ಎಲ್ಲ ಕೆಲಸಕ್ಕೂ ಗೌರವವಿದೆ ಹಾಗೆಯೇ ಪತ್ರಿಕಾ ವಿತರಣೆ ಕೆಲಸಕ್ಕೂ ಗೌರವವಿದೆ: ಗುರುಪಾದ ಸ್ವಾಮಿ

ನಂದಿನಿ ಮೈಸೂರು

ಎಲ್ಲ ಕೆಲಸಕ್ಕೂ ಗೌರವವಿದೆ ಹಾಗೆಯೇ ಪತ್ರಿಕಾ ವಿತರಣೆ ಕೆಲಸಕ್ಕೂ ಗೌರವವಿದೆ: ಗುರುಪಾದ ಸ್ವಾಮಿ

ಪತ್ರಿಕೆ ವಿತರಣೆಯೆಂದರೆ ಸಣ್ಣ ಕೆಲಸವಲ್ಲ. ಎಲ್ಲ ಕೆಲಸಕ್ಕೂ ಅದರದೇ ಆದ ಗೌರವವಿದೆ.
ಪತ್ರಿಕೆ ಎಷ್ಟೇ ಮುದ್ರಣವಾದರೂ ಓದುಗರನ್ನು ತಲುಪಿದಾಗಲೇ ಸಾರ್ಥಕವಾಗುವುದು. ಬೆಳಿಗ್ಗೆ ಪತ್ರಿಕೆ ಬರದಿದ್ದರೆ ಎಲ್ಲರಿಗೂ ನೆನಪಾಗುವುದು ವಿತರಕರು ಎಂದು ಕೆಪಿಸಿಸಿ ಕಾರ್ಯದರ್ಶಿಯಾದ ಗುರುಪಾದ ಸ್ವಾಮಿ ಹೇಳಿದರು.

ಪತ್ರಿಕೆಗಳ ಬೆನ್ನೆಲುಬಾಗಿರುವ ಪತ್ರಿಕಾ ವಿತರಕರ ದಿನಾಚರಣೆಯ ಸಂದರ್ಭ
ಚಾಮುಂಡಿಪುರಂನಲ್ಲಿರುವ ಅಪೂರ್ವ ಹೋಟೆಲ್ ಸಭಾಂಗಣದಲ್ಲಿ
ಅಪೂರ್ವ ಸ್ನೇಹ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಹಿರಿಯ ಪತ್ರಕ ವಿತರಕಾರ ಸನ್ಮಾನ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಅವರು ಮಾತನಾಡಿದರು.
ಕೊರೋನಾದಂಥ ಸಂಕಷ್ಟದ ಸಮಯದಲ್ಲಿ ಕೂಡ ಪ್ರಾಣಕ್ಕೆ ಹೆದರದೆ ಸಮಯಕ್ಕೆ ಸರಿಯಾಗಿ ಪತ್ರಿಕೆಗಳನ್ನು ಮುಟ್ಟಿಸುವ ಕೆಲಸವನ್ನು ವಿತರಕರು ಮಾಡುತ್ತಾರೆ. ಅವರನ್ನು ಸನ್ಮಾನಿಸುವುದು ತುಂಬ ದೊಡ್ಡ ಕೆಲಸ ಎಂದು ಅವರು ಹೇಳಿದರು.

ಹಿರಿಯ ಪತ್ರಿಕಾ ವಿತರಕರಾದ ಚಂದ್ರು, ಲೋಕೇಶ್, ಮಹದೇವ್, ಎಂ ಪಿ ಗುಂಡಪ್ಪ, ಕನಕ ರತ್ನ, ರಾಮಚಂದ್ರು, ಪ್ರಭಾಕರ್, ರವರಿಗೆ
ಆತ್ಮೀಯವಾಗಿ ಸನ್ಮಾನಿಸಲಾಯಿತು.

ಪತ್ರಿಕಾ ಪ್ರತಿನಿಧಿಗಳ ಸಂಘದ ಪ್ರಧಾನ ಕಾರ್ಯದರ್ಶಿ ರವಿ ಮಾತನಾಡಿ ಪತ್ರಿಕಾ ವಿಚಾರಿಕರಿಗೆ ಆರೋಗ್ಯ ವಿಮೆ, ಪತ್ರಿಕಾ ವಿತರಕರಿಗೆ ಪತ್ರಿಕೆ ವಿತರಿಸಲು ಶಾಶ್ವತ ಸೂರು ವ್ಯವಸ್ಥೆ, ಹಾಗೂ ಈ ಹಿಂದೆ ಸರ್ಕಾರ ಘೋಷಣೆ ಮಾಡಿದ ಪತ್ರಕ ವಿತರಕರ ಕ್ಷೇಮಾವೃದ್ದಿ ಸಂಘದ ನಿಧಿಯನ್ನು ಈ ಕೂಡಲೇ ಬಿಡುಗಡೆಗೊಳಿಸಬೇಕು, ಅದರಿಂದ ಪತ್ರಕ ವಿತರಕರಿಗೆ ಅನುಕೂಲವಾಗುತ್ತದೆ, ಹಾಗೂ ಸರ್ಕಾರದ ವತಿಯಿಂದ ಪ್ರತಿವರ್ಷ ಪತ್ರಿಕಾ ವಿತರಕರನ್ನು ಗುರುತಿಸಿ ಸನ್ಮಾನಿಸುವ ಕಾರ್ಯಕ್ಕೆ ಮುಂದಾಗ ಬೇಕೆಂದು ಮನವಿ ಮಾಡಿದರು ,

ಇದೇ ಸಂದರ್ಭದಲ್ಲಿ ಕೆಪಿಸಿಸಿ ಕಾರ್ಯದರ್ಶಿಯಾದ ಗುರುಪಾದ ಸ್ವಾಮಿ ನಜರ್ಬಾದ್ ನಟರಾಜ್, ಪತ್ರಿಕಾ ಪ್ರತಿನಿಧಿಗಳ ಸಂಘದ ಪ್ರಧಾನ ಕಾರ್ಯದರ್ಶಿ ರವಿ, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಅಪೂರ್ವ ಸ್ನೇಹ ಬಳಗದ ಅಧ್ಯಕ್ಷರಾದ ಅಪೂರ್ವ ಸುರೇಶ್, ಉದ್ಯಮಿಜಯರಾಮ್, ಕಾಂಗ್ರೆಸ್ ಮುಖಂಡರಾದ ಶ್ರೀಪಾಲ್, ಹೊಯ್ಸಳ ಟ್ರಸ್ಟ್ ಅಧ್ಯಕ್ಷರಾದ ಎಂ ಪಿ ರಾಜೇಶ್, ಮಂಜೇಗೌಡನ ಕೊಪ್ಪಲು ರವಿ ,ಲೋಕೇಶ್, ವರುಣ ಮಹದೇವ್ , ಯೋಗೇಶ್ ಯಾದವ್, ಬಸವಣ್ಣ ಹಾಗೂ ಇನ್ನಿತರರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *