ಮೈಸೂರು:3 ಫೆಬ್ರವರಿ 2022
ನಂದಿನಿ ಮೈಸೂರು
ಡಾ.ಬಿ ಆರ್ ಅಂಬೇಡ್ಕರ್ ಮತ್ತು ಸಂವಿಧಾನಕ್ಕೆ ಅಪಚಾರ ಮಾಡಿರುವ ರಾಯಚೂರು ಜಿಲ್ಲಾ ಸತ್ರ ನ್ಯಾಯಾಧೀಶನ ವಿರುದ್ಧ ಕ್ರಮವಹಿಸದ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಯ ವಿರುದ್ಧ ಫೆ.7 ರಂದು ಮೈಸೂರು ಬಂದ್ ಬೆಂಬಲಿಸಲು ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ಜಂಟಿ ಸುದ್ದಿಗೋಷ್ಠಿ ನಡೆಸಿ ಮನವಿ ಮಾಡಿದೆ.
ರಾಯಚೂರಿನ ಜಿಲ್ಲಾ ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನಗಡ 13 ನೇ ಗಣರಾಜ್ಯೋತ್ಸವ ಆಚರಣೆ ಸಂದರ್ಭದಲ್ಲಿ ಅಂಬೇಡ್ಕರ್ ಭಾವಚಿತ್ರವನ್ನು ತೆಗೆಯುವ ತನಕ ಮಾಡುವುದಿಲ್ಲವೆಂದು ಉದ್ಧಟತನದಿಂದ ವರ್ತಿಸಿ ಅಂಬೇಡ್ಕರ್ ಮತ್ತು ಸಂವಿಧಾನಕ್ಕೆ ಅವಮಾನ ಮಾಡಿರುವ ಬಗ್ಗೆ ವಾರ , ಕಳೆದರೂ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿರುವ ರಾಜ್ಯ ಸರ್ಕಾರದ ಧೋರಣೆ ಖಂಡನಾರ್ಹ.ಫೆ7ರಂದು ಟೌನ್ ಹಾಲ್ ಮುಂಭಾಗದಲ್ಲಿ ಸಂಜೆ 5 ರವರೆಗೆ ಮೈಸೂರು ಬಂದ್ ನಡೆಯಲಿದೆ. ಮೈಸೂರು ಬಂದ್ ಯಶಸ್ವಿಗೆ ಸಂಘ ಸಂಸ್ಥೆಗಳು, ಮೈಸೂರಿಗರು ಸಹಕರಿಸುವಂತೆ ಕೆ.ಎಸ್.ಶಿವರಾಮು,ಶಾಂತರಾಜು,ದ್ಯಾವಪ್ಪ ನಾಯಕ,ಭಾಸ್ಕರ್ ಸೇರಿದಂತೆ ಸಮಿತಿಯ ಸದಸ್ಯರು ಮನವಿ ಮಾಡಿದರು.