ಬೆಂಗಳೂರಿನಲ್ಲಿ ರಾಜ್ಯದ ಪ್ರಮುಖ ರೈತ ಸಂಘಟನೆಯಿಂದ ಚುನಾವಣಾ ಪ್ರಣಾಳಿಕೆ ಬಿಡುಗಡೆ* – ಕಾಂಗ್ರೆಸ್ ಹಾಗೂ ಜೆಡಿಎಸ್ ಹಾಜರ್, ಬಿಜೆಪಿ ಗೈರು !

ನಂದಿನಿ ಮೈಸೂರು

*ಬೆಂಗಳೂರಿನಲ್ಲಿ ರಾಜ್ಯದ ಪ್ರಮುಖ ರೈತ ಸಂಘಟನೆಯಿಂದ ಚುನಾವಣಾ ಪ್ರಣಾಳಿಕೆ ಬಿಡುಗಡೆ* – ಕಾಂಗ್ರೆಸ್ ಹಾಗೂ ಜೆಡಿಎಸ್ ಹಾಜರ್, ಬಿಜೆಪಿ ಗೈರು !

ಇಂದು ಕರ್ನಾಟಕ ರಾಜ್ಯದ ಎಲ್ಲಾ ರೈತ ಸಂಘಟನೆಗಳ ಪ್ರಮುಖರು ಹಾಗೂ ದೆಹಲಿಯ ರೈತ ಹೋರಾಟದ ಪ್ರಮುಖ ನಾಯಕರು ಬೆಂಗಳೂರಿನ ಗಾಂಧಿ ಭವನದಲ್ಲಿ ಸಭೆ ಸೇರಲಾಗಿದ್ದು ಮುಂಬರುತಿರುವ ಕರ್ನಾಟಕ ರಾಜ್ಯ ವಿಧಾನಸಭಾ ಕ್ಷೇತ್ರ ಚುನಾವಣೆಯಲ್ಲಿ ರೈತ ಸಮುದಾಯದ ನಿಲುವಿನ ಘೋಷಣೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮಕ್ಕೆ ರೈತ ಮುಖಂಡರೊಂದಿಗೆ ಮುಖಾಮುಖಿ ಚರ್ಚೆ ಮಾಡಲು ಹಾಗೂ ರೈತ ಸಮೂಹದವತಿಯಿಂದ ರಾಜಕೀಯ ಪಕ್ಷಗಳಿಗೆ ಚುನಾವಣಾ ಪ್ರಣಾಳಿಕೆ ಹೇಗಿರಬೇಕು ಎಂಬ ವಿಚಾರವಾಗಿ ಕರ್ನಾಟಕ ರಾಜ್ಯದ ಮೂರು ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷ ಗಳಿಗೆ ಆಮಂತ್ರಣ ಕೊಡಲಾಗಿತ್ತು.

ಕಾಂಗ್ರೆಸ್ ಪಕ್ಷದಿಂದ ಡಿಕೆ ಶಿವಕುಮಾರ್ ರವರು , ಚುನಾವಣಾ ಪ್ರಣಾಳಿಕೆ ತಂಡದ ಅಧ್ಯಕ್ಷರಾದ ರಾಧಾಕೃಷ್ಣನ್ ರವರು ಹಾಗೂ ಜೆಡಿಎಸ್ ಪಕ್ಷದಿಂದ ಎಂಎಲ್ಸಿ ಹಾಗೂ ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷರಾದ ತಿಪ್ಪೇಸ್ವಾಮಿ ಅವರು ಭಾಗವಹಿಸಿದ್ದರು.

ಬಿಜೆಪಿ ಪಕ್ಷದಿಂದ ಯಾವುದೇ ಪ್ರತಿನಿಧಿಯಾಗಲಿ ಅಥವಾ ಮಾಹಿತಿಯಾಗಲಿ ಬರದೆ ಸಭೆಗೆ ಗೈರು ಆದರೂ.

