ಮೈಸೂರು:26 ಆಗಸ್ಟ್ 2022
ನಂದಿನಿ ಮೈಸೂರು
ಲೈಸೆನ್ಸ್ ರಾಜ್ ರದ್ದುಗೊಳಿಸುವಂತೆ ಒತ್ತಾಯಿಸಿ
ಕರ್ನಾಟಕ ರಾಜ್ಯ ಸಣ್ಣ ಬೀಡಿ ಸಿಗರೇಟು ಮಾರಾಟಗಾರರ ಸಂಘದಿಂದ ಬೃಹತ್ ಪ್ರತಿಭಟನೆ ನಡೆಸಿದರು.
ಮೈಸೂರಿನ ಕೋಟೆ ಅಂಜನೇಯಸ್ವಾಮಿ ದೇವಸ್ಥಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೂ ಪ್ರತಿಭಟನಾ ಮೆರವಣೆಗೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರು ಮಾತನಾಡಿ ಕರ್ನಾಟಕ ಮುನಿಸಿಪಲ್ ಕಾರ್ಪೋರೇಷನ್ ರೂಲ್ಸ್ 2020 ತಂದಿದೆ.ಸಿಗರೇಟ್ ,ಬೀಡಿ,ತಂಬಾಕು ಮಾರಾಟಗಾರರು ಲೈಸೆನ್ಸ್ ಪಡೆದುಕೊಳ್ಳುವಂತೆ ಆದೇಶ ಮಾಡಿದೆ.
ನಾವುಗಳು ಜೀವನೋಪಾಯಕ್ಕಾಗಿ ನಡೆಸುತ್ತಿರುವ ಸಣ್ಣ ಪೆಟ್ಟಿಗೆ ಅಂಗಡಿಗಳು ನಮ್ಮ ಸ್ವಂತ ಜಾಗವಾಗಿರದೇ ಖಾಲಿ ಜಾಗದಲ್ಲಿ ಜೀವನ ಕಟ್ಟಿಕೊಂಡಿದ್ದೇವೆ.
ಪ್ರಸ್ತುತ ಇರುವ ಅಂಗಡಿಗಳಲ್ಲಿ ಶೇಕಡ 25% ಅಂಗಡಿಗಳಿಗೆ ಮಾತ್ರ ಲೈಸೆನ್ಸ್ ನೀಡಲು ಉದ್ದೇಶಿಸಲಾಗಿದೆ ಬಾಕಿ ಅಂಗಡಿಗಳು ತೊಂದರೆಗೆ ಒಳಗಾಗುತ್ತದೆ.ಈಗಾಗಲೇ ಯಾವುದೇ ನಿರ್ಭಂಧವಿಲ್ಲದಿದ್ದರೂ ಕೆಲವು ಕಾರ್ಪೋರೇಷನ್ ಹಾಗೂ ಪೋಲೀಸ್ ಅಧಿಕಾರಿಗಳಿಂದ ನಿತ್ಯ ಶೋಷಣೆ ಒಳಗಾಗುತ್ತಿದ್ದು ಹೊಸ ನಿಯಮ ಜಾರಿ ಮಾಡಿದ್ದ ಲ್ಲಿ ಮತ್ತಷ್ಟು ಶೋಷಣೆಯಾಗುವುದು ಖಂಡಿತ.ಸರ್ಕಾರ ಈ ಕೂಡಲೇ ಲೈಸೆನ್ಸ್ ರಾಜ್ ರದ್ದು ಮಾಡಬೇಕು ಇಲ್ಲವಾದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ನೂರಾರು ಜನ ಭಾಗಿಯಾಗಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.