ಸಿನಿಮಾ ನಿರ್ಮಾಣಕ್ಕಿಳಿದ ನನ್ಬನ್ ಗ್ರೂಪ್….ನನ್ಬನ್ ಎಂಟರ್ಟೈನ್ಮೆಂಟ್ ಶುರು

ನಂದಿನಿ ಮೈಸೂರು

*ಸಿನಿಮಾ ನಿರ್ಮಾಣಕ್ಕಿಳಿದ ನನ್ಬನ್ ಗ್ರೂಪ್….ನನ್ಬನ್ ಎಂಟರ್ಟೈನ್ಮೆಂಟ್ ಶುರು*

*ಮನರಂಜನಾ ಕ್ಷೇತ್ರದತ್ತ ನನ್ಬನ್ ಗ್ರೂಪ್…ನನ್ಬನ್ ಎಂಟರ್ಟೈನ್ಮೆಂಟ್ ಶುರು*

ಉದ್ಯಮ ವಲಯದಲ್ಲಿ ಭಾರೀ ಹೆಸರು ಮಾಡಿರುವ ನನ್ಬನ್ ಗ್ರೂಪ್ ಮನರಂಜನಾ ಲೋಕಕ್ಕೆ ಹೊಸ ಹೆಜ್ಜೆ ಇಟ್ಟಿದೆ. ನನ್ಬನ್ ಗ್ರೂಪ್ ವತಿಯಿಂದ ನನ್ಬನ್ ಎಂಟರ್ಟೈನ್ಮೆಂಟ್ ಎಂಬ ನಿರ್ಮಾಣ ಸಂಸ್ಥೆ ಪ್ರಾರಂಭವಾಗಿದೆ. ಆಗಸ್ಟ್ 3ರಂದು ಚೆನ್ನೈನಲ್ಲಿ ಅದ್ಧೂರಿಯಾಗಿ ನನ್ಬನ್ ಎಂಟರ್ಟೈನ್ಮೆಂಟ್ ಉದ್ಘಾಟನಾ ಕಾರ್ಯಕ್ರಮ ನೆರವೇರಿತು. ನನ್ಬನ್ ಗ್ರೂಪ್ ಮುಖ್ಯಸ್ಥ ನರೈನ್ ರಾಮಸ್ವಾಮಿ, ನನ್ಬನ್ ಗ್ರೂಪ್ ಸಹ ಸಂಸ್ಥಾಪಕ ಮಣಿವಣ್ಣನ್, ನನ್ಬನ್ ಗ್ರೂಪ್ ಸಂಸ್ಥಾಪಕ ಗೋಪಾಲ ಕೃಷ್ಣನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ನನ್ಬನ್ ಗ್ರೂಪ್ ಭಾರತದ ರಾಯಭಾರಿ ನಟ ಆರಿ ಅರ್ಜುನನ್ ನನ್ಬನ್ ಸಂಸ್ಥೆ ಒಡನಾಟದ ಬಗ್ಗೆ ಮಾಹಿತಿ ಹಂಚಿಕೊಂಡರು.

ನಂತರ ಮಾತನಾಡಿದ ನನ್ಬನ್ ಗ್ರೂಪ್ ಸಂಸ್ಥಾಪಕ ಗೋಪಾಲ ಕೃಷ್ಣನ್ ನಿಮ್ಮೆಲ್ಲರ ಸಹಭಾಗಿತ್ವ ಮತ್ತು ಸಹಕಾರ ಇಲ್ಲದಿದ್ದರೆ ಈ ಕಾರ್ಯಕ್ರಮ ಇಷ್ಟು ಅದ್ಧೂರಿಯಾಗಿ ನಡೆಯುತ್ತಿರಲಿಲ್ಲ.

“ನನ್ಬನ್ ಗ್ರೂಪ್ ಹಲವಾರು ಸಾಮಾಜಿಕ ಕಾರಣಗಳಿಗಾಗಿ ಸಹಾಯ ಹಸ್ತವನ್ನು ನೀಡುತ್ತಿದೆ. ನನ್ಬನ್ ಗ್ರೂಪ್ ಅನ್ನು ಪ್ರಾರಂಭಿಸಲು ಮುಖ್ಯ ಕಾರಣ ಸ್ನೇಹ. ನಾವು ಯಾವ ರೀತಿಯ ಜೀವನವನ್ನು ನಡೆಸುತ್ತೇವೆ ಮತ್ತು ನಾವು ಎಲ್ಲಿದ್ದೇವೆ ಎಂಬುದರ ಹೊರತಾಗಿಯೂ, ಸ್ನೇಹ ಸುತ್ತಮುತ್ತಲಿನವರಿಗೆ ಪ್ರೀತಿಯಿಂದ ಬೇಷರತ್ತಾದ ಸಹಾಯವನ್ನು ನೀಡುತ್ತದೆ. ನಮ್ಮಲ್ಲಿ, ಸ್ನೇಹ ಜಾತಿ, ಮತ, ಸಮುದಾಯ ಅಥವಾ ಲಿಂಗದ ಆಧಾರದ ಮೇಲೆ ಜನರ ನಡುವೆ ವ್ಯತ್ಯಾಸವನ್ನು ಹೊಂದಿಲ್ಲ ಎಂದರು.

ನನ್ಬನ್ ಗ್ರೂಪ್ ಒಂದು ಲಾಭರಹಿತ ಸಂಸ್ಥೆಯಾಗಿದೆ. ನಾವೀಗ ಈ ಗುಂಪಿನಿಂದ ನನ್ಬನ್ ಎಂಟರ್‌ಟೈನ್‌ಮೆಂಟ್ ಎಂಬ ಹೊಸ ಉದ್ಯಮ ಪ್ರಾರಂಭಿಸಿದ್ದೇವೆ. ಈ ಸಂಸ್ಥೆಯು ಸಿನಿಮಾ ನಿರ್ಮಾಣದತ್ತ ಗಮನಹರಿಸುತ್ತದೆ.‌ ಮೊದಲು ತಮಿಳು ಸಿನಿಮಾ ನಿರ್ಮಾಣ, ನಂತರ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣ ಗುರಿ ಹೊಂದಿದ್ದೇವೆ. . ಹೊಸದಾಗಿ ಪ್ರಾರಂಭಿಸಲಾದ ನನ್ಬನ್ ಎಂಟರ್ಟೈನ್ಮೆಂಟ್ ನಡಿ ಪ್ರತಿಭಾವಂತರಿಗೆ ಅವಕಾಶಗಳನ್ನು ನೀಡುತ್ತೇವೆ. ಈ ವೇದಿಕೆ ಮೂಲಕ ಅವರು ತಮ್ಮ ಪ್ರತಿಭೆ ಪ್ರದರ್ಶಿಸಬಹುದು ಎಂದರು.

ನನ್ಬನ್ ಗ್ರೂಪ್ ಸಿನಿಮಾ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಸಜ್ಜಾಗಿದೆ. ನನ್ಬನ್ ಎಂಟರ್ಟೈನ್ಮೆಂಟ್ ಮೂಲಕ ಯುವ ಪ್ರತಿಭೆಗಳ‌ ಕನಸಿಗೆ ವೇದಿಕೆ ನಿರ್ಮಿಸಿದೆ. ಸದಾ ಅಭಿರುಚಿ ಸಿನಿಮಾಗಳನ್ನು ನಿರ್ಮಿಸುವ ಗುರಿ ಹೊಂದಿದೆ ನನ್ಬನ್ ಎಂಟರ್ಟೈನ್ಮೆಂಟ್.

Leave a Reply

Your email address will not be published. Required fields are marked *