ಬೆಳಕಿನ ಚಿತ್ತಾರದಲ್ಲಿ ಸ್ವರ್ಗದ ಬಾಗಿಲು ತೆರೆದು ಸ್ವಾಗತಿಸುವಂತಿದೆ ಮೈಸೂರು

ಮೈಸೂರು:12 ಅಕ್ಟೋಬರ್ 2021

ಸ್ಪೇಷಲ್ ಸ್ಟೋರಿ: ನ@ದಿನಿ

                     ಬೆಳಕೊಂದು ಕಂಡರೇ ಸಾಕು ತನಗೆ ತಾನೇ ಮುಖದಲ್ಲೊಂದು ನಗು ತರಿಸುತ್ತದೆ.ಇನ್ನೂ ಕಣ್ಣು ಹಾಯಿಸಿದಷ್ಟು ಝಗಮಗಿಸುವ ಬೆಳಕನ್ನ ಕಂಡರೇ ಸ್ವರ್ಗವೇ ಧರೆಗಿಳಿದಂತೆ ಭಾಸವಾಗುತ್ತದೆ.
ಸ್ವರ್ಗಕ್ಕೆ ಕಿಚ್ಚು ಹಚ್ಚಿಸುವಂತಹ ಬೆಳಕಿನ ದೀಪಾಲಂಕಾರಕ್ಕೆ ಪ್ರವಾಸಿಗರು ಮನಸೋತಿದ್ದಾರೆ.

                  ಹೌದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸಂಜೆ 6ಗಂಟೆಯಾದರೆ ಸಾಕು ಎತ್ತ ನೋಡಿದರತ್ತ ಕಣ್ಣಿಗೆ ಹಬ್ಬ ನೀಡುವ ಬೆಳಕು.ಮೈಸೂರಿನ ಪ್ರಮುಖ ರಾಜಬೀದಿಗಳಲ್ಲಿ ದೀಪಾಲಂಕಾರ ಆಕರ್ಷಿಸುತ್ತಿದೆ. ದೀಪಾಲಂಕಾರಕ್ಕಾಗಿ 4.6 ಕೋಟಿ ಗೂ ಅಧಿಕ ಹಣವನ್ನು ವೆಚ್ಚ ಮಾಡಲಾಗಿದೆ. ಚೆಸ್ಕಾಂ, ಜಿಲ್ಲಾಡಳಿತ ಸೇರಿ ಹಲವು ಯೋಜನೆ ರೂಪಿಸಿ ವಿಶೇಷ ಅಲಂಕಾರ ಮಾಡಿದೆ. ಮೈಸೂರಿನ 100ಕಿ.ಮೀ ಸುತ್ತಳತೆಯಲ್ಲಿ ಪ್ರಥಮ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ದೀಪಾಲಂಕಾರ ಮಾಡಲಾಗಿದೆ. ಬಂಗಾರದ ಹೊಳಪನ್ನು ನೀಡುವ ಎಲ್ ಇ ಡಿ ಬಲ್ಪ್ ಗಳು ಝಗಮಗಿಸುತ್ತಿವೆ.
ದೀಪಾಲಂಕಾರ ನೋಡಲು ಬರುವವರ ಸಂಖ್ಯೆಯೂ ಹೆಚ್ಚಿದೆ.ಸಯ್ಯಾಜಿರಾವ್ ರಸ್ತೆಯಲ್ಲಿ ಹಸಿರು ಮಂಟಪ ಕಣ್ಣು ಕೋರೈಸಿದರೆ, ವೃತ್ತಗಳಲ್ಲಿ ಬಣ್ಣ ಬಣ್ಣದ ದೀಪಗಳು ಪ್ರವಾಸಿಗರನ್ನು ಆಕರ್ಷಿಸಿವೆ.

