ಮರ ಕಡಿದವರ ಜಾಡು ಹಿಡಿಯುತ್ತಿದ್ದ ಕಾಡುಗಳ್ಳರ ಸಿಂಹಸ್ವಪ್ನವಾಗಿದ್ದ ರಾಣಾ ನಿಧನ

ಚಾಮರಾಜನಗರ: 2 ಆಗಸ್ಟ್ 2022

ನಂದಿನಿ ಮೈಸೂರು

ಮರ ಕಡಿದವರ ಜಾಡು ಹಿಡಿಯುತ್ತಿದ್ದ
ಕಾಡುಗಳ್ಳರ ಸಿಂಹಸ್ವಪ್ನವಾಗಿದ್ದ ರಾಣಾ ಶ್ವಾನ ಕೊನೆಯುಸಿರೆಳೆದಿದೆ.

ರಾಣ ಸ್ವಾನಕ್ಕೆ 10 ವರ್ಷ ವಯಸ್ಸಾಗಿತ್ತು. ಸೋಮವಾರ ರಾತ್ರಿ ವಯೋಸಹಜದಿಂದ ಅಸುನೀಗಿದೆ.ಬಂಡೀಪುರ ಸಫಾರಿ ಕೌಂಟರ್ ಸಮೀಪ ರಾಣಾ ಪಾರ್ಥಿವ ಶರೀರ ಇರಿಸಲಾಗಿದ್ದು, ಗೌರವ ಸಮರ್ಪಣೆ ಅರ್ಪಿಸಲಾಗಿದೆ.ನಂತರ ಅಂತ್ಯಸಂಸ್ಕಾರ ನೆರವೇರಲಿದೆ.

ರಾಣಾ ಯಾರು ಗೊತ್ತಾ?

ರಾಣಾ ಜರ್ಮನ್ ಶೆಫರ್ಡ್ ಜಾತಿಯ ಶ್ವಾನವಾಗಿದ್ದು, ಮಧ್ಯಪ್ರದೇಶದಲ್ಲಿ 2 ವರ್ಷ ತರಬೇತಿ ಪಡೆದಿರುವ ಸಖತ್ ಶಾರ್ಪ್ ಆಗಿದೆ. ಪ್ರಕಾಶ್ ಎಂಬವರು ಈ ರಾಣಾನನ್ನು ನೋಡಿಕೊಳ್ಳುತ್ತಿದ್ದರು. ಬಳಿಕ ಕಾಳ, ನಾಗೇಂದ್ರ ಎಂಬುವರು ಶ್ವಾನದ ಮೆಂಟರ್ ಆಗಿದ್ದರು. ಇವರನ್ನು ಬಿಟ್ಟು ಬೇರಿನ್ಯಾರ ಮಾತನ್ನು ರಾಣಾ ಕೇಳ್ತಿರಲಿಲ್ಲ ಮತ್ತು ಬೇರೆಯವರು ನೀಡಿದ ತಿ‌ನಿಸನ್ನು ಸಹ ತಿನ್ನುತ್ತಿರಲಿಲ್ಲ.ಈ ಸೂಪರ್ ಡಾಗ್.

ಅರಣ್ಯ ಇಲಾಖೆಯ ಹೆಮ್ಮೆಯಾಗಿದ್ದ ರಾಣಾ

ರಾಣಾ ಸಾಮಾನ್ಯವಾದ ಶ್ವಾನ ಆಗಿರಲಿಲ್ಲ. ಕಳ್ಳ ಬೇಟೆಗಾರರ ಪಾಲಿಗೆ ಸಿಂಹ ಸ್ವಪ್ನವಾಗಿದ್ದ ರಾಣಾ ಹುಲಿ ಸೆರೆ ಕಾರ್ಯಾಚರಣೆಯಲ್ಲೂ ಸೈ ಎನಿಸಿಕೊಂಡಿದ್ದ. ಹಲವು ಕಳ್ಳತನ ಪ್ರಕರಣ ಭೇಧಿಸುವಲ್ಲಿ ರಾಣಾನ ಪಾತ್ರಕೂಡ ದೊಡ್ಡದು. ಕೇವಲ ಬಂಡೀಪುರದಲ್ಲಿ ಮಾತ್ರವಲ್ಲ ತಮಿಳುನಾಡಿನ ಮಧುಮಲೈ ಅರಣ್ಯ ಪ್ರದೇಶದಲ್ಲೂ ಹುಲಿ‌ ಕಾರ್ಯಾಚರಣೆಯಲ್ಲಿಯೂ ರಾಣಾ ಭಾಗಿಯಾಗದ್ದ. ಇಂತಹ ಧೈರ್ಯಶಾಲಿ ರಾಣಾನನ್ನು ಕಳೆದುಕೊಂಡ ಅರಣ್ಯ ಇಲಾಖೆ ಸಿಬ್ಬಂದಿಗಳು ಕಂಬನಿ ಮಿಡಿದಿದ್ದಾರೆ.

Leave a Reply

Your email address will not be published. Required fields are marked *