ಮೈಸೂರು:26 ಆಗಸ್ಟ್ 2022
ನಂದಿನಿ ಮೈಸೂರು
ಇತಿಹಾಸ ಪ್ರಸಿದ್ಧ ಪಂಚಗವಿ ಮಠ ಉಳಿವಿಗಾಗಿ ಮೈಸೂರಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಯಿತು.
ಕರ್ನಾಟಕ ಪ್ರಜಾ ಪಾರ್ಟಿ ಅಧ್ಯಕ್ಷ ಶಿವಣ್ಣ ನೇತೃತ್ವದ ತಂಡ ಪಂಚಗವಿ ಮಠಕ್ಕೆ ಭೇಟಿ ನೀಡಿ ಮಠದ ಒಳಗೆ ಆಗಿರುವ ದುರಸ್ತಿ ನೋಡಿ ಬೇಸರ ವ್ಯಕ್ತಪಡಿಸಿದರು.
ನಂತರ ಮಾತನಾಡಿದ ಅವರು ಚಾಮುಂಡಿ ಬೆಟ್ಟದ ಪಾದದ ಗೌರಿಶಂಕರ ನಗರದಲ್ಲಿರುವ ಮಠ ಇತಿಹಾಸ ಪ್ರಸಿದ್ಧವಾದದ್ದು ಪಂಚಗವಿ ಮಠದ ಉಳಿವಿಗಾಗಿ ಇಂದು ಕರ್ನಾಟಕ ಪ್ರಜಾ ಪಾರ್ಟಿ (ರೈತ ಪರ್ವ) ದಿಂದ ಒಂದು ದಿನದ ಸತ್ಯಾಗ್ರಹ ನಡೆಸುತ್ತಿದೆ.ಸರ್ಕಾರಕ್ಕೆ ಈಗಾಗಲೇ ಪತ್ರ ಬರೆದಿದ್ದೇವೆ.ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಪಂಚಗವಿ ಮಠ ಉಳಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ತೇಜಸ್ವಿ ನಾಗಲಿಂಗ ಸ್ವಾಮಿ, ಮಠದ ಭಕ್ತರು, ಮೊಹಲ್ಲಾ ನಿವಾಸಿಗಳು ಭಾಗಿಯಾಗಿದ್ದರು.