ನಂಜನಗೂಡು :10 ಡಿಸೆಂಬರ್ 2021
ನಂದಿನಿ ಮೈಸೂರು
ಅನಾರೋಗ್ಯದಿಂದ ಬಳಲುತ್ತಿದ್ದವರು ಅಕ್ಸಿಜನ್ ಕಿಟ್ ಹಾಕಿಕೊಂಡು ಮತಗಟ್ಟೆ ಕಡೆ ಹೆಜ್ಜೆ ಹಾಕುತ್ತಿದ್ದರು.ಆರೋಗ್ಯ ಕೆಟ್ಟಿರುವ ವ್ಯಕ್ತಿ ಆಸ್ಪತ್ರೆಗೆ ಹೋಗುವ ಬದಲು ಮತಗಟ್ಟೆಗೆ ಯಾಕೆ ಬಂದಿದ್ದಾರೆ ಅಂದುಕೊಡ್ರಾ ನಿಮ್ಮ ಊಹೆ ತಪ್ಪಿದೆ ನೋಡಿ.ಆಕ್ಸಿಜನ್ ಕಿಟ್ ಧರಿಸಿ ಬಂದವರು ಬೇರೆ ಯಾರು ಅಲ್ಲ ಅವರು ಗ್ರಾ.ಪಂ.ಸದಸ್ಯರು.ತಮ್ಮ ಅಮೂಲ್ಯವಾದ ಮತ ಚಲಾಯಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಅನಾರೋಗ್ಯದಿಂದ ನರಳುತ್ತಿದ್ದ ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರು ಆಕ್ಸಿಜನ್ ಕಿಟ್ ಧರಿಸಿಯೇ ಮತಗಟ್ಟೆಗೆ ಆಗಮಿಸಿ ಹಕ್ಕನ್ನ ಚಲಾಯಿಸಿ ಮಾದರಿಯಾಗಿದ್ದಾರೆ.ಮತಗಳ ಮೌಲ್ಯವನ್ನ ತಿಳಿಸಿದ್ದಾರೆ.
ಹುಲ್ಲಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ವಾರ್ಡ್ ನಂ ೪ ರಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಚುನಾಯುತರಾದ ಅನ್ಸರ್ ಅಹ್ಮದ್
೩ ತಿಂಗಳ ಹಿಂದೆ ಕೊವಿಡ್ ಪಾಸಿಟಿವ್ ಆಗಿ ಚಿಕಿತ್ಸೆ ಪಡೆದಿದ್ದರು.ಕೊವಿಡ್ ನಿಂದ ಗೆದ್ದು ಬಂದರೂ ಅನಾರೋಗ್ಯ ಇವರನ್ನ ಕಾಡುತ್ತಿತ್ತು. ಆಕ್ಸಿಜನ್ ನೆರವಿನಿಂದ ಚೇತರಿಸಿಕೊಳ್ಳುತ್ತಿರುವ ಅನ್ಸರ್ ಅಹ್ಮದ್ ಮತದಾನದಿಂದ ದೂರ ಉಳಿಯದೆ ಮತಗಟ್ಟೆಗೆ ಆಗಮಿಸಿ ಹಕ್ಕನ್ನ ಚಲಾಯಿಸಿದ್ದಾರೆ.
ಮೈಸೂರಿನಲ್ಲಿರುವ ತಮ್ಮ ಮನೆಯಿಂದ ಸಹಾಯಕರ ಜೊತೆ ಆಕ್ಸಿಜನ್ ಸಮೇತ ಮತಗಟ್ಟೆಗೆ ಆಗಮಿಸಿದ್ದಾರೆ.ಮತಗಟ್ಟೆಗೆ ಪ್ರವೇಶಿಸುವ ವೇಳೆ ಆಯತಪ್ಪಿದ ಅನ್ಸರ್ ಅಹ್ಮದ್ ಕುಸಿದು ಬಿದ್ದಿದ್ದಾರೆ.ಹೀಗಿದ್ದರೂ ಮತಗಟ್ಟೆಗೆ ಪ್ರವೇಶಿಸಿ ತಮ್ಮ ಹಕ್ಕನ್ನ ಚಲಾಯಿಸಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದರೂ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾಯಿಸಿದ ಅನ್ಸರ್ ಅಹ್ಮದ್ ಮತದ ಮಹತ್ವವನ್ನ ಸಾರಿದ್ದಾರೆ.ತಮ್ಮ ಮತದಿಂದ ಯಾವುದೇ ಅಭ್ಯರ್ಥಿ ವಂಚಿತರಾಗಬಾರದು ಎಂಬ ಉದ್ದೇಶದಿಂದ ಮತ ಚಲಾಯಿಸಿದ್ದಾಗಿ ಸಂದೇಶ ನೀಡಿದ್ದಾರೆ.
ಒಟ್ಟಾರೆ ಹೇಳೋದಾದರೇ
ಗ್ರಾಮೀಣ ಪ್ರದೇಶದಲ್ಲಿ ಕೆಲ ಸದಸ್ಯರು ತಮ್ಮ ಮತ ಚಲಾಯಿಸಲು ಹಿಂದೇಟು ಹಾಕುತ್ತಾರೆ.ಮತದ ಮಹತ್ವವನ್ನ ಸಾರಿದ ಅನ್ಸರ್ ಅಹ್ಮದ್ ರವರು ಇತರರಿಗೆ ಮಾದರಿಯಾಗಿದ್ದಾರೆ.