ಮೈಸೂರು: 12 ಅಕ್ಟೋಬರ್ 2021
ನ@ದಿನಿ
ʻನನ್ನ ಮರಣ ಪತ್ರ ಶೀರ್ಷಿಕೆಯಡಿ ಬರೆದಿರುವ ಡೆತ್‌ನೋಟ್‌ನಲ್ಲಿ ನನ್ನ ಸಾವಿಗೆ ನನ್ನ ಹೆಂಡತಿ ಕೆ.ಡಿ. ಲಕ್ಷ್ಮಿ ಮತ್ತು ಅವರ ತಾಯಿ ಭಾರತಿ, ದೇವರಾಜು, ಹೆಂಡತಿಯ ಚಿಕ್ಕಪ್ಪನಾದ ಮಲ್ಲೇಶ್ ಹಾಗೂ ಆತನ ಹೆಂಡತಿ ರೇಖಾ ಹಾಗೂ ನನಗೆ ಹುಡುಗಿ ತೋರಿಸಿದ ಬ್ರೋಕರ್ ಸಿದ್ದಪ್ಪ ಹಾಗೂ ಆತನ ಇಬ್ಬರು ಮಕ್ಕಳು ಇವರು ನನ್ನ ಸಾವಿಗೆ ಕಾರಣರು. ನನ್ನ ಸಾವನ್ನು ತಡೆದುಕೊಳ್ಳುವ ಶಕ್ತಿಯನ್ನು ನನ್ನ ಅಪ್ಪ-ಅಮ್ಮನಿಗೆ ಭಗವಂತ ನೀಡಲಿ. ನಾನು ಯಾವ ತಪ್ಪನ್ನೂ ಮಾಡಿಲ್ಲ. ನಮ್ಮ ಕುಟುಂಬದರೊಂದಿಗೆ ಬಾಳುವ ಶಕ್ತಿಯನ್ನು ದೇವರು ನೀಡಲಿಲ್ಲ. ನನ್ನ ಸಾವಿನಿಂದ ಕೆಲವರಿಗೆ ಎರಡು ನಿಮಿಷ ಸಂತೋಷ ನೀಡಬಹುದು. ಐ ಮಿಸ್‌ಯು ರಾಜ, ಸಾರಿ ತಮ್ಮ, ನನ್ನ ನೆಚ್ಚಿನ ಮುದ್ದಿನ ತಮ್ಮನ್ನು ಕಾಪಾಡಿ. ಎಲ್ಲ ಜವಾಬ್ದಾರಿಗಳನ್ನು ನಿನಗೆ ವಹಿಸಿ ಹೋಗುತ್ತಿದ್ದೇನೆ. ಎಲ್ಲರೂ ನನ್ನನ್ನು ಕ್ಷಮಿಸಿಬಿಡಿ.
ಇಂತಿ
ನಿಮ್ಮ ಮಹೇಶ್ .ಸಿ
ಕೌಟುಂಬಿಕ ಕಲಹದಿಂದ ಬೇಸತ್ತು ಅಬಕಾರಿ ಪೇದೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲ್ಲೂಕು ಗೊದ್ದನಪುರದಹುಂಡಿಯಲ್ಲಿ ನಡೆದಿದೆ.
ಸರ್ಕಾರಿ ಉತ್ತನಹಳ್ಳಿಯ (ಏಳಿಗೆ ಹುಂಡಿ) ನಿವಾಸಿಯಾದ ಮಹೇಶ್ (34) ಎಂಬವರೇ
ರಾಂಪುರ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವರು. ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಯುಬಿ ಎಕ್ಸ್‌ಪೋರ್ಟ್ ಕಾರ್ಖಾನೆಯಲ್ಲಿ ಅಬಕಾರಿ ಇಲಾಖೆಯಿಂದ ಮೇಲ್ವಿಚಾರಣ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ 15 ದಿನಗಳಿಂದ ನಡೆಯುತ್ತಿದ್ದ ಕೌಟುಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೂ ಮುನ್ನ ಡೆತ್‌ನೋಟ್ ಬರೆದಿಟ್ಟು, ತನ್ನ ವಾಟ್ಸಪ್ ಡಿಪಿಯಲ್ಲಿ ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಈ ಸಂಬಂಧ ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.