ಪತ್ರಕರ್ತ ಕಿಶೋರ್‌ ಗೆ ಕಾಯಕ ಯೋಗಿ ಪ್ರಶಸ್ತಿ

ನಂದಿನಿ ಮೈಸೂರು

ಮೈಸೂರು : ಸೂರ್ಯ ಸುದ್ದಿ ಕನ್ನಡ ವಾಹಿನಿ ವ್ಯವಸ್ಥಾಪಕ, ಸಾಮಾಜಿಕ ಕಳಕಳಿಯುಳ್ಳ ಕಿರಿಯ ಪತ್ರಕರ್ತ ಕಿಶೋರ್‌ ನಾಗ್‌ಗೆ ಮೈಸೂರು ಕನ್ನಡ ವೇದಿಕೆಯಿಂದ ಕಾಯಕ ಯೋಗಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.


ಗುರುವಾರ ಬೆಳಿಗ್ಗೆ ನಗರದ ಸುಬ್ಬರಾಯನ ಕೆರೆ ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನದಲ್ಲಿ ನಡೆದ ಸಮಾರಂಬದಲ್ಲಿ ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಹರೀಶ್‌ಗೌಡ ಅವರು ಕಿಶೋರ್‌ಗೆ ಶಾಲು ಹೊದಿಸಿ, ಹಾರ ಹಾಕಿ ಪ್ರಶಸ್ತಿ ಫಲಕ ನೀಡಿ ಗೌರವಿಸಿದರು.
ಬಳಿಕ ಅವರು ಮಾತನಾಡಿ, ಮೈಸೂರು ಕನ್ನಡ ವೇದಿಕೆಯು ಪ್ರತಿ ವರ್ಷ ಸಮಾಜದ ವಿವಿಧ ಕಾರ್ಯಕ್ಷೇತ್ರಗಳಲ್ಲಿ ಪ್ರಾಮಾಣಿಕವಾಗಿ ದುಡಿದ ಸಾಧಕರನ್ನು ಗುರುತಿಸಿ ಗೌರವಿಸುತ್ತಿದೆ, ವೇದಿಕೆಯ ಈ ಕಾರ್ಯ ಶ್ಲಾಘನೀಯ ಸಾಧಕರನ್ನು ಗುರುತಿಸಿ ಗೌರವಿಸುವುದರಿಂದ ಮತ್ತಷ್ಟು ಜನರಿಗೆ ಪ್ರಾಮಾಣಿಕ ಸೇವೆ ಮಅಡಲು ಪ್ರೇರಣೆಯಾಗುತ್ತದೆ. ಈ ನಿಟ್ಟಿನಲ್ಲಿ ತಮ್ಮ ಚಿಕ್ಕ ವಯಸ್ಸಿನಲ್ಲಿಯೇ ಮಾಧ್ಯಮ ಲೋಕದಲ್ಲಿ ಉತ್ತಮ ಸಾಧನೆ ಮಾಡಿರುವ ಪ್ರಾಮಾಣಿಕ ಪತ್ರಕರ್ತ ಕಿಶೋರ್‌ನಾಗ್‌ ಅವರನ್ನು ವೇದಿಕೆ ಗುರುತಿಸಿ ಗೌರವಿಸುತ್ತಿರುವುದು ವಿಶೇಷವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪೌರ ಕಾರ್ಮಿಕ ಕುಮಾರ್‌, ಶುಶ್ರೂಷಕಿ ಕೋಮಲ, ಗಾರೆ ಕೆಲಸ ಮಾಡುವ ಚಲುವರಾಜು, ಬ್ಯೂಟೀಷಿಯನ್‌ ಮೀನಾಕ್ಷಿ ವಿಜಯ್‌ , ಪ್ಲಂಬರ್‌ ಸುರೇಶ್‌ ಕುಮಾರ್‌, ಪಾನ್‌ಬೀಡಾ ಧನೋಜಿರಾವ್‌, ಅಡುಗೆ ಭಟ್ಟ ಮಹೇಶ್‌ ಕುಮಾರ್‌, ಟೈಲ್ಸ್‌ ಕೆಲಸ ಮಾಡುವ ನಾಗರಾಜು ಮತ್ತು ಆಟೋಚಾಲಕ ನವೀನ್‌ ಕುಮಾರ್‌ ಅವರನ್ನೂ ಸಹ ಗೌರವಿಸಲಾಯಿತು.

ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಎಸ್‌.ಬಾಲಕೃಷ್ಣ, ಎಪಿಎನ್‌ ವ್ಯವಸ್ಥಾಪಕ ಪಾಲುದಾರ ಎ.ಪಿ.ನಾಗೇಶ್‌, ನಾಲಾಬೀದಿ ರವಿ, ಬೋಗಾದಿ ಸಿದ್ದೇಗೌಡ, ಗುರುಬಸಪ್ಪ, ಪ್ಯಾಲೇಸ್‌ ಬಾಬು, ಗೋಪಿ, ಮದನ್‌, ಮಾದಪ್ಪ, ಸುನೀಲ್‌, ಕಾವೇರಮ್ಮ, ಮಾಲಿನಿ, ಮನೋಹರ, ಪೂರ್ಣಿಮ, ಸ್ವಾಮಿ, ಬಸವರಾಜು, ಸಿದ್ದಪ್ಪ, ಗೋವಿಂದರಾಜು, ಮಹದೇವಸ್ವಾಮಿ ಮುಂತಾದವರು ಇದ್ದರು.

Leave a Reply

Your email address will not be published. Required fields are marked *