                    411 ನೇ ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿ ಹಸಿರು ಚಪ್ಪರ , ದೊಡ್ಡ ಕೆರೆ ಮೈದಾನದಲ್ಲಿ ಪಟ್ಟದ ಕಲ್ಲು , ಕೆ.ಆರ್.ಎಸ್ ಅಣೆಕಟ್ಟೆ, ರಾಮಸ್ವಾಮಿ ವೃತ್ತದಲ್ಲಿ ಅಂಬಾವಿಲಾಸ ಅರಮನೆ ಪ್ರತಿಕೃತಿ,ಬಲ್ಲಾಳ ವೃತ್ತದಲ್ಲಿ ಬಸವಣ್ಣ,ಅಂಬೇಡ್ಕರ್, ಬುದ್ದನ ಪ್ರತಿಕೃತಿ,ರೈಲ್ವೇ ನಿಲ್ದಾಣ ವೃತದಲ್ಲಿ ಕಥಕ್ಕಳಿ ಮುಖವರ್ಣಿಕೆ,ಕಾಂಗ್ರೆಸ್ ಭವನದ ಆವರಣದಲ್ಲಿ ಸಂಸತ್ ಭವನ,ಜಿಲ್ಲಾಧಿಕಾರಿ ಕಚೇರಿ ರಸ್ತೆಗೆ ಕಮಾನು ದೀಪಾಲಂಕಾರ ,ವಾರ್ತಾಭವನ ವೃತ್ತದಲ್ಲಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ,ಆದಿಚುಂಚನಗಿರಿ ಮಠದ ಬಾಲಗಂಗಾಧರನಾಥ ಸ್ವಾಮೀಜಿ,ವಾಲ್ಮೀಕಿ ಪ್ರತಿಕೃತಿ,ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ನೀರಜ್ ಚೋಪ್ರಾ, ಬೇಲೂರು ಶಿಲಾಬಾಲಿಕೆ,ಸಂದೇಶ ಸಾರುವ ಮಹಾತ್ಮ ಗಾಂಧಿ, ವಿವೇಕಾನಂದ ಗೊಳಗೊಮ್ಮಟ ಹಾಗೂ ಜೆಎಸ್‌ಎಸ್ ವಿದ್ಯಾಪೀಠದ ವೃತ್ತದ ಬಳಿ ಶತಾಯುಷಿ ಡಾ.ಶಿವಕುಮಾರಸ್ವಾಮೀಜಿ , ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹಾಗೂ ಇಂಡಿಯಾ ಗೇಟ್ ಮೂಡಿಬಂದಿದ್ದು , ಪಾರಂಪರಿಕ ಹಾರ್ಡಿಂಗ್ ವೃತ್ತದಲ್ಲಿ ನಾಡದೇವಿ ಶ್ರೀಚಾಮುಂಡೇಶ್ವರಿ ದೇವಿಯು ಚಿತ್ತಾಕರ್ಷಕ ದೀಪಗಳಿಂದ ಮೂಡಿ ಬಂದಿದೆ .


ಈ ಬಾರಿ ವಿಶೇಷವಾಗಿ ಸ್ವಾತಂತ್ರ್ಯ ಅಮೃತ ಮಹೋತ್ಸವ 75ರ ಹಾಗೂ ಭಾರತಕ್ಕೆ ಒಲಂಪಿಕ್ ನಲ್ಲಿ ಚಿನ್ನದ ಪದಕ ತಂದುಕೊಟ್ಟ ನೀರಜ್ ಚೋಪ್ರಾ ರವರ ದೀಪಾಲಂಕ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

                   ವಿದ್ಯುತ್‌ ದೀಪಾಲಂಕಾರ ಕಣ್ಮುಂಬಿಕೊಳ್ಳಲು ಜನರು ಮೈಸೂರಿನ ಸತ್ತ ಹೆಜ್ಜೆ ಹಾಕುತ್ತಿದ್ದಾರೆ. ದಸರಾ ಸರಳವಾಗಿದ್ದರೂ ಬೆಳಕಿನ ಸಂಭ್ರಮಕ್ಕೆನೂ ಅಡ್ಡಿ ಇಲ್ಲ.ಜನರು ಸಾಮಾಜಿಕ ಅಂತರ ಮರೆತು ದೀಪಾಲಂಕಾರ ಬಳಿ ನಿಂತು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.

                  ಸರಳ ದಸರೆಯಲ್ಲಿ ಮಧುವಣಗಿತ್ತಿಯಂತೆ ಸಿಂಗಾರಗೊಂಡ ಅರಮನೆ ನೋಡುತ್ತಿದ್ದರೇ ಸ್ವರ್ಗದ ಬಾಗಿಲು ತೆರೆದು ಸ್ವಾಗತಿಸುವಂತೆ ಕಾಣುತ್ತಿದೆ.

Leave a Reply

Your email address will not be published. Required fields are marked *