ಮೈಸೂರು:22 ನವೆಂಬರ್ 2021
ನಂದಿನಿ
ಸ್ಕೋಡಾ ಆಟೋ ಇಂಡಿಯಾದ ನೂತನ ಶೋರೂಮ ಪ್ಯಾಲೇಸ್ ಸ್ಕೋಡಾ ಮೈಸೂರು ನಗರದ ಕೂರ್ಗಳ್ಳಿ ಇಂಡಸ್ಟ್ರಿಯಲ ಎಸ್ಟೇಟ್‌ನಲ್ಲಿ ಆರಂಭಗೊಂಡಿದೆ. ಈ ನೂತನ ೩ಎಸ್ (ಮಾರಾಟ,ಸೇವೆ,ಬಿಡಿಭಾಗಗಳು) ಸೌಲಭ್ಯದೊಂದಿಗೆ ಮೈಸೂರಿನಲ್ಲಿ ತನ್ನ ಉಪಸ್ಥಿತಿಯನ್ನು ಹೆಚ್ಚಿಸಲು ಮತ್ತು ಪ್ರದೇಶದಲ್ಲಿ ತನ್ನ ನೆಲೆಯನ್ನು ಭದ್ರಗೊಳಿಸಲು ಸ್ಕೋಡಾ ಆಟೋ ಇಂಡಿಯಾ ಉzಶಿಸಿದೆ. ಸ್ಕೋಡಾ ಪ್ಯಾಲೇಸ್ ಸ್ಕೋಡಾ ಆಟೋದ ಕಾರ್ಪೊರೇಟ ಅನನ್ಯತೆ ಮತ್ತು ವಿನ್ಯಾಸವನ್ನು ಹೊಂದಿದೆ. ಖ್ಯಾತ ಝೆಕ್ ಕಾರು ತಯಾರಿಕೆ ಕಂಪನಿಯಾಗಿರುವ ಸ್ಕೋಡಾ ತನ್ನ ಇಂಡಿಯಾ ೨.೦ ಯೋಜನೆಯಡಿ ೨೦೨೨ರ ವೇಳೆಗೆ ೨೨೫ ಸಂಪರ್ಕ ಕೇಂದ್ರಗಳಿಗೆ ತನ್ನ ಅಸ್ತಿತ್ವವನ್ನು ವಿಸ್ತರಿಸುವ ಗುರಿಯನ್ನು ಹೊಂದಿದೆ.
ಪ್ಯಾಲೇಸ್ ಸ್ಕೋಡಾ ಕೂರ್ಗಳ್ಳಿ ಕೈಗಾರಿಕಾ ಪ್ರದೇಶದ ಆಯಕಟ್ಟಿನ ಸ್ಥಳದಲ್ಲಿದ್ದು, ಪ್ರದೇಶದಾದ್ಯಂತದ ಗ್ರಾಹಕರು ಇಲ್ಲಿಗೆ ಸುಲಭವಾಗಿ ತಲುಪಬಹುದು. ನೂತನ ಶೋರೂಮ ೨,೫೦೮ ಚ.ಮೀ.ವಿಸ್ತೀರ್ಣದಲ್ಲಿ ಹರಡಿಕೊಂಡಿದ್ದು,ನಾಲ್ಕು ಕಾರುಗಳನ್ನು ಏಕಕಾಲಕ್ಕೆ ಪ್ರದರ್ಶಿಸಬಹುದಾಗಿದೆ. ವರ್ಕ್‌ಶಾಪ್ ಒಂಭತ್ತು ಬೇಗಳಿಂದ ಸಜ್ಜಿತಗೊಂಡಿದ್ದು,ವಾರ್ಷಿಕ ೩,೦೦೦ ವಾಹನಗಳಿಗೆ ಸರ್ವಿಸ್ ನೀಡುವ ಸಾಮರ್ಥ್ಯವನ್ನು ಹೊಂದಿದೆ.
ನೂತನ ಶೋರೂಮ ಉದ್ಘಾಟನೆಯ ಕುರಿತು ಮಾತನಾಡಿದ ಸ್ಕೋಡಾ ಆಟೋ ಇಂಡಿಯಾದ ಬ್ರಾಂಡ್ ನಿರ್ದೇಶಕ ಝಾಕ್ ಹಾಲಿಸ್ ಅವರು, ಕುಷಕ್‌ಮಾಡೆಲ್‌ನ ಬಿಡುಗಡೆಯೊಂದಿಗೆ ಭಾರತದಲ್ಲಿ ಸ್ಕೋಡಾ ಆಟೋ ಇಂಡಿಯಾದ ಅಭೂತಪೂರ್ವ ಬೆಳವಣಿಗೆಯನ್ನು ನಾವು ನೋಡುತ್ತಿzವೆ. ಇದು ನಮ್ಮ ಇಂಡಿಯಾ ೨.೦ ಕಾರ್ಯತಂತ್ರದ ಮೊದಲ ಹಂತವಾಗಿದೆ. ನಮ್ಮ ಮುಂಬರುವ ಸ್ಲಾವಿಯಾ ಮಾರುಕಟ್ಟೆಯಲ್ಲಿ ಸಂಚಲನೆಯನ್ನು ಮೂಡಿಸಲಿರುವ ಇನ್ನೊಂದು ಹೊಸ ಮಾಡೆಲ ಆಗಿದ್ದು, ಕುಷಕ್‌ನೊಂದಿಗೆ ಸೇರಿಕೊಂಡು ೨೦೨೨ರ ವೇಳೆಗೆ ನಮ್ಮ ವಾರ್ಷಿಕ ಮಾರಾಟವನ್ನು ದ್ವಿಗುಣಗೊಳಿಸಲು ನಮಗೆ ಸಾಧ್ಯವಾಗಿಸಲಿದೆ. ಪ್ರಬಲ ಉತ್ಪನ್ನಗಳೊಂದಿಗೆ ಸ್ಕೋಡಾ ಬ್ರಾಂಡ್‌ನ್ನು ದೇಶಾದ್ಯಂತ ಹೊಸ ಮತ್ತು ಉದಯೋನ್ಮುಖ ಮಾರುಕಟ್ಟೆಗಳಿಗೆ ತಲುಪಿಸುವ ಸ್ಪಷ್ಟ ಗುರಿಯನ್ನು ನಾವು ಹೊಂದಿzವೆ. ಇದರೊಂದಿಗೆ ಮಾಲಿಕತ್ವದ ಆನಂದವನ್ನು ಹೆಚ್ಚಿಸುವುದು ನಮ್ಮ ಬೆಳವಣಿಗೆ ಕಾರ್ಯತಂತ್ರಕ್ಕೆ ಮುಖ್ಯವಾಗಿದೆ ಮತ್ತು ನಮ್ಮ ನೆಟ್‌ವರ್ಕ್‌ನ್ನು ಹೆಚ್ಚಿಸಿಕೊಳ್ಳುವುದು ಈ ಗುರಿ ಸಾಧನೆಗೆ ಪೂರಕವಾಗಲಿದೆ. ಮೈಸೂರಿನಲ್ಲಿ ನೂತನ ಡೀಲರ್‌ಶಿಪ್‌ನ ಉದ್ಘಾಟನೆಯು ಈ ಯೋಜನೆಯ ಭಾಗವಾಗಿದೆ ಮತ್ತು ಪ್ಯಾಲೇಸ್ ಸ್ಕೋಡಾ ಜೊತೆಯಲ್ಲಿ ಪಾಲುದಾರಿಕೆಯು ನಮಗೆ ಹರ್ಷವನ್ನುಂಟು ಮಾಡಿದೆ. ಈ ಪ್ರದೇಶದಲ್ಲಿ ನಮ್ಮ ನೆಲೆಯನ್ನು ಭದ್ರಗೊಳಿಸಲು ನಾವು ಬಯಸಿzವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ಯಾಲೇಸ್ ಸ್ಕೋಡಾದ ಡೀಲರ್ ಪ್ರಿನಿಪಲ ಶ್ರೀಧರ ಪಿ.ಕೆ.ಅವರು, ಮೈಸೂರಿನಲ್ಲಿ ನಮ್ಮ ಮೊದಲಿನ ಶಾಖೆಯ ಬಳಿಕ ಸ್ಕೋಡಾ ಆಟೋ ಇಂಡಿಯಾದೊಂದಿಗೆ ಸಹಭಾಗಿತ್ವ ಮತ್ತು ನೂತನ ೩ಎಸ್ ಡೀಲರ್‌ಶಿಪ್ ಸೌಲಭ್ಯದ ಆರಂಭ ನಮಗೆ ಪ್ರತಿಷ್ಠೆಯ ವಿಷಯವಾಗಿದೆ. ಆಧುನಿಕ ವಾಸ್ತುಶಿಲ್ಪ ಮತ್ತು ಸುವ್ಯವಸ್ಥಿತ ವ್ಯವಹಾರ ಪ್ರಕ್ರಿಯೆಗಳು ಸ್ಕೋಡಾ ಆಟೋ ಉತ್ಪನ್ನಗಳ ಪ್ರಸ್ತುತಿಗೆ ಸೂಕ್ತ ಹಿನ್ನೆಲೆಯನ್ನು ಒದಗಿಸುತ್ತಿವೆ. ಸ್ಕೋಡಾ ಆಟೋದ ಜಾಗತಿಕ ಅತ್ಯುತ್ತಮ ಪರಿಪಾಠಗಳು ಮತ್ತು ಸ್ಥಳೀಯ ಗ್ರಾಹಕರ ಆದ್ಯತೆಯ ಕುರಿತು ನಮ್ಮ ತಿಳುವಳಿಕೆ ಗ್ರಾಹಕರ ಅನುಭವವನ್ನು ಹೆಚ್ಚಿಸುವಲ್ಲಿ ನಮಗೆ ನೆರವಾಗಲಿವೆ ಎಂದರು.
ಸುವ್ಯಸ್ಥಿತ ವ್ಯವಹಾರ ಸೌಲಭ್ಯಗಳೊಂದಿಗೆ
ಆಧುನಿಕ ಡೀಲರ್‌ಶಿಪ್ ಸೌಲಭ್ಯಗಳು
ಇಂಡಿಯಾ ೨.೦ ಯೋಜನೆಗೆ ಅನುಗುಣವಾಗಿ ಕಾರ್ಪೊರೇಟ ವಾಸ್ತುಶಿಲ್ಪ, ಕ್ರಿಯಾತ್ಮಕ ಒಳಾಂಗಣಗಳು ಮತ್ತು ತರ್ಕಬದ್ಧ ವ್ಯವಹಾರ ಪ್ರಕ್ರಿಯೆಗಳು ಒಟ್ಟಾರೆ ಗ್ರಾಹಕರ ಆನಂದಾನುಭವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿವೆ. ಶೋರೂಮ ವಿನ್ಯಾಸದ ವಾಸ್ತುಶಿಲ್ಪ ಪರಿಕಲ್ಪನೆಯು ‘ಸಿಂಪ್ಲಿ ಕ್ಲೆವರ್ ವಿಥ್ ಎ ಹ್ಯೂಮನ್ ಟಚ್’ಎಂಬ ಘೋಷಣೆಯಲ್ಲಿನ ಸ್ಕೋಡಾ ಆಟೋದ ತಾತ್ವಿಕತೆಯನ್ನು ಪ್ರತಿಬಿಂಬಿಸುತ್ತದೆ. ಶೋ ರೂಮ್‌ನ ವಾಸ್ತುಶಿಲ್ಪವು ಸ್ಪಷ್ಟ ಮತ್ತು ಸರಳ ಆಕಾರಗಳು, ಸಾಮರಸ್ಯದ ವರ್ಣ ಪರಿಕಲ್ಪನೆ,ಮಾಡ್ಯುಲರ್ ವಿನ್ಯಾಸ ವೈಶಿಷ್ಟಗಳು ಮತ್ತು ಆಧುನಿಕ ಬೆಳಕಿನ ಪರಿಕಲ್ಪನೆಯಿಂದ ಕೂಡಿದೆ.
ಸ್ಕೊಡಾ ಆಟೋ ಶೋರೂಮ್‌ಗಳ ಬಾಹ್ಯರೂಪಗಳು ಹಗಲು ಮತ್ತು ರಾತ್ರಿಯಲ್ಲಿ ಸ್ಪಷ,ಪಾರದರ್ಶಕ,ಆಧುನಿಕ ಮತ್ತು ಮುಕ್ತ ಎಂಬ ಸ್ಕೋಡಾ ಬ್ರಾಂಡ್‌ನ ಧ್ಯೇಯವನ್ನು ಪ್ರತಿಬಿಂಬಿಸುತ್ತವೆ.
ಸ್ಕೋಡಾ ಆಟೋದ ಸಾಬೀತಾಗಿರುವ ಸಾಮರ್ಥ್ಯವನ್ನು ಉಳಿಸಿಕೊಳ್ಳುವ ಜೊತೆಗೆ ಬ್ರಾಂಡ್‌ನ ಭಾವನಾತ್ಮಕ ಆಕರ್ಷಣೆಯನ್ನು ಹೆಚ್ಚಿಸಲು ಅಧಿಕ ಒತ್ತನ್ನು ಕಂಪನಿಯು ನೀಡುತ್ತದೆ. ಎಲ್ಲ ಪ್ರಮುಖ ಘಟಕಗಳು,ವ್ಯವಹಾರ ಪ್ರದೇಶಗಳು,ಗ್ರಾಹಕರ ವಲಯಗಳ ಅತ್ಯಾಧುನಿಕ ಮತ್ತು ತಾರ್ಕಿಕ ವ್ಯವಸ್ಥೆಗಳು ಮತ್ತು ಅತ್ಯಾಧುನಿಕ ತಂತ್ರeನದ ಬಳಕೆ ಈ ಬದ್ಧತೆಯನ್ನು ವ್ಯಕ್ತಪಡಿಸುತ್ತವೆ.
ಉತ್ತಮ ಗುಣಮಟ್ಟದ ವಸ್ತುಗಳು,ನೂತನ ವಿನ್ಯಾಸ ವೈಶಿಷ್ಟಗಳು,ಪರಿಣಾಮಕಾರಿ ಬೆಳಕಿನ ವ್ಯವಸ್ಥೆ,ವಾಸ್ತುಶಿಲ್ಪದ ಗ್ರಾಫಿಕ ಅಂಶಗಳು ಆಹ್ವಾನಿಸುವ ವಾತಾವರಣವನ್ನು ಸೃಷ್ಟಿಸುತ್ತವೆ. ತಾಜಾ ವರ್ಣಗಳು,ಸ್ಪಷ್ಟತೆ,ಮುಕ್ತತೆ ಮತ್ತು ಪಾರದರ್ಶಕತೆ ಇವು ಸ್ಕೋಡಾ ಆಟೋ ಶೋರೂಮ್‌ಗಳ ನೂತನ ಒಳಾಂಗಣಗಳ ಪ್ರಮುಖ ಅಂಶಗಳಾಗಿವೆ.