100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಣೆ,ಸರ್ಕಾರಿ ಶಾಲೆಯನ್ನು ದತ್ತು ಪಡೆದುಕೊಳ್ಳುವ ಚಿಂತನೆಯಲ್ಲಿದೇ ವಕೋ ಕರ್ನಾಟಕ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್

ನಂದಿನಿ ಮೈಸೂರು.

ಮೈಸೂರು ಜಿಲ್ಲೆಯ ಎಂಟು ಸರ್ಕಾರಿ ಶಾಲೆಗಳನ್ನ ಆಯ್ಕೆ ಮಾಡಿಕೊಂಡು ಬಡ ಮಕ್ಕಳಿಗೆ ಅನುಕೂಲವಾಗಲೇಂದು ವಕೋ ಕರ್ನಾಟಕ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಿದರು.

ಇಂದು ಮೈಸೂರಿನ ಮಹಾರಾಜ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿ ಶುಭ ಹಾರೈಸಿದರು.

ನಮ್ಮ ಸಂಸ್ಥೆ ಹಲವಾರು ಸೇವಾ ಕಾರ್ಯಕ್ರಮ ಮಾಡಿಕೊಂಡು ಬಂದಿದ್ದೇವೆ.ಇಂದು ಮಹಾರಾಜ ಶಾಲೆಯ ನೂರಾರು ವಿಧ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಿದ್ದೇವೆ.ಮೈಸೂರು ಜಿಲ್ಲೆಯ 8 ಸರ್ಕಾರಿ ಶಾಲೆಗಳಾದ ಮೈಸೂರು, ಪಿರಿಯಾಪಟ್ಟಣ, ಹುಣಸೂರು ಪುಸ್ತಕ ವಿತರಣೆ ಮಾಡಲಾಗಿದೆ.ಈಗಾಗಲೇ ಸಾವಿರ ನೋಟ್ ಪುಸ್ತಕ ವಿತರಣೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಯನ್ನು ದತ್ತು ಪಡೆದುಕೊಳ್ಳುವ ಚಿಂತನೆ ಮಾಡಿದ್ದೇವೆ ಎಂದು ಖಜಾಂಚಿ ಹರ್ಷ ಶಂಕರ್ ತಿಳಿಸಿದರು.

ವೈಸ್ ಪ್ರೀನ್ಸಿಪಲ್ ಮಹೇಶ್ ಮಾತನಾಡಿ ವಕೋ ಕರ್ನಾಟಕ ಕಿಕ್ ಬಾಕ್ಸಿಂಗ್ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ಮಹಾರಾಜ ಶಾಲೆಯ ವಿದ್ಯಾರ್ಥಿಗಳಿಗೆ ನೋಟ್ ಬುಕ್ ವಿತರಿಸಿದ್ದಾರೆ.ಇದರಿಂದ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ.ಇನ್ನೂ ಕೆಲವರು ಬಡು ಬಡವರು ಓದುತ್ತಿದ್ದಾರೆ.ಅವರಿಗೆ ಶಾಲಾ ಶುಲ್ಕ ಕಟ್ಟಲೂ ಸಹ ಆಗುತ್ತಿಲ್ಲ ಅಂತವರಿಗೂ ಸಹಾಯ ಮಾಡುವಂತೆ ದಾನಿಗಳಿಗೆ ಮಾಧ್ಯಮಗಳ ಮೂಲಕ ಮನವಿ ಮಾಡಿದರು‌

ಸಂಸ್ಥೆಯ ಅಧ್ಯಕ್ಷರಾದ ಸಂತೋಷ್,
ಜನರಲ್ ಸೆಕ್ರೇಟರಿ ಪೂಜಾ ಹರ್ಷ,ಖಂಜಾಚಿ
ಹರ್ಷ ಶಂಕರ್,ವಕೋ ಇಂಟರ್ ನ್ಯಾಷನಲ್ ಮೆಡಲಿಸ್ಟ್
ಶ್ರೇಷ್ಠ ಶಂಕರ್ ಸೇರಿದಂತೆ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

 

Leave a Reply

Your email address will not be published. Required fields are marked *