ಉದ್ದಿಮೆ ಪರವಾನಗಿ ಪಡೆಯದ ಮಳಿಗೆ ಮುಚ್ಚಿಸಿದ ಅಧಿಕಾರಿಗಳು

 

ಮೈಸೂರು:23 ಸೆಪ್ಟೆಂಬರ್ 2021

ನ@ದಿನಿ

ಅಧಿಕೃತ ಉದ್ದಿಮೆ ಪರವಾನಿಗೆಯನ್ನು ಪಡೆಯದೆ ಉದ್ದಿಮೆ ನಡೆಸುತ್ತಿದ್ದಂತಹ ಅಂಗಡಿ ಮತ್ತು ಮಳಿಗೆಗಳನ್ನು ಶ್ರೀರಾಂಪುರ ಪಟ್ಟಣ ಪಂಚಾಯತಿಯ ಮುಖ್ಯ ಅಧಿಕಾರಿ ಎ ಎಂ ಶ್ರೀಧರ್ ಅವರ ನೇತೃತ್ವದಲ್ಲಿ ಮುಚ್ಚಿಸಲಾಯಿತು.

ಶ್ರೀರಾಂಪುರ ಪಟ್ಟಣ ಪಂಚಾಯತಿಯಿಂದ ಅಧಿಕೃತ ಉದ್ದಿಮೆ ಪರವಾನಗಿಯನ್ನು ಪಡೆಯಬೇಕೆಂದು ಕಡ್ಡಾಯ ಗೊಳಿಸಲಾಗಿತ್ತು.ಎಲ್ಲಾ ಅಂಗಡಿ ಮಳಿಗೆಗಳಿಗೆ ನೋಟಿಸ್ ನೀಡಲಾಗಿತ್ತು.

1964 ನೇ ಕರ್ನಾಟಕ ಪೌರಸಭೆಯಗಳ ಅಧಿನಿಯಮ ಕಲಂ 256 { 6 ) ರ ಅನ್ವಯ ದಂಡ ವಿಧಿಸುದ್ದದಲ್ಲದೆ 2567 ) – ಪ್ರಕಾರ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲು ಮಾಡಲಾಗುವುದು ಹಾಗೂ ಉದ್ದಿಮೆ ಮುಚ್ಚಿಸಲು ಕ್ರಮವಹಿಸಲಾಗುವುದು .

ಇದೆ ಸಂಧರ್ಭದಲ್ಲಿ ಶ್ರೀರಾಂಪುರ ಪಟ್ಟಣ ಪಂಚಾಯತಿಯ ಅಧಿಕಾರಿಗಳು ಮತ್ತು ಪೋಲಿಸ್ ಅಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *