ನಂದಿನಿ ಮೈಸೂರು
ಗುರುವೇ ಬ್ರಹ್ಮ, ಗುರುವೇ ವಿಷ್ಣು, ಗುರುವೇ ದೇವನಾದ ಮಹೇಶ್ವರ
ಗುರುವೇ ಸಾಕ್ಷಾತ್ ಪರಬ್ರಹ್ಮ. ಅಂತಹ ಗುರುಗಳಾದ ಬಿ.ಪಿ.ಎಸ್. ಅವರಿಗೆ ಗುರು ವಂದನೆ ಮಾಡಲಾಯಿತು.
ಹೌದು ಮೈಸೂರಿನಲ್ಲಿ 23 ವರ್ಷಗಳ ಬಳಿಕ ಪರಸ್ಪರ ಭೇಟಿಯಾಗಿ ತಮ್ಮ ನೆಚ್ಚಿನ ಗುರುಗಳಿಗೆ ಗುರುವಂದನೆ ಅರ್ಪಿಸಿದ ಜೆಎಸ್ಎಸ್ ಹೈಸ್ಕೂಲ್ ವಿಧ್ಯಾರ್ಥಿಗಳು
ಶಿಕ್ಷಕರ ದಿನಾಚರಣೆಯ ಹಿನ್ನೆಲೆಯಲ್ಲಿ ಜೆಎಸ್ಎಸ್ ಹೈಸ್ಕೂಲಿನ ತರಗತಿಯ ಉಪಾಧ್ಯಾಯರಾದ ಬಿ. ಪಂಚಾಕ್ಷರಿ ಸ್ವಾಮಿ ಅವರಿಗೆ ಗುರುವಂದನೆ ಅರ್ಪಿಸಬೇಕೆಂದು ತೀರ್ಮಾನಿಸಿದ ಜೆಎಸ್ಎಸ್ ಶಾಲೆಯ ಹಳೆಯ ವಿಧ್ಯಾರ್ಥಿಗಳು , ಇಭೇಟಿಯಾಗಿ ಮೈಸೂರಿನ ಚಾಮುಂಡಿಪುರಂ ನಲ್ಲಿರುವ ಪೂಜ್ಯ ಗುರುಗಳ ಮನೆಗೆ ತೆರಳಿ ಗುರುವಂದನೆ ಅರ್ಪಿಸಿ ಅಪೂರ್ವ ಕ್ಷಣಗಳಿಗೆ ಸಾಕ್ಷಿಯಾದರು ,
ಗುರುಗಳ ಜೊತೆಯಲ್ಲಿ ತಾಸುಗಟ್ಟಲೆ ಮಾತನಾಡುತ್ತ ಹಳೆಯ ದಿನಗಳನ್ನು ಮೆಲುಕು ಹಾಕಿದರು
ಇದೆ ಸಂಧರ್ಭದಲ್ಲಿ ಸಹಪಾಠಿಗಳಾದ ಮಹದೇವ ಪ್ರಸಾದ್ , ಚಂದ್ರಶೇಖರ್ ಮೂರ್ತಿ, ಶ್ರೀಕಂಠ, ಎಂ .ಕುಮಾರ ಸ್ವಾಮಿ, ನಾಗೇಶ್, ಲೋಹಿತ್ ಕುಮಾರ್ , ವೆಂಕಟೇಶ್ ಪ್ರಸಾದ್, ವಿಶ್ವನಾಥ್ ಪಾಲ್ಗೊಂಡಿದ್ದರು,
ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯ ವಾಗದ ಸ್ನೇಹಿತರು ಗುರುಗಳಿಗೆ ಕರೆ ಮಾಡಿ ವಂದಿಸಿದರು ..
ಒಟ್ಟಾರೆ ಶಿಕ್ಷಕರ ದಿನಾಚರಣೆ ದಿನ ನಡೆದ ಈ ಗುರುನಮನ ಕಾರ್ಯಕ್ರಮವು ಹಳೆಯ ಸಹಪಾಠಿ ಮಿತ್ರರ ಪುನರ್ಮಿಲನಕ್ಕೆ ಕಾರಣವಾಯಿತು.