ಮೈಸೂರು:4 ಅಕ್ಟೋಬರ್ 2021
ನ@ದಿನಿ
ನಂಜನಗೂಡು ತಹಶಿಲ್ದಾರರ ವರ್ಗಾವಣೆ ಖಂಡಿಸಿ ಅನುಭವ ಮಂಟಪ ವಿಚಾರ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಂಜನಗೂಡು ತಾಲೂಕು ಕಚೇರಿಯಿಂದ ಮೈಸೂರು ಜಿಲ್ಲಾಧಿಕಾರಿ ಕಚೇರಿವರಗೆ ಪಾದಯಾತ್ರೆ ನಡೆಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯುತ ಮಹಾಸಭಾ ಅಧ್ಯಕ್ಷ ಬಿ.ಮಹಾದೇವಪ್ಪ ಮಾತನಾಡಿ ಹುಲ್ಲಳ್ಳಿ ಹುಚ್ಚುಗಣಿ ಮಹಾದೇವಮ್ಮ ದೇವಸ್ಥಾನ ತೆರವುಗೊಳಿಸಿದ್ದಾರೆಂದು
ನಂಜನಗೂಡು ತಾಲ್ಲೂಕಿನ ತಹಶಿಲ್ದಾರ್ ಮೋಹನಕುಮಾರಿಯವರನ್ನ ವರ್ಗಾವಣೆ ಮಾಡಿದ್ದಾರೆ. ಸರ್ಕಾರ ಹಾಗೂ ಮೇಲಾಧಿಕಾರಿಗಳ ಆದೇಶ ಪಾಲಿಸಿರುವುದು ತಪ್ಪೇ, ರಾಜ್ಯದಲ್ಲಿ ಈ ವರೆಗೆ 196 ದೇವಸ್ಥಾನ ನೆಲ ಸಮ ಮಾಡಿದ್ದು, ಅಲ್ಲಿ ಇಲ್ಲದ ಕಾನೂನು ನಂಜನಗೂಡಿಗೆ ಮಾತ್ರ ಏಕೆ?. ಇಲ್ಲವಾದರೆ ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿ, ಪ್ರಾದೇಶಿಕ ಆಯುಕ್ತರು, ಚೀಫ್ ಸೆಕ್ರೆಟರಿ ರವರನ್ನು ಈ ಕ್ಷಣದಲ್ಲಿ ವರ್ಗಾವಣೆ ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಪಚ್ಚೆ ನಂಜುಂಡ ಸ್ವಾಮಿ, ವಿದ್ಯಾಸಾಗರ್, ಮಂಜುಕಿರಣ್,ಮಲ್ಲೇಶ್ ಚುಂಚನಹಳ್ಳಿ, ಮಂಜುಳ ಮಧು, ಅಕ್ಬರ್ ಅಲಿ ಸೇರಿದಂತೆ ಮತ್ತೀತರರು ಭಾಗಿಯಾಗಿದ್ದರು.