ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಕ್ಯಾಲೆಂಡರ್ ಬಿಡುಗಡೆ

ನಂದಿನಿ ಮೈಸೂರು

ಬಸವೇಶ್ವರ ಸಾಂಸ್ಕೃತಿಕ ಪ್ರತಿಷ್ಠಾನದ ವತಿಯಿಂದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರಿಯ ಸಮಾಜ ಸೇವಕ ರಘುರಾಂ ವಾಜಪೇಯಿ ಹಾಗೂ ಇನ್ನಿತರ ಗಣ್ಯರು ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು.

ಬಳಿಕ ರಘುರಾಂ ವಾಜಪೇಯಿ ಮಾತನಾಡಿ, ಇಂದಿನ ದಿನಗಳಲ್ಲಿ ಮೊಬೈಲ್‌ನಲ್ಲೇ ಎಲ್ಲವೂ ಸಿಗುತ್ತದೆ ಎಂದಿದ್ದರೂ ಸಹಾ ಎಲ್ಲರ ಮನೆಗಳಲ್ಲಿನ ಕ್ಯಾಲೆಂಡರ್ ಮಾಯವಾಗಿಲ್ಲ. ಈ ದಿನಗಳಲ್ಲಿಯೂ ಕ್ಯಾಲೆಂಡರ್ ನೋಡಿಯೇ ಹಲವರು ತಮ್ಮ ಚಟುವಟಿಕೆ ನಿಗದಿ ಪಡಿಸುವುದೇ ಇದಕ್ಕೆ ಕಾರಣವಾಗಿದೆ. ಇನ್ನು, ಈಗ ಬಿಡುಗಡೆಗೊಳಿಸಿದ ಕ್ಯಾಲೆಂಡರ್ ಇಂಗ್ಲಿಷ್ ಹಾಗೂ ಭಾರತೀಯ ಪದ್ಧತಿಯಲ್ಲಿ ಮುದ್ರಣಗೊಂಡಿರುವುದು ಸ್ವಾಗತಾರ್ಹವಾಗಿದೆ ಎಂದರು.

ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕವಿತಾ, ಪೂರ್ಣಿಮಾ ಅವರನ್ನು ಸನ್ಮಾನಿಸಲಾಯಿತು.

ಪಾಲಿಕೆ ಮಾಜಿ ಸದಸ್ಯ ಪ್ರದೀಪ್‌ಕುಮಾರ್, ಸುನಿಲ್, ಬಸವರಾಜೇಂದ್ರ ಸ್ವಾಮಿ, ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *