ಡಾ.ವಿಷ್ಣುವರ್ಧನ್ ಪ್ರತಿಮೆ ಧ್ವಂಸ, ಪ್ರತಿಮೆ ನಿರ್ಮಾಣಕ್ಕಾಗಿ ಮಹಾಪೌರರಿಗೆ ಮನವಿ

 

ಮೈಸೂರು :23 ಸೆಪ್ಟೆಂಬರ್ 2021

*ನ@ದಿನಿ*

ಡಾ.ವಿಷ್ಣು ಸೇನಾ ಸಮಿತಿ ವತಿಯಿಂದ 
ಡಾ.ವಿಷ್ಣುವರ್ಧನ್ ರವರ ಪ್ರತಿಮೆ ಧ್ವಂಸ ಖಂಡನೀಯ ಹಾಗೂ
ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಮುಂಭಾಗದಲ್ಲಿರುವ ಸಾಹಸಸಿಂಹ ಡಾ.ವಿಷ್ಣುವರ್ಧನ್ ರವರ ಉದ್ಯಾನವನಕ್ಕೆ ವಿಷ್ಣುವರ್ಧನ್ ಪ್ರತಿಮೆ ನಿರ್ಮಾಣಕ್ಕಾಗಿ ಮೈಸೂರು ಮಹಾಪೌರರಿಗೆ ಮನವಿ ಸಲ್ಲಿಸಲಾಯಿತು.ಆನಂತರ ಮಹಾನಗರ ಪಾಲಿಕೆ ಆಯುಕ್ತರಿಗೂ ಸಹ ಮನವಿ ಸಲ್ಲಿಸಲಾಯಿತು ಹಾಗೂ ನಗರಪಾಲಿಕೆ ಆಡಳಿತ ಪಕ್ಷದ ಶಿವಕುಮಾರ್ ಅವರಿಗೂ ಮನವಿ ಸಲ್ಲಿಸಲಾಯಿತು.

ಮನವಿ ಸಲ್ಲಿಸಿ ಮಾತನಾಡಿದ ವಿಷ್ಣು ಸೇನಾ ಸಮಿತಿ ಅಧ್ಯಕ್ಷರಾದ ಎಂ ಡಿ ಪಾರ್ಥಸಾರಥಿ ಡಾ.ವಿಷ್ಣುವರ್ಧನ್ ಹುಟ್ಟುಹಬ್ಬದ ಪ್ರಯುಕ್ತವಾಗಿ ಸುಮಾರು11 ವರ್ಷಗಳಿಂದ ಹುಟ್ಟುಹಬ್ಬ ಮತ್ತು ಪುಣ್ಯ ಸ್ಮರಣೆ ನಿರಂತರವಾಗಿ ಉದ್ಯಾನವನದ ಒಳಗಡೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಬಂದಿದ್ದೇವೆ .
ಹಾಗೂ ಉದ್ಯಾನದಲ್ಲಿ ಪ್ರತಿಮೆಯನ್ನು ನಿರ್ಮಿಸಲು ಹಲವಾರು ಬಾರಿ ಹೋರಾಟಗಳನ್ನು ಮಾಡಿಕೊಂಡು ಬಂದಿದ್ದೇವೆ ಡಾಾ. ವಿಷ್ಣುವರ್ಧನ್ ರವರ ಉದ್ಯಾನವನಕ್ಕೆ ತಾತ್ಕಾಲಿಕವಾಗಿ ನಾಮಕರಣಗೊಂಡಿದು ಅದನ್ನು ಶಾಶ್ವತವಾಗಿ ಡಾ. ವಿಷ್ಣುವರ್ಧನ ಎಂದು ನಾಮಕರಣ ಮಾಡಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತೇವೆ .

