ವೋಟ್ ಬ್ಯಾಂಕ್ ಮತ್ತು ತುಷ್ಟೀಕರಣ ರಾಜಕಾರಣಕ್ಕಾಗಿ INDIA ಮೈತ್ರಿಕೂಟದ ನಾಯಕರು ಹಿಂದೂ ಧರ್ಮವನ್ನು ನಾಶಮಾಡಲು ಬಯಸುತ್ತಿದ್ದಾರೆ – ಅಮಿತ್ ಶಾ

*ವೋಟ್ ಬ್ಯಾಂಕ್ ಮತ್ತು ತುಷ್ಟೀಕರಣ ರಾಜಕಾರಣಕ್ಕಾಗಿ INDIA ಮೈತ್ರಿಕೂಟದ ನಾಯಕರು ಹಿಂದೂ ಧರ್ಮವನ್ನು ನಾಶಮಾಡಲು ಬಯಸುತ್ತಿದ್ದಾರೆ – ಅಮಿತ್ ಶ*

ಕೇಂದ್ರ ಸಚಿವ ಶಾ ಅವರು ರಾಜಸ್ಥಾನದ ಡುಂಗರ್‌ಪುರದಿಂದ ಬಿಜೆಪಿಯ ಪರಿವರ್ತನ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮಾಜಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ವಯನಾಡ್ ಸಂಸದ ರಾಹುಲ್ ಗಾಂಧಿ ಹಿಂದೂ ವಿರೋಧಿ ಎಂದು ಅಮಿತ್ ಶಾ ಆರೋಪಿಸಿದರು. ಲಷ್ಕರ್-ಎ-ತೊಯ್ಬಾಗಿಂತ ಹಿಂದೂ ಸಂಘಟನೆಗಳು ಅಪಾಯಕಾರಿ ಎಂದು ರಾಹುಲ್ ಗಾಂಧಿ ಬಣ್ಣಿಸಿದ್ದಾರೆ ಎಂದು ಅಮಿತ್ ಶಾ ಹೇಳಿದ್ದಾರೆ. “ರಾಹುಲ್ ಬಾಬಾ, ನೀವು ಹಿಂದೂ ಸಂಘಟನೆಗಳನ್ನು ಲಷ್ಕರ್-ಎ-ತೊಯ್ಬಾದೊಂದಿಗೆ ಹೋಲಿಸುತ್ತಿದ್ದೀರಿ, ಆದರೆ ನಿಮ್ಮ ಗೃಹ ಸಚಿವರು ಹಿಂದೂ ಭಯೋತ್ಪಾದನೆ ನಡೆಯುತ್ತಿದೆ ಎಂದು ಹೇಳುತ್ತಿದ್ದರು” ಎಂದು ಶಾ ಹೇಳಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, “ ಕಳೆದ ಎರಡು ದಿನಗಳಿಂದ, INDIA ಒಕ್ಕೂಟವು ಈ ದೇಶದ ಸಂಸ್ಕೃತಿ, ದೇಶದ ಇತಿಹಾಸ, ಸನಾತನ ಧರ್ಮಕ್ಕೆ ಅವಮಾನ ಮಾಡುತ್ತಿದ್ದಾರೆ. ಇಂಡಿಯಾ ಒಕ್ಕೂಟದ ಎರಡು ಪ್ರಮುಖ ಪಕ್ಷಗಳಾದ ಡಿಎಂಕೆ ಮತ್ತು ಕಾಂಗ್ರೆಸ್ ಮತ್ತು ಅವರ ಇಬ್ಬರು ದೊಡ್ಡ ನಾಯಕರ ಮಕ್ಕಳು – ಒಬ್ಬರು ಮಾಜಿ ಹಣಕಾಸು ಸಚಿವರ ಮಗ ಮತ್ತು ಒಬ್ಬರು ತಮಿಳುನಾಡು ಮುಖ್ಯಮಂತ್ರಿಯ ಮಗ ಡೆಂಗ್ಯೂ, ಮಲೇರಿಯಾ ಮತ್ತು ಕರೋನಾ ಹಾಗೆ ಸನಾತನ ಧರ್ಮವನ್ನು ತೊಡೆದುಹಾಕಬೇಕು ಎಂದು ಹೇಳುತ್ತಿದ್ದಾರೆ. ತುಷ್ಟೀಕರಣ ಮತ್ತು ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಈ ಜನ ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಬಗ್ಗೆ ಮಾತನಾಡುತ್ತಿದ್ದಾರೆ. ಇಂಡಿಯಾ ಮೈತ್ರಿಕೂಟ ಜನರು ನಮ್ಮ ಸಂಸ್ಕೃತಿ, ಇತಿಹಾಸ ಮತ್ತು ಸನಾತನ ಧರ್ಮವನ್ನು ಮೊದಲ ಬಾರಿಗೆ ಅವಮಾನಿಸಿಲ್ಲ, ಅವರ ನಾಯಕರು ಯಾವಾಗಲೂ ನಮ್ಮ ಶ್ರೇಷ್ಠ ಸಂಸ್ಕೃತಿಯನ್ನು ಅವಮಾನಿಸುತ್ತಿದ್ದಾರೆ” ಎಂದರು.

