ಗ್ರಾಹಕರ ಜೊತೆ ವಾರ್ಷಿಕೋತ್ಸವ ಆಚರಿಸಿಕೊಂಡ ಪ್ಯಾಲೇಸ್ ಸ್ಕೋಡಾ

ಮೈಸೂರು:22 ಆಗಸ್ಟ್ 2022

ನಂದಿನಿ ಮೈಸೂರು

ಪ್ಯಾಲೇಸ್ ಸ್ಕೋಡಾ ತನ್ನ ಎರಡನೇ ವರ್ಷದ ವಾರ್ಷಿಕೋತ್ಸವವನ್ನು ಗ್ರಾಹಕರ ಜೊತೆ ಆಚರಿಸಿಕೊಂಡಿತು.

ಮೈಸೂರಿನಲ್ಲಿ ಖುಷಾಕ್ ಸ್ಕೋಡಾ ವಾರ್ಷಿಕೋತ್ಸವದ ನೆನಪಿಗಾಗಿ ಶೋರೋಂನಿಂದ ಚಾಮುಂಡಿ ಬೆಟ್ಟದವರಗೆ ರ್ಯಾಲಿ ಹಮ್ಮಿಕೊಂಡು ನಂತರ ಖಾಸಗೀ ಹೋಟೆಲ್ ನಲ್ಲಿ ಗ್ರಾಹಕರೊಟ್ಟಿಗೆ ಸಂಭ್ರಮಿಸಿದರು.

ಹರೀಶ್ ನಾರಾಯಣ್ ಮಾತನಾಡಿ ಇಂದು ರ್ಯಾಲಿಗೆ ಗ್ರಾಹಕರನ್ನು ಆಹ್ವಾನಿಸಿ ಅವರ ಡ್ರೈವ್ ಬಗ್ಗೆ ಮಾತನಾಡಿದ್ದೇವೆ.ತಿಂಗಳಿಗೆ 45 ಕಾರು ವ್ಯಾಪಾರ ಮಾಡುತ್ತಿದ್ದೇವೆ.ಕರ್ನಾಟಕದಲ್ಲಿ ಅಗ್ರಸ್ಥಾನ ಪಡೆದಿದ್ದೇವೆ.ಉತ್ತಮ ಸೇವೆ ನೀಡುತ್ತಿದ್ದೀರಾ ಎಂದು ಒಂದು ಪ್ರಶಸ್ತಿ ಕೂಡ ಪಡೆದುಕೊಂಡಿದ್ದೇವೆ ಎಂದು ಹರ್ಷ ವ್ಯಕ್ತಪಡಿಸಿದರು.

ಶ್ರೀಧರ್ ಮಾತನಾಡಿ ಪ್ಯಾಲೇಸ್ ಸ್ಕೋಡಾ 2ನೇ ವರ್ಷದ ವಾರ್ಷಿಕೋತ್ಸವ,ಖುಷಾಕ್ ಲಾಂಚ್ ಆಗಿ ಒಂದು ವರ್ಷ ಆಗಿದೆ.ಖುಷಾಕ್ ನಮಗೆ ಒಳ್ಳೇಯ ಲಾಭ ತಂದುಕೊಡುತ್ತಿದೆ.ಗ್ರಾಹಕರಿಗೆ ಧನ್ಯವಾದ ತಿಳಿಸುತ್ತೇನೆ.ಅಬ್ರಾಡ್ ನಲ್ಲಿ
ಹಳೆಯ ಸ್ಕೋಡಾ ತಯಾರಿಕೆಯಾಗುತ್ತಿತ್ತು.ನಂತರ ಭಾರತಕ್ಕೆ ಬರುತ್ತಿತ್ತು.ಈಗ ಸ್ಕೋಡಾ ಕುಷಾಕ್ 92% ರಷ್ಟು ಭಾರತದಲ್ಲಿಯೇ ತಯಾರಾಗುತ್ತಿದೆ.ಕುಷಾಕ್ ಭಾರತದಿಂದ ಬೇರೆ ದೇಶಗಳಿಗೂ ರವಾನೆಯಾಗುತ್ತಿದೆ ಇದು ಹೆಮ್ಮೆಯ ವಿಷಯ.ಸ್ಕೋಡಾ ಅಂದ್ರೇ ಸೇಫ್ಟೀ ಸೇಫ್ಟೀ ಅಂದ್ರೇ ಸ್ಕೋಡಾ ಎಂದರು.

Leave a Reply

Your email address will not be published. Required fields are marked *