ಮೈಸೂರು:25 ಸೆಪ್ಟೆಂಬರ್ 2021
ನ@ದಿನಿ
ಗೊತ್ತಿದ್ದೋ ಗೊತ್ತಿಲ್ಲದೇ ಆತುರ ನಿರ್ಧಾರದಲ್ಲಿ ತಪ್ಪು ಮಾಡಿ ಶಿಕ್ಷೇ ಅನುಭವಿಸುತ್ತಿದ್ದೀರೀ.ಮುಂದಿನ ದಿನಗಳದಾರು ಯಾವುದೇ ಸಮಾಜಘಾತುಕ ಚಟುವಟಿಕೆಗಳಿಂದ ದೂರ ಉಳಿದು ಒಳ್ಳೇಯವಾರಾಗಿ ಜೀವನ ನಡೆಸಿ ಎಂದು ಕಮೀಷನರ್ ಡಾ.ಚಂದ್ರಗುಪ್ತರವರು ರೌಡಿಗಳಿಗೆ ನೀತಿ ಪಾಠ ಮಾಡಿದ್ದಾರೆ.
ಹೌದು ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಸಮಿಪಿಸುತ್ತಿದ್ದಂತೆ
ಮೈಸೂರಿನ ಸಿವಿಆರ್ ಮೈದಾನಕ್ಕೆ ಆಗಮಿಸುವಂತೆ ಪೋಲಿಸರು ಮನೆ ಮನೆಗೆ ನೋಟಿಸ್ ನೀಡಿತ್ತು. ಮೈಸೂರಿನ ಎಲ್ಲಾ ಠಾಣೆಯ ರೌಡಿಗಳು ಫೀಲ್ಡ್ಗೆ ಎಂಟ್ರೀ ಕೊಟ್ಟಿದ್ರು.
1) ದೇವರಾಜ ಪೋಲಿಸ್ ಠಾಣೆಯಲ್ಲಿ 90 ಜನ ರೌಡಿ.
2) ಕೆ.ಆರ್. ಪೋಲಿಸ್ ಠಾಣೆಯಲ್ಲಿ 120 ಜನ ರೌಡಿ.
3)ಎನ್.ಆರ್ ಪೋಲಿಸ್ ಠಾಣೆ 213 ಜನ ರೌಡಿ
ಒಟ್ಟು : 423 ರೌಡಿಗಳು ಪೆರೇಡ್ ನಲ್ಲಿ ಹಾಜರಿದ್ದರು.
ಪ್ರಕರಣ ದಾಖಲಾದ ನಂತರ ಮತ್ತೆ ಹಳೆ ಚಾಳಿ ತೆಗೆದಿರುವ ರೌಡಿಗಳನ್ನ ಮಾತನಾಡಿಸಿದ ಚಂದ್ರಗುಪ್ತರವರು ಮೊಬೈಲ್ ಫೋನ್,ಮನೆ ವಿಳಾಸ ಬದಲಾವಣೆ ಆಗಿದ್ದೀಯಾ.ಜೀವನಕ್ಕೆ ಏನು ಕೆಲಸ ಮಾಡಿಕೊಂಡಿದ್ದೀರಾ ಎಂದು ವಿಚಾರಿಸಿದ್ದಾರೆ.ನಂತರ ಯಾವುದೇ ಗಲಾಟೆ,ಗದ್ದಲ ಮಾಡಬಾರದು.ಜನರಿಗೆ ಹಿಂಸಿಸಬಾರದು.ಸಮಾಜ ಘಾತುಕ ಕೆಲಸಕ್ಕಿಳಿದರೇ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರೌಡಿಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ರೌಡಿ ಪೆರೇಡ್ ನಲ್ಲಿ ಡಿಸಿಪಿ ಪ್ರದೀಪ್ ಗುಂಟಿ,ಎಲ್ಲಾ ಠಾಣೆಯ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ಭಾಗಿಯಾಗಿದ್ದರು.