ರೈತರು ಕರೆದಂತಹ ಸಭೆಗೆ ಬಾರದೆ ಹೋದ ಬಿಜೆಪಿಯ ನಡೆಯನ್ನು ಎಲ್ಲಾ ಸಂಘಟನೆಗಳ ರೈತ ಮುಖಂಡರು ಈ ಪಕ್ಷದ ಧೋರಣೆಗೆ ಚುನಾವಣೆಯಲ್ಲಿ ಮತಗಳ ಮೂಲಕ ಉತ್ತರಿಸಬೇಕೆಂಬ ನಿರ್ಣಯಕ್ಕೆ ಬಂದಿರುತ್ತಾರೆ.

15 ಅಂಶಗಳ ಪ್ರಣಾಳಿಕೆ ಪಟ್ಟಿಯನ್ನು ಸಭೆಗೆ ಬಂದಿದ್ದಂತಹ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಪ್ರತಿನಿಧಿಗಳಿಗೆ ಹಸ್ತಾಂತರ ಮಾಡಿದ್ದು ಎರಡು ಪಕ್ಷದ ಪ್ರತಿನಿಧಿಗಳು ರೈತ ಮುಖಂಡರು ಕೊಟ್ಟಂತಹ ಪ್ರಣಾಳಿಕೆಗಳನ್ನು ಒಪ್ಪಿಕೊಂಡು ಆಯಾ ಪಕ್ಷಗಳ ಪರವಾಗಿ ರೈತರ ಪ್ರಣಾಳಿಕೆಯನ್ನು ತಮ್ಮ ಸರ್ಕಾರ ಬಂದಲ್ಲಿ ತಪ್ಪದೇ ಕಾರ್ಯರೂಪಕ್ಕೆ ತರುವುದಾಗಿ ಒಪ್ಪಿಗೆ ಪತ್ರಕ್ಕೆ ಸಹಿ ಮಾಡಿ ಕೊಟ್ಟಿರುತ್ತಾರೆ.

ಮುಂದಿನ 15 ದಿನಗಳು ರಾಜ್ಯದಲ್ಲಿ ವಿವಿಧ ಕ್ಷೇತ್ರಗಳಿಗೆ ಎಲ್ಲ ರೈತ ಸಂಘಟನೆಯ ಮುಖಂಡರು ಒಟ್ಟಾಗಿ ತೆರಳಿ ಆಡಳಿತ ಪಕ್ಷದ ರೈತ ವಿರೋಧಿ ಕಾನೂನುಗಳ ಬಗ್ಗೆ ಅರಿವು ಮೂಡಿಸುವಂತಹ ಕೆಲಸಗಳನ್ನು ಮಾಡಬೇಕು ಎಂದು ನಿರ್ಣಯಕ್ಕೆ ಬರಲಾಗಿದೆ.

ಸಭೆಯಲ್ಲಿ ದೆಹಲಿಯಿಂದ ಯೋಗೇಂದ್ರ ಯಾದವ್ , ಹನನ್ಮೂಲ ಬಂದಿದ್ದು ರಾಕೇಶ ಟಿಕಾಯತ್ ರವರ ಆರೋಗ್ಯದಲ್ಲಿ ವ್ಯತ್ಯಾಸವಿದ್ದರಿಂದ ಬರಲು ಆಗಲಿಲ್ಲ.

ಕರ್ನಾಟಕ ರಾಜ್ಯದ ಪ್ರಮುಖ ರೈತ ಸಂಘಟನೆಯ ಮುಖಂಡರಾದಂತಹ ಎಚ್ ಆರ್ ಬಸವರಾಜಪ್ಪ , ಬಡಗಲಪುರ ನಾಗೇಂದ್ರ , ಮಂಜು ಕಿರಣ್ ರವರು ಹಾಜರಿದ್ದು. ಕೃಷಿ ಕಾರ್ಮಿಕ ಸಂಘಟನೆಯಿಂದ ಬಯ ರೆಡ್ಡಿ ಅವರು ಸಭೆಯಲ್ಲಿ ಭಾಗವಹಿಸಿದರು.

Leave a Reply

Your email address will not be published. Required fields are marked *