1ವರೆ ಲಕ್ಷಕ್ಕೂ ಅಧಿಕ ಮೌಲ್ಯದ ಔಷಧಿ ನೀಡಿದ ಸಮಾಜಸೇವಕ ಮಹೇಂದ್ರ ಸಿಂಗ್ ಕಾಳಪ್ಪ

ನಂದಿನಿ ಮೈಸೂರು

ಟಿ.ನರಸೀಪುರ ಸೋಸಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಚೈತನ್ಯ ಚಾರಿಟೇಬಲ್ ಟ್ರಸ್ಟ್ ವ್ಯಾಸರಾಜಪುರದಲ್ಲಿ ಸರ್ಕಾರಿ ಆಯುರ್ವೇದ ಸಂಶೋಧನಾ ಕೇಂದ್ರ ಸಂಸ್ಥೆ ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ 8ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಅಂಗವಾಗಿ ಭಾರತ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಗ್ರಾಮೀಣ ಜನರಿಗಾಗಿ ರೈತರಿಗಾಗಿ ಬಡವರಿಗಾಗಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತರು ಡಾ. ಗುರು ಬಸವರಾಜು ಮತ್ತು ಸಮಾಜ ಸೇವಕರಾದ ಬನ್ನೂರಿನ ಪರಿಸರ ಜಾಗೃತಿ, ವೇದಿಕೆಯ ಅಧ್ಯಕ್ಷರಾದ ಡಾಕ್ಟರ್ ಮಹೇಂದ್ರ ಸಿಂಗ್, ಕಾಳಪ್ಪ ಅವರು ದೀಪ ಬೆಳಗಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಲಾಯಿತು.

ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಜ್ವರ,ತಲೆನೋವು ನೆಗಡಿ, ಕೆಮ್ಮು ಉಸಿರಾಟದ ತೊಂದರೆಗಳಿಗೆ ತಪಾಸಣೆ ನಡೆಸಲಾಯಿತು.

ಈ ಶಿಬಿರಕ್ಕೆ ಡಾಕ್ಟರ್ ಮಹೇಂದ್ರ ಸಿಂಗ್ ಕಾಳಪ್ಪ ಅವರಿಂದ ಸುಮಾರು ಒಂದುವರೆ ಲಕ್ಷಕ್ಕೂ ಅಧಿಕ ಮೌಲ್ಯದ ಎಲ್ಲಾ ತರಹದ ಔಷಧಿಗಳನ್ನು ವಿತರಣೆ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತರು ಡಾಕ್ಟರ್ ಗುರು ಬಸವರಾಜು ಹಾಗೂ ಡಾ. ಮಹೇಂದ್ರ ಸಿಂಗ್ ಕಾಳಪ್ಪ ಅವರಿಗೆ ಚೈತನ್ಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಟ್ರಸ್ಟ್‌ನ ಸಿಸರ್ಗಳಾದ ಜುಬಿ, ಜೈನ್, ತೆರೆಸ್, ಅನು, ಡಾಕ್ಟರ್ ಜೀ ಜೀವರ್ಗಿಸ್, ಸಿಸರ್‌ ಉಷಾ ಸೇರಿದಂತೆ ತಾಲೂಕು ಪಂಚಾಯಿತಿ ರಂಗಸ್ವಾಮಿ ಸದಸ್ಯರು ಗ್ರಾಮ ಪಂಚಾಯಿತಿ ಆದ ಕ್ತರಾದ ಚಾಂದಿನಿ ಸೇರಿದಂತೆ ಡಾ. ಸದಾನಂದ ಪರಗುಂಟೆ ನಿರ್ದೇಶಕರು ಡಾಕ್ಟರ್‌ ಲಕ್ಷ್ಮೀ ನಾರಾಯಣ್ ರನ್ ಸಹಾಯಕ ನಿರ್ದೇಶಕರು ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *