ನಂದಿನಿ ಮೈಸೂರು
ವಿಜಯಪುರದಲ್ಲಿ ಪತ್ನಿ ಸಮೇತ ಪತ್ರಕರ್ತ ನೇಣಿಗೆ ಶರಣಾಗಿದ್ದಾನೆ.
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಪಟ್ಟಣದ ಎಪಿಎಂಸಿ ಬಳಿ ಯುವ ಪತ್ರಕರ್ತ ತಿಪ್ಪಣ್ಣ ಸಿದ್ದಪ್ಪ ಹೊಸಮನಿ (34) ಮತ್ತು ಆತನ ಪತ್ನಿ ಸುಜಾತಾ (30) ಅಕ್ಕಪಕ್ಕದ ಕೋಣೆಗಳಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ತಿಪ್ಪಣ್ಣ ಖಾಸಗಿ ವಾಹಿನಿ ( ಪವರ್ ಟವಿ) ಬೆಂಗಳೂರಿನಲ್ಲಿ ಕ್ಯಾಮರಾಮ್ಯಾನ್ ಆಗಿದ್ದ, ಕೆಲ ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ. ಮುದ್ದೇಬಿಹಾಳ ತಾಲೂಕಿನ ಕೊಣ್ಣೂರು ಗ್ರಾಮದ ತಿಪ್ಪಣ್ಣ ಕಳೆದ 4-5 ತಿಂಗಳ ಹಿಂದಷ್ಟೇ ಮುದ್ದೇಬಿಹಾಳ ತಾಲೂಕಿನ ಕೆಸಾಪೂರ ಗ್ರಾಮದ ಪ್ರೀತಿಸಿದ ಯುವತಿಯೊಂದಿಗೆ ಮನೆಯವರ ಒಪ್ಪಿಗೆ ಪಡೆದು ಮದುವೆಯಾಗಿದ್ದ. ಗಂಡ, ಹೆಂಡತಿ ಇಬ್ಬರೂ ಪಟ್ಟಣದಲ್ಲಿ ಮನೆ ಮಾಡಿಕೊಂಡು ವಾಸಿಸುತ್ತಿದ್ದರು. ಘಟನೆ ಮಾಹಿತಿ ಪಡೆದು ಪಿಎಸೈ ಆರೀಫ ಮುಷಾಪುರಿ ಮತ್ತು ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಘಟನೆ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ತಡರಾತ್ರಿ ಪ್ರಕರಣ ದಾಖಲಾಗಿದೆ.