ಪ್ರತಿಪಕ್ಷಗಳ ಮೈತ್ರಿಯನ್ನು ಗುರಿಯಾಗಿಸಿಕೊಂಡ ಅಮಿತ್ ಶಾ, “ಈ ಅಹಂಕಾರಿ ಮೈತ್ರಿಕೂಟ’ ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಯಾವುದೇ ಹಂತಕ್ಕೂ ಹೋಗಬಹುದು. ಮೋದಿ ಗೆದ್ದರೆ ಸನಾತನ ರಾಜ್ಯ ಬರುತ್ತದೆ ಎಂದು ಹೇಳಿದ ಶಾ ಸನಾತನ ಧರ್ಮ ಜನರ ಹೃದಯವನ್ನು ಆಳುತ್ತಿದೆ ಎಂದರು. ಪ್ರಧಾನಿ ಮೋದಿಯವರು ಹೇಳಿದ ಪ್ರಕಾರ ಭಾರತವು ಸಂವಿಧಾನದ ಪ್ರಕಾರ ನಡೆಯುತ್ತದೆ ಎಂದರು.

ಈ ದುರಹಂಕಾರಿ ಸಮ್ಮಿಶ್ರ ಇಂಡಿಯಾ ಒಕ್ಕೂಟ, ಅದರ ಪ್ರಮುಖ ಪಕ್ಷವಾದ ಕಾಂಗ್ರೆಸ್ ವರ್ಷಗಳ ಕಾಲ ಶ್ರೀರಾಮ ಮಂದಿರ ನಿರ್ಮಾಣವನ್ನು ನಿಲ್ಲಿಸಿತ್ತು ಎಂದು ಶ್ರೀಯುತ ಶಾ ಹೇಳಿದರು. ಸ್ವಾತಂತ್ರ್ಯ ಬಂದು 75 ವರ್ಷಗಳಾಗಿದ್ದರೂ, ರಾಮ್ ಲಲ್ಲಾ ಟೆಂಟ್‌ನಲ್ಲಿ ಕುಳಿತಿದ್ದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಶ್ರೀ ರಾಮಮಂದಿರದ ಶಂಕುಸ್ಥಾಪನೆ ಮಾಡಿದರು. ಶ್ರೀರಾಮ ಜನ್ಮಭೂಮಿಯಲ್ಲಿ ರಾಮಲಲ್ಲಾನ ಭವ್ಯ ಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಶೀಘ್ರದಲ್ಲೇ ನಾವು ದೇವಾಲಯದಲ್ಲಿ ಶ್ರೀರಾಮನನ್ನು ನೋಡುತ್ತೇವೆ. ಈಗ ಈ ದುರಹಂಕಾರಿ ಮೈತ್ರಿಕೂಟ ಇಂಡಿಯಾ ಒಕ್ಕೂಟದಿಂದ ತಡೆಯಲು ಸಾಧ್ಯವಿಲ್ಲ.

ಕಾಂಗ್ರೆಸ್ ಸರ್ಕಾರ ಮತ್ತು ಇಂಡಿಯಾ ಒಕ್ಕೂಟ ಎಂಬ ದುರಹಂಕಾರದ ಮೈತ್ರಿಕೂಟವು 370 ನೇ ವಿಧಿಯನ್ನು ರಕ್ಷಿಸುತ್ತಿತ್ತು ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವರು ಹರಿಹಾಯ್ದರು. ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು 370 ನೇ ವಿಧಿಯನ್ನು ರದ್ದುಗೊಳಿಸಿದರು ಮತ್ತು ಜಮ್ಮು ಮತ್ತು ಕಾಶ್ಮೀರವನ್ನು ಭಾರತದೊಂದಿಗೆ ಶಾಶ್ವತವಾಗಿ ಜೋಡಿಸಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ದೇಶದ ಆರ್ಥಿಕತೆಯನ್ನು ಹತ್ತನೇ ಸ್ಥಾನದಿಂದ ಐದನೇ ಸ್ಥಾನಕ್ಕೆ ಏರಿಸಿದ್ದಾರೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆದು ಡಬಲ್ ಇಂಜಿನ್ ಸರ್ಕಾರವನ್ನು ರಚಿಸಿ.

Leave a Reply

Your email address will not be published. Required fields are marked *