ಮೈಸೂರು:6 ಜನವರಿ 2022
ನಂದಿನಿ ಮೈಸೂರು
ಆರಕ್ಷಕರು ಅಂದ್ರೇ ಸಾಕು ಮೂಗು ಮುರಿಯೋರೆ ಹೆಚ್ಚು.ನಮ್ಮನ್ನೇಲ್ಲ ರಕ್ಷಣೆ ಮಾಡುವವರ ಮೇಲೆಯೇ ಕೆಲವೊಮ್ಮೆ ಜಗಳ ಮಾಡಿಬಿಡುತ್ತೇವೆ.ಆ ಕ್ಷಣಕ್ಕೆ ಪೋಲಿಸರು ನೋಡೋರಿಗೆಲ್ಲ ಕೆಟ್ಟವರಂತೆ ಕಾಣ್ತಾರೆ.ಆದರೇ ಅವರಲ್ಲೂ ಒಳ್ಳೇಯ ಕೆಲಸ ಮಾಡಿದಾಗ ಯಾರು ಅವರನ್ನ ಪ್ರೋತ್ಸಾಹಿಸೋದಿಲ್ಲ.
ಕೃಷ್ಣರಾಜ ಸಂಚಾರ ಪೊಲೀಸ್ ಠಾಣೆಯ ಟ್ರಾಫಿಕ್ ಪೋಲಿಸ್ ಮಲ್ಲಿಕಾರ್ಜುನಸ್ವಾಮಿ ರವರು ಇಂದು ಅಗ್ರಹಾರ ವೃತ್ತದಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಅಂಧ ವೃದ್ದನನ್ನ ಕೈ ಹಿಡಿದು ರಸ್ತೆ ದಾಟಿಸಿ ಮಾನವೀಯತೆ ಮೆರೆದಿದ್ದಾರೆ. ಮಲ್ಲಿಕಾರ್ಜುನಸ್ವಾಮಿರವರ ಕಾರ್ಯವೈಖರಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.