ಮೋಟಾರ್ ಬೈಕ್ ಕಳ್ಳರನ್ನ ಹೆಡೆಮುರಿ ಕಟ್ಟಿದ ಹುಣಸೂರು ಟೌನ್ ಕ್ರೈಂ ಪೊಲೀಸರು

ಹುಣಸೂರು:23 ನವೆಂಬರ್ 2021

ನಂದಿನಿ

ಹುಣಸೂರು ಪಟ್ಟಣದಲ್ಲಿ ಇತ್ತೀಚೆಗೆ ಮೋಟಾರ್ ಬೈಕ್ ಕಳ್ಳತನ ಮಾಡುತ್ತಿದ್ದ ಖದೀಮರನ್ನ ಹುಣಸೂರು ಟೌನ್ ಕ್ರೈಂ ಪೊಲೀಸರ ತಂಡ ಹೆಡೆಮುರಿ ಕಟ್ಟಿದೆ.

ದಿ:20 ರಂದು ಇಬ್ಬರು ಆರೋಪಿಗಳನ್ನು ಬಂಧಿಸಿ ಒಟ್ಟು 05 ಮೋಟಾರ್ ಬೈಕ್ ಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಮೈಸೂರು ಜಿಲ್ಲೆಯ ಎಸ್ಪಿ ಚೇತನ್ ಆರ್,ಎಎಸ್ಪಿ ಶಿವಕುಮಾರ್,ಹುಣಸೂರು ಪಟ್ಟಣ ಠಾಣೆಯ ಪಿ.ಐ ಸಿ.ವಿ ರವಿ ರವರ ಮಾರ್ಗದರ್ಶನದಲ್ಲಿ, ಪಿ.ಎಸ್.ಐ ಲತೇಶ್ ಕುಮಾರ್ ರವರ ನೇತೃತ್ವದಲ್ಲಿ ಠಾಣೆಯ ಅಪರಾಧ ಪತ್ತೆ ವಿಭಾಗದ ಸಿಬ್ಬಂದಿಗಳಾದ ಪ್ರಭಾಕರ, ಪ್ರಸಾದ್, ಇರ್ಫಾನ್, ಪುಟ್ಟನಾಯಕ, ಭರತೇಶ್ ಮತ್ತು ಜೀಪ್ ಚಾಲಕ ಸಿದ್ದರಾಜು ರವರುಗಳಿದ್ದ ತಂಡವು ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *