ಆರೋಗ್ಯ ಅಧಿಕಾರಿಗೆ ಅವಾಚ್ಯ ಶಬ್ಧಗಳಿಂದ ನಿಂಧಿಸಿದ್ದಾರೆಂದು ಆರೋಪಿಸಿ ಪಾಲಿಕೆ ಸದಸ್ಯೆ ಅಶ್ವಿನಿ ಶರತ್ ವಿರುದ್ಧ ಪ್ರತಿಭಟನೆ

ಮೈಸೂರು:19 ಫೆಬ್ರವರಿ 2022

ನಂದಿನಿ ಮೈಸೂರು

ಮೈಸೂರು ಮಹಾನಗರ ಪಾಲಿಕೆ ಸದಸ್ಯೆ ಅಶ್ವಿನಿ ಶರತ್ ಆರೋಗ್ಯ ಅಧಿಕಾರಿ ಜಯಂತಿ ರವರಿಗೆ ಅವಾಚ್ಯ ಶಬ್ಧಗಳಿಂದ ನಿಂಧಿಸಿದ್ದಾರೆಂದು ಆರೋಪಿಸಿ ಮೈಸೂರಿನ ಪೌರ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಮೈಸೂರು ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿರು ವಲಯ ಕಚೇರಿ 7 ರಲ್ಲಿ ಜಮಾಹಿಸಿದ ಪೌರಕಾರ್ಮಿಕರು ಮೌನ ಪ್ರತಿಭಟನೆ ನಡೆಸಿದರು.

ಇದೇ ಸಂದರ್ಭದಲ್ಲಿ ಅಧ್ಯಕ್ಷ ಎನ್.ಮಾರ ಮಾತನಾಡಿದ ಅವರು ಮೈಸೂರು ಮಹಾಗನರ ಪಾಲಿಕೆ ಸದಸ್ಯೆ ಅಶ್ವಿನಿ ಶರತ್ ರವರು ವಾರ್ಡ್ ನಂ 26 ಗಾಂಧಿ ನಗರಕ್ಕೆ ಪ್ರತಿದಿನ ದಿನಚರಿಗೆ ಹೋಗಿದ್ದ ಅರೋಗ್ಯ ಅಧಿಕಾರಿಗೆ ಏಕಾಏಕಿ ಅವಾಚ್ಯ ಶಬ್ಥದಿಂದ ನಿಂಧಿಸಿದ್ದಾರೆ. ಆದ್ದರಿಂದ ಇಂದು ಪೌರಕಾರ್ಮಿಕರು ಅಧಿಕಾರಿಗಳು ತಮ್ಮ ಕರ್ತವ್ಯ ಸ್ಥಗಿತಗೊಳಿಸಿ ಮೌನವಾಗಿ ಪ್ರತಿಭಟಿಸಿದ್ದಾರೆ.ಮುಂದಿನ ದಿನಗಳಲ್ಲಿ ಈ ರೀತಿಯ ಘಟನೆ ಮರುಕಳಿಸದಂತೆ ಭರವಸೆ ನೀಡುವವರೆಗೂ ಕರ್ತವ್ಯ ಸ್ಥಗಿತಗೊಳಿಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.

ಮೈಸೂರು ನಗರ ಪಾಲಿಕೆ ಎಡಿಸಿ ರೂಪ ಹಾಗೂ ಅರೋಗ್ಯಾಧಿಕಾರಿ ನಾಗರಾಜು,
ವಲಯ ಕಚೇರಿ 7 ರ ಎಸಿ ನಂಜುಂಡಸ್ವಾಮಿ
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಘಟನೆ ಬಗ್ಗೆ ಆಲಿಸಿದರು.ನಂತರ ಮಾತನಾಡಿದ ಅವರು
ಮುಂದಿನ ದಿನಗಳಲ್ಲಿ ಅಧಿಕಾರಿಗಳು,ಸಿಬ್ಬಂದಿಗಳು ಹಾಗೂ ಪೌರಕಾರ್ಮಿಕರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದರು.

ಮೌನ ಪ್ರತಿಭಟನೆಯಲ್ಲಿ
ಸ್ವಾಮಿ,ರಾಚಯ್ಯ,ಅರುಣ್,ಮಂಚಯ್ಯ,ದಿನೇಶ ಕುಮಾರ್,ಸೇರಿದಂತೆ 50 ಕ್ಕೂ ಹೆಚ್ಚು ಪೌರ ಕಾರ್ಮಿಕರು,ಮೈಸೂರಿನ ಎಲ್ಲಾ ಆರೋಗ್ಯ ಅಧಿಕಾರಿಗಳು ಹಾಗೂ ವಲಯ ಅಧಿಕಾರಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *