ಮೈಸೂರು:6 ಸೆಪ್ಟೆಂಬರ್ 2022
ನಂದಿನಿ ಮೈಸೂರು
ನಾಲ್ವಡಿ ಜಯಂತಿ ಮರೆತಿರುವ ಬಿಜೆಪಿ ಸರ್ಕಾರ
ಸಾವರ್ಕರ್ ಜಯಂತಿ ಮಾಡಿದ್ದಾಗಿದ್ದು ಮುಂದಿನ ದಿನಗಳಲ್ಲಿ ಗೋಡ್ಸೇ ಜಯಂತಿ ಮಾಡುತ್ತಾರೆ ಎಂದು ಇತಿಹಾಸ ತಜ್ಞ ಪ್ರೊ . ನಂಜರಾಜೇ ಅರಸ್ ಬಿಜೆಪಿ ಸರ್ಕಾದರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ಜಿಲ್ಲಾ ಉಸ್ತುವಾರಿ ಎಸ್ .ಟಿ.ಸೋಮಶೇಖರ್ ರವರ ಒಬ್ಬ ತಲಾ ಹರಟೆ.ಮೈಸೂರಿನ ಜನರಿಗೆ ಉಸ್ತುವಾರಿಯಾಗದೇ ಬಿಜೆಪಿಗೆ ಉಸ್ತುವಾರಿಯಾಗಿ ಕೆಲಸ ಮಾಡ್ತೀದ್ದಾರೆ.3 ತಿಂಗಳಾದರೂ ನಾಲ್ವಡಿರವರ ಜಯಂತಿ ಆಚರಣೆ ಮಾಡದಿರುವುದು ಖಂಡನೀಯ. ಇನ್ನೂ 7 ದಿನಗಳ ಒಳಗಾಗಿ ನಾಲ್ವಡಿ ಜಯಂತಿ ಆಚರಿಸದಿದ್ದರೇ 8 ನೇ ಕಲಾಮಂದಿರದ ಮುಂಭಾಗ ಸಾರ್ವಜನಿಕರೊಟ್ಟುಗೂಡಿ ಜಿಲ್ಲಾ ಉಸ್ತುವಾರಿ ಸಚಿವರಿಗೂ ಅಹ್ವಾನಿಸಿ ನಾಲ್ವಡಿ ಜಯಂತಿ ಆಚರಿಸುತ್ತೇವೆ ಎಂದರು.