ಎನ್.ಎಮ್ ನವೀನ್ ಕುಮಾರ್ ರವರಿಗೆ ಮೂಡ ಅಧ್ಯಕ್ಷ ಸ್ಥಾನ ಕೊಡವಂತೆ ಸಚಿವ ದಿನೇಶ ಗುಂಡೂರಾವ್ ರವರಲ್ಲಿ ಬ್ರಾಹ್ಮಣ ಮುಖಂಡರು ಮನವಿ

ನಂದಿನಿ ಮೈಸೂರು

ಎನ್.ಎಮ್ ನವೀನ್ ಕುಮಾರ್ ರವರಿಗೆ ಮೂಡ ಅಧ್ಯಕ್ಷ ಸ್ಥಾನ ಕೊಡವಂತೆ ಸಚಿವ ದಿನೇಶ ಗುಂಡೂರಾವ್ ರವರಲ್ಲಿ ಬ್ರಾಹ್ಮಣ ಮುಖಂಡರು ಮನವಿ.

ಕರ್ನಾಟಕ ಸರ್ಕಾರದ ಆರೋಗ್ಯ ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ರವರನ್ನ ಮೈಸೂರು ಬ್ರಾಹ್ಮಣ ಸಂಘದ ಮುಖಂಡರು ಜಲದರ್ಶಿನಿ ಅತಿಥಿ ಗೃಹದಲ್ಲಿ ಅಭಿನಂದಿಸಿದರು, ಇದೇ ವೇಳೆ ಕಾಂಗ್ರೆಸ್ ಯುವ ಮುಖಂಡರಾದ ಎನ್.ಎಮ್ ನವೀನ್ ಕುಮಾರ್ ರವರಿಗೆ ಮೂಡ ಅಧ್ಯಕ್ಷ ಸ್ಥಾನ ಕೊಡುವಂತೆ ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಇನ್ನಿತರ ವಿಪ್ರನಾಯಕರಿಗೆ ನಿಗಮಮಂಡಳಿಗಳಲ್ಲಿ ಅವಕಾಶ ಕಲ್ಪಿಸಿಕೊಡುವಂತೆ ವಿಪ್ರ ಮುಖಂಡರು ಮನವಿ ಮಾಡಿದರು.

ಇದೇ ವೇಳೆ ಮಾನ್ಯ ಸಚಿವರಾದ ದಿನೇಶ್ ಗುಂಡೂರಾವ್ ರವರು ಮಾತನಾಡಿ ಬ್ರಾಹ್ಮಣರು ಸರ್ಕಾರಿ ಸವಲತ್ತನ್ನು ಬಳಸಿಕೊಳ್ಳಲು ಮುಂದಾಗಬೇಕು, ನಮ್ಮ ತಂದೆಯವರಾದ ಮಾಜಿ ಮುಖ್ಯಮಂತ್ರಿ ದಿ. ಗುಂಡೂರಾಯರ ಕಾಲದಲ್ಲಿ ಅರ್ಚಕರು ಪುರೋಹಿತರಿಗೆ ತಸ್ಥಿಕ್ ಯೋಜನೆ ಸೇರಿದಂತೆ ಶಿಕ್ಷಕರ ನೇಮಕಾತಿ ಸಾಂಸ್ಕೃತಿಕ ರಂಗ ಮಂದಿರಗಳು ಇಂದಿಗೂ ವಿಪ್ರ ಸಮಾಜ ಸ್ಮರಿಸುತ್ತದೆ ಅವರು ಹಾಕಿಕೊಟ್ಟ ಮಾರ್ಗದಲ್ಲೇ ಸಂಘಟನಾತ್ಮಕವಾಗಿ ನಡೆಯುತ್ತಿದ್ದೇನೆ, ವಿಪ್ರ ಸಂಘ ಸಂಸ್ಥೆಗಳು ಸರ್ಕಾರಿ ಸವಲತ್ತನ್ನು ಅರ್ಹ ಬಡ ಸ್ವಾಭಿಮಾನಿ ಕುಟುಂಬಗಳಿಗೆ ತಲುಪಿಸಲು ಶ್ರಮಿಸಬೇಕು ಎಂದರು,

ನಂತರ ಹಿರಿಯ ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ ರವರು ಮಾತನಾಡಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಯೋಜನೆಗಳು ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರಿಗೆ ತಲುಪಲು ಇ.ಡಬ್ಲ್ಯು.ಎಸ್ ಸರ್ಟಿಫಿಕೇಟ್ ಮಾನದಂಡ ಸಡಿಲಗೊಳಿಸಬೇಕು ಮತ್ತು ಅರ್ಚಕ ಪುರೋಹಿತರಿಗೆ ತಸ್ಥಿಕ್ ಗೌರವಧನ‌ ಹೆಚ್ಚಿಸಲು ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದರು,

ನಂತರ ಮೈಸೂರು ಬ್ರಾಹ್ಮಣ ಯುವ ವೇದಿಕೆಯ ಅಧ್ಯಕ್ಷ ಹೆಚ್.ಎನ್ ಶ್ರೀಧರಮೂರ್ತಿ ರವರು ಮಾತನಾಡಿ ಬ್ರಾಹ್ಮಣರು ಕೃಷ್ಣರಾಜ ಕ್ಷೇತ್ರದಲ್ಲಿ 60ಸಾವಿರಕ್ಕೂ ಹೆಚ್ಚು ಮಂದಿಯಿದ್ದು ಮೈಸೂರಿನ ಜಿಲ್ಲೆಯಲ್ಲಿ 2ಲಕ್ಷಕ್ಕೂ ಹೆಚ್ಚು ಬ್ರಾಹ್ಮಣರಿದ್ದಾರೆ, ಕಾಂಗ್ರೆಸ್ ಯುವ ಮುಖಂಡ ಎನ್.ಎಮ್ ನವೀನ್ ಕುಮಾರ್ ರವರು ಅತಿ ಹೆಚ್ಚಿನ ಸದಸ್ಯತ್ವ ಮಾಡಿದ್ದು ಸಂಘಟನಾತ್ಮಕವಾಗಿ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದ್ದಿದ್ದಾರೆ ಅವರಿಗೆ ಮೂಡ ಅಧ್ಯಕ್ಷ ಸ್ಥಾನ ಕಲ್ಪಿಸುವಂತೆ ಮನವಿ ಮಾಡಿದರು, ಮತ್ತು ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರಾಗಿ ವಿವಿಧ ಹಂತದಲ್ಲಿ ದುಡಿಯುತ್ತಿರುವ ಬ್ರಾಹ್ಮಣನ್ನು ಪರಿಗಣಿಸಿ ನಿಗಮ ಮಂಡಳಿಗಳಲ್ಲಿ ಉತ್ತಮ ಅವಕಾಶ ಕಲ್ಪಿಸಕೊಡಬೇಕಾಗಿ ಮನವಿ ಮಾಡಿದರು,

ಇದೇ ಸಂಧರ್ಭದಲ್ಲಿ ವೆಂಗಿಪುರಮಠದ ಇಳೈ ಆಳ್ವಾರ್ ಸ್ವಾಮೀಜಿ, ಹಿರಿಯ ಸಮಾಜಸೇವಕ ಕೆ.ರಘುರಾಂ ವಾಜಪೇಯಿ, ಅರ್ಚಕ ಪುರೋಹಿತ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಮೈಸೂರು ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷ ಹೆಚ್.ಎನ್ ಶ್ರೀಧರಮೂರ್ತಿ, ಕುಶಾಲನಗರ ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡೂರಾವ್, ಸೋಸಲೆ ಬ್ರಾಹ್ಮಣ ಸಂಘದ ಶ್ರೀಕಾಂತ್ ಕಶ್ಯಪ್, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಿರ್ಲೆ ಫಣೀಶ್, ವಿಘ್ನೇಶ್ವರ ಭಟ್, ಚಕ್ರಪಾಣಿ, ಸುಚೀಂದ್ರ, ಶ್ರೀನಿವಾಸ್, ಸುದರ್ಶನ್, ಗೋಪಾಲರಾವ್, ಸತ್ಯನಾರಾಯಣ್, ರಂಗನಾಥ್, ಬಾಲಕೃಷ್ಣ ಇನ್ನಿತರರು

Leave a Reply

Your email address will not be published. Required fields are marked *