ಮನೆ ಮನೆಗೆ ತೆರಳಿ ಪರಿಸರ ಸ್ನೇಹಿ ಗೌರಿ- ಗಣೇಶ ಮೂರ್ತಿ ವಿತರಿಸಿದ ನವೀನ್ ಕುಮಾರ್

ನಂದಿನಿ ಮೈಸೂರು

ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಕೆ ಆರ್ ಎಂ ಫೌಂಡೇಶನ್ ವತಿಯಿಂದ ಅಗ್ರಹಾರದ ಶಂಕರಮಠ ರಸ್ತೆಯ ಮನೆ ಮನೆಗೆ ತೆರಳಿ ಉಚಿತವಾಗಿ ಜೇಡಿ ಮಣ್ಣಿನ ಗೌರಿ ಗಣೇಶ ಮೂರ್ತಿಗಳ ವಿತರಣೆಯನ್ನು ಕಾಂಗ್ರೆಸ್ ಯುವ ಮುಖಂಡ ಎನ್ ಎಂ ನವೀನ್ ಕುಮಾರ್ ವಿತರಿಸಿದರು.

ನಂತರ ಮಾತನಾಡಿದ ಅವರು ಪ್ರಕೃತಿ ಮನುಷ್ಯನಿಗೆ ಬೇಕಾದ ಆಹಾರ ನೀರು ಮತ್ತು ಉಸಿರಾಡಲು ಉತ್ತಮಗಾಳಿ ಯನ್ನು ನೀಡಿದೆ .ಆದರೆ ಮನುಷ್ಯ ದುರಾಸೆ ಮತ್ತು ಅಭಿವೃದ್ಧಿ ಹೆಸರಿನಲ್ಲಿ
ಗಿಡ ಮರಗಳನ್ನು ಕಡಿದು ಮತ್ತು ಪ್ರಕೃತಿ ವೈಪರೀತ್ಯದಿಂದ ಮಳೆ ಸಹ ಅಕಾಲಕ್ಕೆ ಆಗುತ್ತಿದೆ .ಬೆಳೆಗಳಿಗೆ ರಾಸಾಯನಿಕ ಸಿಂಪಡಣೆ ನಾನಾ ಕಾರಣಗಳಿಂದ ನೀರು
ಮತ್ತು ವಾತಾವರಣ ಕಲುಷಿತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿಯೊಬ್ಬ ನಾಗರಿಕರು ಪರಿಸರ ಉಳಿಸಲು ರಕ್ಷಣೆ ಮಾಡಲು ಪಣತೊಡಬೇಕು ಈ ನಿಟ್ಟಿನಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಪರಿಸರ ಸ್ನೇಹಿ ಮಣ್ಣಿನ ಗೌರಿ ಗಣೇಶ ಮೂರ್ತಿಗಳನ್ನು ಉಚಿತವಾಗಿ ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ .ಮಣ್ಣಿನ ಮೂರ್ತಿಗಳು ನೀರಿನಲ್ಲಿ ಸುಲಭವಾಗಿ ಕರಗುತ್ತವೆ,ಪರಿಸರವೂ ಉಳಿಯುತ್ತದೆ ಎಂದು ಹೇಳಿದರು.

ಸುಜೀವ್ ಫೌಂಡೇಶನ್ ಅಧ್ಯಕ್ಷರಾದ ರಾಜರಾಮ್
ಮಾತನಾಡಿ
ಇಂದಿನ ಮಕ್ಕಳು ಪರಿಸರದೊಂದಿಗೆ ಬೆರೆಯುವ ಅವಕಾಶಗಳನ್ನೇ ಕಳೆದುಕೊಳ್ಳುತ್ತಿದ್ದಾರೆ. ಮಣ್ಣು, ಪ್ರಕೃತಿಯ ಜೊತೆಗೆ ಬೆರೆಯುತ್ತಿಲ್ಲ. ಗಣಪತಿ ಹಬ್ಬ ಸಮೀಪವಿರುವುದರಿಂದ ಪ್ರತಿಯೊಬ್ಬರು ಮನೆಗಳಲ್ಲಿ ಗಣಪತಿ ಪ್ರತಿಷ್ಠಾಪಿಸುತ್ತಾರೆ. ಅಂತಹ ಸಂದರ್ಭದಲ್ಲಿ ಮಣ್ಣಿನಿಂದ ಮಾಡಿದ ಪರಿಸರಸ್ನೇಹಿ ಗಣಪತಿಯನ್ನು ಮನೆ ಯಲ್ಲಿಟ್ಟು ಪೂಜೆ ಮಾಡಿದಾಗ ಪ್ರಕೃತಿಗೆ ಯಾವುದೇ ತೊಂದರೆಯಾಗುವುದಿಲ್ಲ. ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣಪತಿಗಳನ್ನು ಬಳಸಿ ಪರಿಸರಕ್ಕೆ ಹಾನಿ ಉಂಟು ಮಾಡುವವರಿಗೆ ಮನವರಿಕೆ ಮಾಡಿ ಪರಿಸರ ಸ್ನೇಹಿ ಗಣಪತಿ ಬಳಸಲು ಪ್ರೇರೆಪಿಸಬೇಕಿದೆ ಎಂದರು.
ಮಕ್ಕಳಲ್ಲಿ ಜಾಗೃತಿ ಮೂಡಿಸುವುದರಿಂದ ಮನೆಯವರಿಗೆ ಹಾಗೂ ನೆರೆಹೊರೆಯವರಿಗೂ ಅರಿವು ಮೂಡಿಸಲು ಮುಂದಾಗುತ್ತಾರೆ. ಮುಂದಿನ ದಿನಗಳಲ್ಲಿ ಎಲ್ಲೆಡೆ ಮಣ್ಣಿನಿಂದ ಮಾಡಿದ ಪರಿಸರ ಸ್ನೇಹಿ ಗೌರಿ-ಗಣಪತಿಯನ್ನು ಬಳಸುವಂತಾಗಬೇಕಿದೆ ಎಂದರು.

ಕಾರ್ಯಕ್ರಮದಲ್ಲಿ ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್ ,ಜಿ ರಾಘವೇಂದ್ರ ,ಹರೀಶ್ ನಾಯ್ಡು ,ಎಸ್ ಎನ್ ರಾಜೇಶ್ ,ವಿನಯ್ ಕಣಗಾಲ್ ,ರಾಜೇಶ್ ,ಶ್ಯಾಮ್ ,ಸುರೇಶ್ ಗೋಲ್ಡ್ ,ಮನು ,ಹಾಗೂ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *