ವಿವಿಧ ಪಿಂಚಣಿ ಮಂಜೂರಾತಿ ಆದೇಶ ಪತ್ರ ವಿತರಿಸಿದ ಎಂ.ಕೆ.ಸೋಮಶೇಖರ್

ಮೈಸೂರು:7 ಫೆಬ್ರವರಿ 2022

ನಂದಿನಿ ಮೈಸೂರು

ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ರವರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಎನ್ ಸುನೀಲ್ ಕುಮಾರ್ ರವರ ಅಕಾಲಿಕ ನಿಧನದ ಹಿನ್ನೆಲೆ ಸೋಮಶೇಖರ್ ರವರು ದುಃಖಿತರಾಗಿದ್ದು ತಮ್ಮ ಹುಟ್ಟು ಹಬ್ಬ ಆಚರಿಸದಿರಲು ಘೋಷಿಸಿದ್ದರು.

ಆದರೆ ಮುಂಚಿತವಾಗಿಯೇ ವಿವಿಧ ಪಿಂಚಣಿ ಯೋಜನೆಗಳ ವಿತರಣಾ ಕಾರ್ಯಕ್ರಮ ನಿಗಧಿಯಾಗಿದ್ದರಿಂದ ವಯೋವೃದ್ಧರಿಗೆ ಅನಾನುಕೂಲವಾಗದಿರಲಿ ಎಂಬ ಸದುದ್ದೇಶದಿಂದ ಅವರ ಕಛೇರಿಯಲ್ಲಿಯೇ ಹಲವಾರು ಜನರಿಗೆ ವಿವಿಧ ಪಿಂಚಣಿ ಮಂಜೂರಾತಿ ಅದೇಶ ಪತ್ರಗಳನ್ನು ವಿತರಿಸಲಾಯಿತು.

ಈ ಸಂಧರ್ಭದಲ್ಲಿ ಮಾಜಿ ಶಾಸಕರಾದ ಶ್ರೀ ಎಂ ಕೆ ಸೋಮಶೇಖರ್,ಉಡಿಗಾಲದ ಮಹದೇವಪ್ಪ,ಗಂಗಾಧರಸ್ವಾಮಿ,ಗುತ್ತಿಗೆದಾರರಾದ ಕೋಚನಹಳ್ಳಿ ಶಿವರಾಜು,ಶಿವಮೂರ್ತಿ,ಗುಣಶೇಖರ್ ,ರವಿ,ನಾಗಮಹಾದೇವ,ಹೇಮಂತ್,ಹರೀಶ್,ಅಭಿ ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *