ಮೈಸೂರು:1 ಮೇ 2022
ನಂದಿನಿ ಮೈಸೂರು
ಬೇರೆ ಪಕ್ಷದವರು ಪ್ರಣಾಳಿಕೆ ಬಿಡುಗಡೆ ಮಾಡಿ ಚುನಾವಣೆಯಲ್ಲಿ ಗೆದ್ದ ನಂತರ ಜನರಿಗೆ ಕೊಟ್ಟ ಮಾತನ್ನೇ ಮರೆತು ಬಿಡುತ್ತಾರೆ.
ಪ್ರಣಾಳಿಕೆ ಬಿಡುಗಡೆ ಮಾಡಿದವರ ನಡವಳಿಕೆ ಬೇರೆನೇ ಇರುತ್ತದೆ.ನಾನೇನು ಪ್ರಣಾಳಿಕೆ ಬಿಡುಗಡೆ ಮಾಡುತ್ತೇನೆ ಅದೇ ರೀತಿ ನಡವಳಿಕೆ ಉಳಿಸಿಕೊಂಡು ಕೆಲಸ ಮಾಡುತ್ತೇನೆ ಎಂದು
ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಹಿನ್ನಲೆ ಸ್ವತಂತ್ರ ಅಭ್ಯರ್ಥಿಯಾಗಿರುವ ಎನ್.ಎಸ್.ವಿನಯ್ ಭರವಸೆ ನೀಡಿದರು.
ಮೈಸೂರಿನ ಜಯನಗರದ 14 ನೇ ಕ್ರಾಸ್ ನಲ್ಲಿ ನೂತನ ಕಚೇರಿಯನ್ನ ತೆರೆದಿರುವ ಎನ್. ಎಸ್.ವಿನಯ್ ರವರು ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಮುಂಬರುವ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಜೂನ್ ನಲ್ಲಿ ನಡೆಯಲಿದ್ದು ಈಗಾಗಲೇ 1 ವರೆ ವರ್ಷಗಳಿಂದ 4 ಜಿಲ್ಲೆ 29 ತಾಲೂಕಿನಲ್ಲಿ ಪ್ರವಾಸ ಕೈಗೊಂಡು ಸುಮಾರು 48 ಸಾವಿರ ನೋಂದಣೆ ಮಾಡಿಸಿದ್ದೇನೆ.ಪ್ರತಿಯೊಬ್ಬ ಪದವೀಧರನ್ನು ಭೇಟಿ ಮಾಡಿ ನೋಂದಣೆ ಮಾಡಿಸಿದ್ದೇನೆ.ಕೆಲಸ ಮಾಡುತ್ತೀರೋದು ಜನರಿಗೆ ಗೊತ್ತಿದೆ.ಐಡಿ ಕಾರ್ಡ್,ಇನ್ಸೂರೆನ್ಸ್ ಬಗ್ಗೆ ಮಾಹಿತಿ ಬೇಕಿದ್ದರೇ ಕಚೇರಿಗೆ ಬನ್ನಿ ಎಂದರು. ಚುನಾವಣೆ ಘೋಷಣೆ ಆದ ತಕ್ಷಣವೇ
ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದು ಪ್ರಣಾಳಿಕೆ ಬಿಡುಗಡೆ ಮಾಡುತ್ತೇನೆ.
ನನ್ನ ಪ್ರಣಾಳಿಕೆ ಎಲ್ಲಾ ವರ್ಗದ ಜನರಿಗೆ ಅನುಕೂಲವಾಗುವ ಹಾಗೆ ಬಿಡುಗಡೆ ಮಾಡುತ್ತೇನೆ.
ಪದವೀಧರರು ನನಗೆ ಬೆಂಬಲಿಸುವಂತೆ ಮನವಿ ಮಾಡಿದರು.