ಗೌಡ ನಗರ ಪಾಲಿಕೆ ಸದಸ್ಯರಾದ ಪ್ರಮೀಳಾ ಭರತ್, ಕನ್ನಡ ಹಿತರಕ್ಷಣ ವೇದಿಕೆ ಅಧ್ಯಕ್ಷರಾದ ವಿನಯ್ ಕುಮಾರ್ ನೌಕರ ಪ್ರವೀಣ್, ಮಂಜುನಾಥ್, ರವಿ, ಪ್ರಮೋದ್ ಗೌಡ, ಸತ್ಯಪ್ಪ, ಈರೇಗೌಡ, ನವೀನ,ಪ್ರಜ್ವಲ್, ನಿತಿನ್, ಮೋಹನ್ ಕುಮಾರ್ ಚರಣ್ ಮುಂತಾದವರು ಉಪಸ್ಥಿತರಿದ್ದರು.