ಬಾಲ್ಯ ವಿವಾಹದಿಂದ ತಪ್ಪಿಸಿ ಹೆಚ್ಚಿನ ಶಿಕ್ಷಣ ಕೊಡಿಸುವಂತೆ 16 ವರ್ಷದ ಬಾಲಕಿಯೊಬ್ಬಳು ಮನವಿ ಮಾಡಿಕೊಂಡಿರುವ ಘಟನೆ ನಡೆದಿದೆ.
ಹಾಸನ ಜಿಲ್ಲೆಯ ಸಾಲಗಾಮೆ ಹೋಬಳಿಯ ಹದಿನಾರು ವರ್ಷದ ಗಾಯತ್ರಿ ಎನ್ನುವವರೆ ರಕ್ಷಣೆ ಕೋರಿರುವ ಬಾಲಕಿಯರಾಗಿದ್ದಾರೆ
ತಂದೆ ಇಲ್ಲದ ಕಾರಣ ತಾಯಿ ಹೆಚ್ಚಿನ ವಿದ್ಯಾಭ್ಯಾಸ ಕೊಡಿಸಲು ಕಷ್ಟವಾಗಿ ಮದುವೆ ಮಾಡಲು ಪ್ರಯತ್ನ ಪಡುತ್ತಿದ್ದಾರೆ ಎಂದು ಯುವತಿ ಪತ್ರದಲ್ಲಿ ಉಲ್ಲೇಖಿಸಿದ್ದು, ರಕ್ಷಣೆಗಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ನೇರಳಕುಪ್ಪೆ ನವೀನ್ ಮತ್ತು ದಲಿತ ಮುಖಂಡ ಚಾಮರಾಯನಕೋಟೆ ಜಗದೀಶ್ ಅವರನ್ನು ಸಂಪರ್ಕಿಸಿದ್ದಾರೆ,
ಈ ವಿಚಾರವನ್ನು ನೇರಳಕುಪ್ಪೆ ನವೀನ್ ಅವರು ಬಾಲಕಿಯ ಬಳಿ ಮಾತನಾಡಿ ಅವಳಿಗೆ ಧೈರ್ಯ ತುಂಬಿ ಬಾಲ್ಯ ವಿವಾಹದಿಂದ ರಕ್ಷಣೆ ಮಾಡಿ ಇದೀಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ವಹಿಸಿದ್ದಾರೆ
ಈ ಸಂದರ್ಭದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಂಘಟನೆಯ ಪಿರಿಯಾಪಟ್ಟಣ ತಾಲ್ಲೂಕು ಅಧ್ಯಕ್ಷೆ MT ಆರತಿ , ನವಿಲೂರು ಶಿವಣ್ಣ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.