ಮೈಸೂರು:2 ಆಗಸ್ಟ್ 2022
ನಂದಿನಿ ಮೈಸೂರು
ಸನಾತನ ಹಿಂದೂ ಧರ್ಮದಲ್ಲಿ ಪ್ರತಿಯೊಂದು ಹಬ್ಬಗಳ ಆಚರಣೆಗೆ ವಿಶೇಷವಾದ ಹಿನ್ನೆಲೆ ಇದೆ. ಹಬ್ಬಗಳ ಆಚರಣೆ ಪ್ರಶ್ನೆ ಮಾಡುವುದು ಸರಿಯಲ್ಲ ಎಂದು ಅರ್ಚಕರ ಸಂಘದ ಅಧ್ಯಕ್ಷರು ಹಾಗೂ ಪಂಚಮುಖಿ ದೇವಸ್ಥಾನದ ಪ್ರಧಾನ ಅರ್ಚಕರು ವಿದ್ವಾನ್ ಕೃಷ್ಣಮೂರ್ತಿ ತಿಳಿಸಿದರು.
ನಾಗ ಪಂಚಮಿ ಅ೦ಗವಾಗಿ
ಇರ್ವಿನ್ ರಸ್ತೆಯಲ್ಲಿರುವ
ಪಂಚಮುಖಿ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ನಾಗರ ಮೂರ್ತಿ ಗಳಿಗೆ ವಿಶೇಷ ಪೂಜೆ ಸಲ್ಲಿಸಿ ಹಾಲೆರೆದು ಪೂಜಿ ಸಿದ ನಂತರ ಮಾತನಾಡಿದ ಅವರು,
ಶ್ರಾವಣ ಮಾಸದ ಮೊದಲ ವಾರದಲ್ಲಿ ಆಚರಿಸುವ ನಾಗರ ಪಂಚಮಿ ಹಬ್ಬವು ಅಣ್ಣ ತಂಗಿಯರ ಬಾಂಧವ್ಯವನ್ನು ಬೆಸೆಯುವ ಹಬ್ಬ ವೆಂದು ಕರೆಯಲಾಗುತ್ತದೆ ,ಬೆಳಗ್ಗೆಯಿಂದ ಸಂಜೆಯವರೆಗೂ ಮಹಿಳೆಯರು ಮಕ್ಕಳು ನಾಗರ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ ,
ನಮ್ಮ ಪೂರ್ವಜರು, ಗುರುಗಳು ಹಾಕಿಕೊಟ್ಟಪರಂಪರೆಯನ್ನು ಆಚರಣೆಯನ್ನುಪಾಲಿಸುವುದುಮುಂದುವರಿಸುವುದು ನಮ್ಮ ಜವಾಬ್ದಾರಿ ಎಂದರು. ನಾಗದೇವರಿಗೆ ಹಾಲೆರೆಯುವುದನ್ನು ನಮ್ಮ ಪರಂಪರೆ. ಹಿ೦ದೂ ಧರ್ಮೀಯರಿಗೆ ಪೂಜೆ ಮಾಡುವುದು ಗೊತ್ತು. ಅದರಂತೆ ಅಸಹಾ ಯಕರಿಗೆ ನಿರ್ಗತಿಕರಿಗೆ ಸಹಾಯ ಮಾಡುವುದು ಗೊತ್ತು. ಕೆಲವರು ಹಬ್ಬಗಳ ಆಚರಣೆಯ ಪ್ರಶ್ನೆ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಉದ್ಯಮಿ ನಾಗಭೂಷಣ್ ದಂಪತಿ ಸಹ ಹಾಜರಿದ್ದರು.