ಮೈಸೂರಿನ ಜಿಲ್ಲಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರಿಗೂ ಹಾಗೂ ಮೈಸೂರು ನಗರಪಾಲಿಕೆ ಹಾಗೂ ಅರಮನೆ ಮಂಡಳಿಗೆ ಸಹ ನಾವು ಮನವಿಯನ್ನು ನೀಡಿದ್ದೇವೆ ಎಲ್ಲರೂ 65 ಜನ ನಗರ ಪಾಲಿಕೆ ಸದಸ್ಯರಿಗೂ ಸಹ ಕೌನ್ಸಿಲ್ ನಲ್ಲಿ ಪ್ರತಿಮೆಯ ಬಗ್ಗೆ ಎಲ್ಲರೂ ಒಗ್ಗೂಡಿ ಮನವಿಯನ್ನು ಪುರಸ್ಕರಿಸಿ ಪ್ರತಿಮೆ ನಿರ್ಮಾಣ ಮಾಡಲು ಸಹಕರಿಸಿದ್ದರು ಆದರೂ ಸಹ ಪ್ರತಿಮೆ ನಿರ್ಮಾಣವಾಗಿಲ್ಲ ಅಭಿಮಾನಿಗಳಿಗೆ ಇದು ತುಂಬಾ ನೋವಿನ ಸಂಗತಿ
ಡಾ.ವಿಷ್ಣುವರ್ಧನ್ ರವರು ಮೈಸೂರಿನ ಒಬ್ಬ ಪಂಚಭಾಷಾ ನಟ ಹಾಗೂ ಸುಮಾರು ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಸಮಾಜಕ್ಕೆ ಸ್ಫೂರ್ತಿಯಾಗಿದ್ದವರು ಎಡಗೈನಿಂದ ಕೊಟ್ಟಿದ್ದು ಬಲಗೈಗೆ ಗೊತ್ತಿಲ್ಲ ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಿಲ್ಲ. ಅಂತಹ ಮಹಾನ್ ನಟನ ಪ್ರತಿಮೆಯನ್ನು ನಿರ್ಮಾಣ ಮಾಡಲು ಏಕೆ ತಡವಾಯಿತು ಆದ್ದರಿಂದ ತಮ್ಮಲ್ಲಿ ಮನವಿ ಏನೆಂದರೆ ತಮ್ಮ ಅವಧಿಯಲ್ಲಾದರೂ ಈ 1 ಕಾರ್ಯವನ್ನು ಆದಷ್ಟು ಬೇಗ ಕರ್ನಾಟಕ ರಾಜ್ಯದ ಜನತೆ ನೆನಪಿನಲ್ಲಿಟ್ಟುಕೊಳ್ಳುವಂತಹ ಕೆಲಸ ನಿಮ್ಮಿಂದ ಸಾಧ್ಯವಾಗುತ್ತದೆ ಎಂದು ಎಲ್ಲಾ ಕರ್ನಾಟಕದ ವಿಷ್ಣು ಅಭಿಮಾನಿಗಳ ಮನವಿ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ
ಅಖಿಲ ಕರ್ನಾಟಕ ಡಾಕ್ಟರ್ ರಾಜ್ ಕುಮಾರ್ ಸಂಸ್ಥಾಪಕರಾದ ಅಧ್ಯಕ್ಷರು ರಾಮೇಗೌಡ್ರು ,
ಗಾಂಧಿ ಚೌಕ ಟ್ಯಾಕ್ಸಿ ಚಾಲಕರ ಸದಸ್ಯರು ಮುಬಾರಕ್,ಮಂಜು ಮಹದೇವ್,
ಲಕ್ಷ್ಮೀ ಟಾಕೀಸ್ ಡಬಲ್ ರೋಡ್ ವಿಷ್ಣು ಅಭಿಮಾನಿಗಳ ಬಳಗದ ಸದಸ್ಯರು
ಬಸವರಾಜು ,ಪಾಪು,ರಾಜು,ಪ್ರಸನ್ನ,ಚಿನ್ನ ಬೆಳ್ಳಿ ಸಿದ್ದಪ್ಪ ,ಸಂತೋಷ್ ನವೀನ್ ,ಚಕ್ರಪಾಣಿ,ಪ್ರವೀಣ್ ,ಕುಮಾರ್ ,ನವೀನ್ ಕೆಂಪಿ ,ಹರೀಶ್ ನಾಯ್ಡು ,
ಹಾಗೂ ಹತ್ತಾರು ಕನ್ನಡ ಪರ ಸಂಘಟನೆಗಳು ಹಾಜರಿದ್ದರು.

Leave a Reply

Your email address will not be published. Required fields are marked *