ಸರಗೂರು:6 ಜನವರಿ 2022
ನರೇಗಾ ಕೆಲಸಗಳಲ್ಲಿ ಮಾನವ ಶಕ್ತಿಯನ್ನೇ ಬಳಸುತ್ತೇವೆ ಎಂದು ಮಹಾತ್ಮಾ ಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಸಹಾಯಕ ನಿರ್ದೇಶಕರಾದ ಪರಮೇಶ್ ಅವರು ಹೇಳಿದರು.
ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ನಲ್ಲಿರುವ ಜನಧ್ವನಿ ಸಮುದಾಯ ಬಾನುಲಿ ಕೇಂದ್ರದ ಕಛೇರಿಯಲ್ಲಿ ನಡೆದ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನರೇಗಾ ಯೋಜನಯಡಿ ಬರುವ ಎಲ್ಲಾ ಕೆಲಸಗಳನ್ನು ಮಾನವನ ಶಕ್ತಿಯನ್ನು ಬಳಸಿ ಕೆಲಸ ಮಾಡುತ್ತೇವೆ ಹೊರೆತು, ಯಾವುದೇ ಯಂತ್ರಗಳನ್ನು ಬಳಸಿ ಕೆಲಸ ಮಾಡುವುದಿಲ್ಲ ಎಂದರು.
ಬಳಿಕ ಅಂತರ್ಜಲದ ಯೋಜನೆ ಹಾಗೂ ಸ್ವಚ್ಛಭರತ್ ಮಿಷನ್ ಕುರಿತು ಸಾರ್ವಜನಿಕರಿಗೆ ಅಗತ್ಯ ಮಾಹಿತಿಗಳನ್ನು ನೀಡಿದರು.
ಕೆರೆಗಳ ಹೂಳು ತುಂಬುವುದು ಹಾಗೂ ಕೆರೆಗಳ ಅಭಿವೃದ್ಧಿಯ ಬಗ್ಗೆ ತಿಳಿಸಿದರು.
ವೈಯಕ್ತಿಕ ಹಿಂಗುಗುಂಡಿಗಳು ಹಾಗೂ ಸಮುದಾಯದ ಹಿಂಗುಗುಂಡಿಗಳ ಬಳಕೆಯಿಂದ ಅಂತರ್ಜಲದ ಮಟ್ಟವನ್ನು ಹೆಚ್ಚಿಸುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.
ಸರಗೂರಿನಿಂದ ಗೋವಿಂದಯ್ಯ ಎಂಬುವವರು ಕರೆ ಮಾಡಿ ಜನಸಂದಣಿಯಿರುವ ಕಡೆ ಸಾರ್ವಜನಿಕ ಶೌಚಾಲಯದ ಆಗತ್ಯೆ ತಾಲೂಕಿನಲ್ಲಿ ತುಂಬಾ ಇದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ ಅವರು ಸಾರ್ವಜನಿಕ ಶೌಚಾಲಯವನ್ನು ನಿರ್ಮಾಣ ಮಾಡಬಹುದು. ಆದರೆ ಇದರ ನಿರ್ವಹಣೆಗೆ ಸಾರ್ವಜನಿಕರ ಸಹಕರ ಅಗತ್ಯವಿದೆ ಎಂದರು.
ಅಂತರ್ಜಲ ಮತ್ತು ನರೇಗಾ ಯೋಜನೆಗಳ ಕುರಿತು ತಾಲೂಕಿನ ವಿವಿಧ ಭಾಗಗಳಿಂದ ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿ ಕೊಂಡರು.
ನೇರ ಫೋನ್ ಇನ್ ಕಾರ್ಯಕ್ರಮವನ್ನು ಜನಧ್ವನಿ ಸಮುದಾಯ ಬಾನುಲಿ ಕೇಂದ್ರದ ನಿರ್ಮಾಪಕರಾದ ಶಿವಲಿಂಗ್ ಹ್ಯಾಂಡ್ ಪೋಸ್ಟ್ ಅವರು ನಡೆಸಿಕೊಟ್ಟರು.