ಸ್ಪಂದನ ಟ್ರಸ್ಟ್ ವತಿಯಿಂದ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮೈ ಡ್ರೀಮ್ ಬುಕ್ ಕಾರ್ಯಕ್ರಮ

ಮೈಸೂರು :10 ಆಗಸ್ಟ್ 2022

ನಂದಿನಿ ಮೈಸೂರು

ಸ್ಪಂದನ ಟ್ರಸ್ಟ್ ವತಿಯಿಂದ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮೈ ಡ್ರೀಮ್ ಬುಕ್ ಕಾರ್ಯಕ್ರಮ ಅಡಿಯಲ್ಲಿ ಒಂದು ಲಕ್ಷ ವಿದ್ಯಾರ್ಥಿಗಳಿಗೆ ತಲಾ ಆರರಂತೆ ಆರು ಲಕ್ಷ ಲಕ್ಷ ನೋಟ್‌ಬುಕ್ ವಿತರಿಸುವ ಗುರಿ ಹೊಂದಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷರಾದ ಅಭಿನಂದನ್ ಅರಸ್ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದರು. ಈ ಹಿಂದೆಯೂ ಸಹಾ ಸರ್ಕಾರಿ ಶಾಲೆಗಳ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಟ್ರಸ್ಟ್ ನೋಟ್‌ಪುಸ್ತಕ ವಿತರಿಸಿದೆ. ಈಗಲೂ ಸಹಾ ಇದೇ ರೀತಿ ವಿತರಿಸುವುದಲ್ಲದೆ, ಬಡ ವಿದ್ಯಾರ್ಥಿಗಳಿಗೆ ಆರೋಗ್ಯ ತಪಾಸಣೆ, ತೀರಾ ನಿರ್ಗತಿಕ ಮಕ್ಕಳ ವಿದ್ಯಾಭ್ಯಾಸ ಜವಾಬ್ದಾರಿ ತೆಗೆದುಕೊಳ್ಳಲಾಗುತ್ತಿದೆ. ಹೀಗಾಗಿ ದಾನಿಗಳು ನೆರವಾಗಬೇಕೆಂದು ಮನವಿ ಮಾಡಿದರು.

ಸುದ್ದಿಗೋಷ್ಟಿಯಲ್ಲಿ ಟ್ರಸ್‌ನ ಆರ್ಯನ್ ಗಂಧದಗುಡಿ, ಸುಷ್ಮಾ, ಮನು ಹೊಯ್ಸಳ ಹಾಜರಿದ್ದರು.

Leave a Reply

Your email address will not be published. Required fields are marked *