ನಂದಿನಿ ಮೈಸೂರು
ಹೆಬ್ಬಾಳ್ ಪರಮಹಂಸ ವಿದ್ಯಾನಿಕೇತನ ಶಾಲೆಯ 28ನೆ ವರ್ಷದ ವಾರ್ಷಿಕೋತ್ಸವ ಸಂಭ್ರಮ ಕಳೆಕಟ್ಟಿತ್ತು
ಮೈಸೂರಿನ ಜಗನ್ಮೋಹನ ಅರಮನೆ ಆವರಣದಲ್ಲಿ ಪುಟ್ಟ ಪುಟ್ಟ ಮಕ್ಕಳು ಸಮಾಜಕ್ಕೆ ಸಂದೇಶ ಸಾರುವ ನೃತ್ಯ ಪ್ರದರ್ಶಿಸಿ ಪ್ರೇಕ್ಷಕರ ಮನಗೆದ್ದರು.ಮಕ್ಕಳ ಜೊತೆ ತಂದೆಯಂದಿರೂ ಕೂಡ ಹಾಡಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
ಪರಮಹಂಸ ವಿದ್ಯಾನಿಕೇತನ ಹೆಬ್ಬಾಳ್ ವೈಸ್ ಪ್ರೆಸಿಡೆಂಟ್ ಕೆ.ಎಂ.ನಾಗರಾಜು ,ತೇಜಾವತಿ ಹಾಗೂ ಕಾರ್ಯದರ್ಶಿ ಸುಮಾ ರಾಜಶೇಖರ್ ಮಾತನಾಡಿ ಹೆಬ್ಬಾಳ್ ಪರಮಹಂಸ ವಿದ್ಯಾನಿಕೇತನ ಶಾಲೆಯ 28ನೆ ವರ್ಷದ ವಾರ್ಷಿಕೋತ್ಸವ ಆಚರಿಸುತ್ತಿದ್ದೇವೆ.ಕೊರೋನಾ ಮಹಾಮಾರಿ ಇದ್ದಿದ್ದರಿಂದ ಮೂರು ವರ್ಷ ಈ ಕಾರ್ಯಕ್ರಮ ನಡೆದಿರಲಿಲ್ಲ.ಇಂದು ಜಗನ್ಮೋಹನ ಅರಮನೆಯಲ್ಲಿ ಅದ್ದೂರಿಯಾಗಿ ವಾರ್ಷಿಕೋತ್ಸವ ಜರುಗಿದೆ.ಉತ್ತಮ ಅಂಕ ಪಡೆದ ವಿಧ್ಯಾರ್ಥಿಗಳಿಗೆ ಸನ್ಮಾನಿಸಿದ್ದೇವೆ.ನಮ್ಮ ಶಾಲೆಯಲ್ಲಿ ಸ್ಪರ್ದೇ ಆಯೋಜಿಸಲಾಗಿತ್ತು.ಬೇರೆ ಬೇರೆ ಶಾಲೆಯ ಮಕ್ಕಳು ಭಾಗವಹಿಸಿದ್ದರು ಅವರಿಗೆ ಇಂದು ಬಹುಮಾನ ವಿತರಿಸಲಾಯಿತು. ನಮ್ಮ ಶಾಲೆಯಲ್ಲಿ ಶಿಕ್ಷಣದ ಜೊತೆ ಜೊತೆಗೆ ಮಕ್ಕಳಲ್ಲಿರುವ ಕಲೆಯನ್ನ ಹೊರತಂದು ಅವರಿಗೆ ಪ್ರೋತ್ಸಾಹಿಸುತ್ತಿದ್ದೇವೆ ಎಂದರು.
ಶಾಲೆಯ ಎಚ್ ಎಂ
ಭಾಗ್ಯ ಸೇರಿದಂತೆ ಮಕ್ಕಳ ಪೋಷಕರು ಭಾಗಿಯಾಗಿದ್ದರು.